ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಶ್ರೀ ವಾಸವಿ ಆತ್ಮಗೌರವದ ಸಂಕೇತ

Lingaraj Badiger
Updated On : 20 May 2013, 11:17 am

-ವಿಶೇಷ ವರದಿ
ಹಿರೇಕೆರೂರು: ಶ್ರೀ ವಾಸವಿ ಜಯಂತಿ ಶಕ್ತಿಯನ್ನು ವಿರೋಧಿಸಿ ತನ್ನನ್ನು ತಾನು ಬಲಿದಾನ ಮಾಡಿಕೊಂಡ ವೀರಕನ್ಯೆ. ಸಮಸ್ತ ಜನಾಂಗಕ್ಕೆ ಮಾದರಿಯಾಗುವ ವ್ಯಕ್ತಿತ್ವವನ್ನು ಹೊಂದಿರುವ ಶ್ರೀ ವಾಸವಿ ಜಯಂತಿಯನ್ನು ಮೇ 20ರಂದು ಆಚರಿಸಲಾಗುತ್ತದೆ.
'ಗಂಗೇಚ ಯಮುನೇಚೈವ ಗೋದಾವರಿ ಸರಸ್ವತಿ ನರ್ಮದೆ ಸಿಂಧು ಕಾವೇರಿ ಆಲೇಸ್ಮಿನಂ ಸನ್ನಿಧಿಂ ಕುರುಂ' ಪ್ರಾತಃ ಸ್ಮರಣೀಯವಾದ ಪುಣ್ಯ ನದಿಗಳಲ್ಲಿ ಒಂದಾದ ತನ್ನ ಉದ್ದಗಲದಿಂದ ಆಂಧ್ರದ ಜೀವನಾಡಿಯಾದ ಗೋದಾವರಿ ನದಿ ಮಹಾನ್ ಕ್ಷೇತ್ರಗಳ ತೊಟ್ಟಿಲೂ ಹೌದು.
ಪವಿತ್ರ ಸ್ಥಳ: ಪವಿತ್ರವಾದ ಗೋದಾವರಿಯ ಸಪ್ತ ಶಾಖೆಗಳಲ್ಲಿ ಪಶ್ಚಿಮಾಭಿಮುಖವಾಗಿ ಹರಿಯುತ್ತಿರುವ ಗೌತಮಿ ನದಿ ತಟವು ವೇದಕಾಲದಿಂದಲೂ ಋಷಿವರ್ಯರ ನೆಲೆವೀಡಾಗಿ ಯಜ್ಞ-ಯಾಗಾದಿಗಳ ಕರ್ಮಭೂಮಿಯಾಗಿ ಫುಲಸ್ಯಾದಿ ಮಹಾಮುನಿಗಳ ಮಂತ್ರದ್ರಷ್ಟಾರರ ದಿವ್ಯ ದೃಷ್ಟಿಯ ಸಾನ್ನಿಧ್ಯವಾಗಿ, ಸ್ಕಂದನ ತಪೋಭೂಮಿಯಾಗಿ, ಋಷಿವರ್ಯರ ತಪ- ಭಗವದ್ ಸಾಕ್ಷತ್ಕಾರವಾದ ಪವಿತ್ರ ಸ್ಥಳವಾಗಿದೆ.
ತೀರದಲ್ಲಿದ್ದ ಪೆನುಗೊಂಡ ಎಂಬ ರಾಜ್ಯವನ್ನು ಕಲ್ಲಾರ ಎಂಬ ರಾಜ ಆಳುತ್ತಿದ್ದ. ಆತ ವೃದ್ದನಾದ ಬಳಿಕ ತನ್ನ ರಾಜ್ಯವನ್ನು ಮಗನಾದ ಕುಸುಮ ಶ್ರೇಷ್ಠಗೆ ವಹಿಸಿ ವಾನಪ್ರಸ್ಥಾನಶ್ರಮಕ್ಕೆ ಹೋದನು. ಆಗ ರಾಜ್ಯದ ಭಾರವನ್ನು ದಂಪತಿಗಳಾದ ಕುಸುಮಶ್ರೇಷ್ಠಿ ಮತ್ತು ಕುಸುಮಾಂಬೆಯರು ಹೊತ್ತರು.
ಶಿವಭಕ್ತರು: ಇಬ್ಬರು ಪೂರ್ವದ ಹೆಸರು ವಾಸವ ಮತ್ತು ಕಾವೇರಿ. ಇಬ್ಬರೂ ಅಪ್ರತಿಮ ಶಿವಭಕ್ತರಾದುದರಿಂದ ಶಿವನ ಪೂಜೆಗಾಗಿಯೇ ವಿಶೇಷ ತೋಟವೊಂದನ್ನು ನಿರ್ಮಿಸಿ ತಾವೇ ನಿರ್ವಹಣೆ ಮಾಡುತ್ತ ನಿತ್ಯ ಪೂಜೆಗಾಗಿ ಹೂವುಗಳನ್ನು ತಾವೇ ಸಂಗ್ರಹಿಸಿ ಶಿವನ ಪೂಜೆ ಮಾಡುತ್ತಿದ್ದರು. ಹೀಗಾಗಿ ಕುಸುಮಶ್ರೇಷ್ಠಿ ಮತ್ತು ಕುಸುಮಾಂಬೆ ಎಂದು ಕರೆಯಲಾಯಿತು.
ಶಿವಭಕ್ತೆ: ವಾಸವಿ ತಂದೆಯಂತೆ ಶಿವಭಕ್ತಳಾಗಿದ್ದಳು. ರೂಪವತಿಯಾದ ವಾಸವಿಗೆ ಪೂರ್ವ ಜನ್ಮದ ಕ್ರಿ.ಶ. 11ನೇ ಶತಮಾನದಲ್ಲಿ ಗೋದಾವರಿ ಹಲವಾರು ವರ್ಷಗಳಿಂದ ಸಂತಾನ ಭಾಗ್ಯವಿಲ್ಲದ ಗಂಡು ಮಗುವಿಗೆ ವಿರೂಪಾಕ್ಷ ಸಂಸ್ಕಾರದಂತೆ ಎಲ್ಲ ಸಕಲ ವಿದ್ಯಾ ಪಾರಂಗತಳಾಗಿ ಬೆಳೆದಳು. ಮದುವೆಯ ಪ್ರಸ್ತಾಪ ಬಂದಾಗ ತಾನು ಯಜ್ಞ ಮುಖದಿಂದ ಜನಿಸಿದ್ದರಿಂದ ಯಜ್ಞ ಮುಖದಿಂದ ಜನಿಸಿದ ವ್ಯಕ್ತಿಯನ್ನೇ ಮದುವೆಯಾಗುವುದಾಗಿ ತಿಳಿಸಿದಳು. ಆದರೆ, ಯಜ್ಞ ಮುಖದಿಂದ ಜನಿಸಿದ ವ್ಯಕ್ತಿಗಳು ಇಲ್ಲದ್ದರಿಂದ ಆ ಶಿವನೇ ತನ್ನ ಪತಿಯೆಂದು ಭಕ್ತಿಯಿಂದ ಆರಾಧಿಸತೊಡಗಿದಳು.
ಶಿವನನ್ನೇ ವರಿಸುವುದಾಗಿ ಹಠ ಹಿಡಿದಳು. ರಾಜಗುರು ಭಾಸ್ಕರಾಚಾರ್ಯರ ಮಾರ್ಗದರ್ಶನದಂತೆ ಪಟ್ಟಣದ ಹೊರ ವಲಯದಲ್ಲಿ ವಿಶೇಷ ತೋಟವೊಂದರಲ್ಲಿ ದೇವಸ್ಥಾನ ನಿರ್ಮಿಸಿ ವಾಸವಿಗೆ ಅನುಕೂಲ ಮಾಡಿಕೊಡಲಾಯಿತು.
ಮದುವೆಗೆ ರಾಜನ ಹಠ: ಅಧೀನರಾಜ ವಿಷ್ಣುವರ್ಧನ ವಿಜಯಯಾತ್ರೆಯನ್ನು ಕೈಗೊಂಡನು. ಪೆನುಗೊಂಡದ ಹೊರ ವಲಯದಲ್ಲಿ ವಾಸವಿಯನ್ನು ಕಂಡ ರಾಜ ವಿಷ್ಣುವರ್ಧನ ಮೋಹಗೊಂಡು ವಾಸವಿಯನ್ನು ಮದುವೆಯಾಗುವುದಾಗಿ ಹಠ ಹಿಡಿಯುತ್ತಾನೆ. ಆದರೆ, ವೈಶ್ಯ ಕುಲದ 714 ಗೋತ್ರದವರಲ್ಲಿ 612 ಗೋತ್ರದವರು ರಾಜನೊಂದಿಗೆ ಸಂಬಂಧ ಬೆಳೆಸಲು ಒಪ್ಪಿಗೆ ಸೂಚಿಸುತ್ತಾರೆ. ಉಳಿದ 102 ಗೋತ್ರದವರು ವಿರೋಧ ವ್ಯಕ್ತಪಡಿಸುತ್ತಾರೆ.
ಅಗ್ನಿ ಪ್ರವೇಶ: ಗೋತ್ರದವರು ತಮ್ಮ ಕುಲವನ್ನು ರಕ್ಷಿಸಲು ಯಾವ ತ್ಯಾಗಕ್ಕಾದರೂ ಸಿದ್ಧರಾಗಬೇಕು ಎಂದು ತಿಳಿಸಿದರು. ಈ ಎಲ್ಲ ವಿಷಯಗಳನ್ನು ತನ್ನ ಗೂಢಚಾರರಿಂದ ತಿಳಿದುಕೊಂಡ ರಾಜ ವಿಷ್ಣುವರ್ಧನ ವಾಸವಿ ತನಗೆ ದೊರಕುತ್ತಿಲ್ಲವೆಂದು ಕುಪಿತಗೊಂಡನು. ಪೆನುಗೊಂಡೆಯ ಮೇಲೆ ದಾಳಿ ಮಾಡಿ ವಾಸವಿ ಪಡೆಯಲು ಹವಣಿಸಿದನು. ಕುಸುಮಶ್ರೇಷ್ಠಿ ಮತ್ತು ವಿರೂಪಾಕ್ಷರು ವಿಷ್ಣುವರ್ಧನನ ಜೊತೆಗೆ ಯುದ್ದಕ್ಕೆ ತೊಡಗಿದರು. ಇವರ ಮಧ್ಯೆ ಭಾರಿ ಯುದ್ಧವೇ ನಡೆಯಿತು. ಇತ್ತ ಕಡೆ ಯುದ್ದ ನಡೆಯುತ್ತಿದ್ದರೆ, ಅತ್ತ ಕಡೆ ವಾಸವಿ ಅಗ್ನಿ ಈ ಸಂದರ್ಭದಲ್ಲಿ ಕುಸುಮಶ್ರೇಷ್ಠಿಯ ಪ್ರವೇಶ ಮಾಡಲು ಸಿದ್ದತೆಯಲ್ಲಿ ತೊಡಗಿದ್ದಳು. ಅರಮನೆಯ ಮುಂದೆ ವಿಶಾಲ ಬಯಲಿನಲ್ಲಿ ಭಾಸ್ಕರಾಚಾರ್ಯರ ನೇತೃತ್ವದಲ್ಲಿ ಅಗ್ನಿಗೆ ನೀಡುವ ಆಯುಸ್ಸನ್ನು ಕೈಯಲ್ಲಿ ಹಿಡಿದುಕೊಂಡು ವಾಸವಿಯ ತನ್ನ ದಿವ್ಯ ವಿಶ್ವರೂಪವನ್ನು ತೋರಿಸಿದಳು.
ಧರ್ಮದ ಮಹತ್ವ ಸಾರಿ ಹೇಳಿದ ವಾಸವಿ ತನ್ನ ಜೀವನದ ಗುರಿಯನ್ನು ವಿವರಿಸಿ ಎಲ್ಲರೆದುರು ಅಗ್ನಿಗೆ ಧುಮುಕಿ ಸಾವಿಗೀಡಾಗುತ್ತಾಳೆ. ವಿಜಯದ ಕಹಳೆ ಹೊತ್ತು ಬಂದ ಕುಸುಮಶ್ರೇಷ್ಠಿ ಮತ್ತು ವಿರುಪಾಕ್ಷ ರಾಜರು ಅರಮನೆಗೆ ಬಂದಾಗ ವಾಸವಿ ಅಗ್ನಿ ಪ್ರವೇಶ ಮಾಡಿದ ವಿಷಯ ತಿಳಿಯುತ್ತದೆ. ಇದರಿಂದ ಬಹು ದುಃಖಿತರಾದ ಕುಸುಮಶ್ರೇಷ್ಠಿ ದಂಪತಿಗಳು ರಾಜ್ಯದ ಭಾರವನ್ನು ಮಗನಿಗೆ ವಹಿಸಿ, ತನ್ನ ಜೊತೆಗೆ 102 ಗೋತ್ರದ ದಂಪತಿಗಳು ಅಗ್ನಿ ಪ್ರವೇಶ ಮಾಡುತ್ತಾರೆ.
ತನ್ನ ಕುಲದ ಗೌರವ ಹಾಗೂ ನ್ಯಾಯಕ್ಕಾಗಿ ತನ್ನನ್ನೇ ತಾನು ಬಲಿದಾನ ಮಾಡಿಕೊಂಡ ವಾಸವಿ ಸಮಸ್ತ ಜನಾಂಗಕ್ಕೆ ಮಾದರಿಯಾಗಿ ನಿಂತಿದ್ದಾಳೆ. ನ್ಯಾಯ-ಅನ್ಯಾಯ ಲೆಕ್ಕಿಸದ ಉನ್ಮತ್ತ ಶಕ್ತಿಯ ವಿರುದ್ಧ ಪ್ರತಿಭಟಿಸಿದ ವೀರಕನ್ಯೆ ವಾಸವಿಯ ಜಯಂತಿಯನ್ನು 20ರಂದು ಆಚರಿಸಲಾಗುತ್ತಿದೆ. ಸಮಸ್ತ ವಿಶ್ವದಲ್ಲಿ ಆಚರಿಸುವ ಈ ದಿನ ಜನಾಂಗಕ್ಕೆ ಒಂದು ದಿವ್ಯ ಸಂದೇಶ ಸಾರುತ್ತಿದೆ.
ಯುದ್ದಭೂಮಿಯಲ್ಲಿ ವಿಷ್ಣುವರ್ಧನ ಪವಿತ್ರ ಕನ್ಯೆಯಾಗಿ, ಪರಮೇಶ್ವರನನ್ನೇ ಸೋಲಿಸಿದವಳು ವಾಸವಿಯಾಗಿದ್ದಾಳೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement