ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿ
ಶಿಗ್ಗಾಂವಿ: ಪ್ರತಿಯೊಬ್ಬರು ಮಾಡುವ ಕೆಲಸದಲ್ಲಿ ಕರ್ತವ್ಯ ಪಾಲನೆ ಹಾಗೂ ಪ್ರಾಮಾಣಿಕತೆಗೆ ಹೆಚ್ಚು ಜನ ಮಾನ್ಯತೆ ದೊರೆಯಲಿದೆ. ಆದರೆ, ಮಾಡುವ ಕೆಲಸದಲ್ಲಿ ಯಾವುದೇ ತಾರತಮ್ಯಕ್ಕೆ ಅವಕಾಶ ನೀಡಬಾರದು ಎಂದು ನ್ಯಾಯಾದೀಶ ಜಿ. ಕುಮಾರ ಹೇಳಿದರು.
ಪಟ್ಟಣದ ನ್ಯಾಯಾಲಯ ಆವರಣದಲ್ಲಿ ನಡೆದ ಬಿಳ್ಕೋಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ನ್ಯಾಯ ಬಯಸಿ ಬರುತ್ತಿರುವ ಕಕ್ಷಿದಾರರಿಗೆ ನ್ಯಾಯಯುತ ಬೇಡಿಗೆ ಈಡೇರಿಸುವ ಮೂಲಕ ಜನಸೇವೆ ಮಾಡುವುದು ಅಗತ್ಯ. ಅದರಿಂದ ಜನರಿಗೆ ನ್ಯಾಯಾಂಗದ ಬಗ್ಗೆ ಹೆಚ್ಚಿನ ಗೌರವ ಹುಟ್ಟಲು ಸಾಧ್ಯವಿದೆ. ಅದರಿಂದ ವಾದ ಮಾಡಿದ ತೃಪ್ತಿ ಹಾಗೂ ಜನಮನದ ಹಾರೈಕೆ ಪಡೆಯಲು ಸಾಧ್ಯವಿದೆ ಎಂದ ಅವರು, ಈವರೆಗೆ ಸಲ್ಲಿಸಿದ ಸೇವಾ ಕೆಲವು ಘಟನೆಗಳನ್ನು ಕುರಿತು ಸ್ಮರಿಸಿದರು. ಅಲ್ಲದೇ ಸೇವೆ ಮಾಡುವಲ್ಲಿ ಸಹಕರಿಸಿದ ಸರ್ವ ನ್ಯಾಯವಾದಿಗಳಿಗೆ ಕೃತಜ್ಞೆ ಸಲ್ಲಿಸಿದರು.
ತಾಲೂಕು ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಕೆ. ಅಕ್ಕಿ ಅಧ್ಯಕ್ಷತೆ ವಹಿಸ್ದಿದರು. ಕೊಡಲಮಠ, ಎ.ಎ. ಪರೋಕಿ, ಜಿ.ಐ. ಸಜ್ಜನಗೌಡ್ರ, ಜಿ.ಎಸ್. ಅಂಕಲಕೋಟಿ, ಎಫ್.ಎಸ್. ಕೋಣಿನವರ, ಎ.ಎ. ಗಂಜೇನವರ, ವಿ.ಎಸ್. ಜೋಶಿ ಮತ್ತಿತರರು ಉಪಸ್ಥಿತರಿದ್ದರು. ಎಸ್.ಪಿ. ಗಂಜಿಗಟ್ಟಿ ಸ್ವಾಗತಿಸಿದರು. ಬಸವರಾಜ ಕೂಲಿ ನಿರೂಪಿಸಿದರು. ಸಿ.ಎಸ್. ಅಂಗಡಿ ವಂದಿಸಿದರು.