ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಇಂದಿನಿಂದ ವಿವಿಧ ಧಾರ್ಮಿಕ ಕಾರ್ಯಕ್ರಮ

Vishwanath S
Updated On : 19 May 2013, 11:35 am

ಕನ್ನಡಪ್ರಭ ವಾರ್ತೆ, ಹಿರೇಕೆರೂರು, ಮೇ 18
ಬ್ರಾಹ್ಮಣ ಸಮಾಜದ ತಾಲೂಕು ಘಟಕ ಮೇ 19ರಿಂದ 24ರ ವರಗೆ ಕೋಟೆ ದತ್ತಾತ್ರೆಯ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಏರ್ಪಡಿಸಿದೆ.
ಶ್ರೀ ಮಾರುತಿ ಗುರೂಜಿ ಬಂಗಾರ ಮುಕ್ಕಿ ಸಾರಥ್ಯದಲ್ಲಿ ಶ್ರೀ ಮಾಲತೇಶ ದೇವರ ಪ್ರತಿಷ್ಠಾಪನೆ, ಮಲ್ಲಾರಿ ಹೋಮ, ಶ್ರೀ ಚಿಕ್ಕಯ್ಯ ಮತ್ತು ದೊಡ್ಡಯ್ಯ ಕಾರ್ಯಕ್ರಮಗಳು ಜರುಗಲಿವೆ. ಮೇ 19ರ ಸಂಜೆ 5ಕ್ಕೆ ಮಾರುತಿ ಗುರೂಜಿ ಅವರಿಗೆ ಪೂರ್ಣ ಕುಂಭ ಸ್ವಾಗತ, ಬಳಿಕ ರಾಜಬೀದಿಯಲ್ಲಿ ಮಾಲತೇಶ ವಿಗ್ರಹದ ಮೆರವಣಿಗೆ ನಡೆಯಲಿದೆ.
ಸಂಜೆ 7ಕ್ಕೆ ಗುರುಗಳ ಪಾದುಕೆ ಪೂಜೆ, ಪ್ರಸಾದ ಶುದ್ಧಿ, ವಾಸ್ತು ರಕ್ಷೋಜ್ಞ ಹೋಮ ಅಧಿವಾಸ ಪೂಜೆ, ಹೋಮ ನಡೆಯಲಿವೆ. 20ರ ಬೆಳಗ್ಗೆ 8ಕ್ಕೆ ಶ್ರೀಗುರುಪಾದುಕೆ ಪೂಜೆ, ಕಳಸ ಸ್ಥಾಪನೆ, ಕಳಸಾಧಿವಾಸ ಹೋಮ, ನಂತರ ಮಾಲತೇಶ ದೇವರ ಪ್ರತಿಷ್ಠಾಪನೆ, ಧರ್ಮಸಭೆ, ಪ್ರಸಾದ ವಿತರಣೆ ನಡೆಯಲಿವೆ. ಪಾಂಡುರಂಗ ಎಂ. ನಾಡಿಗೇರ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ವೈ.ಡಿ. ಮಧೂರಕರ, ಶಂಕರರಾವ್ ಶೇಷಗಿರಿರಾವ್ ನಾಡಿಗೇರ ಭಾಗವಹಿಸುವರು. 21ರ ಸಂಜೆ 6ಕ್ಕೆ ಹೊಸಬಾಳೆಯ ರಮೇಶ ನಾಡಿಗ್ ಹಾಸ್ಯ ಸಂಜೆ ಕಾರ್ಯಕ್ರಮ ನಡೆಸಿಕೊಡುವರು. ಬಳಿಕ ಸಂಗೀತ ಕಾರ್ಯಕ್ರಮ ಧಾರವಾಡದ ಗಾಯಕರಾದ ಫಯಾಜ ಖಾನ್ ಡಾ. ರವಿಕಿರಣ ನಾಕೋಡ, ಮುಖ್ಯ ಅತಿಥಿಗಳಾಗಿ ಆರ್.ಜಿ. ಭಟ್, ಶ್ರೀ ಫಕ್ಕೀರಪ್ಪ ತಾಂದಳೆ, ಪಾಲ್ಗೊಳ್ಳುವರು.
22ರ ಬೆಳಗ್ಗೆ 9ಕ್ಕೆ ಮಲ್ಲಾರಿ ಹೋಮ, ತೀರ್ಥ ಪ್ರಸಾದ ವಿತರಣೆ, ಸಂಜೆ 6ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ. ಮುಖ್ಯ ಅತಿಥಿಗಳಾಗಿ ರಮೇಶ ಆರ್. ನಾಡಿಗೇರ, ರಾಮಚಂದ್ರರಾವ್ ನಾಡಿಗೇರ ಭಾವಹಿಸುವರು. 23ರ ಮಧ್ಯಾಹ್ನ 12ಕ್ಕೆ ಚಿಕ್ಕಯ್ಯ, ಶತರುದ್ರಾಭಿಷೇಕ, 24ರ ಬೆಳಗ್ಗೆ 9ಕ್ಕೆ ದೊಡ್ಡಯ್ಯ ಕಾರ್ಯಕ್ರಮ ನಂತರ ಅನ್ನಸಂತರ್ಪಣೆ ನಡಯಲಿದೆ. ಕಮಲಾಬಾಯಿ ಗುಡ್ಡುರಾವ್ ನಾಡಿಗೇರ್ ಮತ್ತು ಮಕ್ಕಳು ಅನ್ನಸಂತರ್ಪಣೆ ನಡೆಸಿಕೊಡುವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement