ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಸಚಿವ ದಿನೇಶ್‌ಗೆ ಸನ್ಮಾನ

Lingaraj Badiger
Updated On : 21 May 2013, 11:24 am

ಶಿಗ್ಗಾಂವಿ: ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಆದ್ಯತೆ ನೀಡುವದರ ಮೂಲಕ ಅಭಿವೃದ್ಧಿ ಪಥದತ್ತ ಕೊಂಡೊಯ್ಯಬೇಕು ಎಂದು ರಾಜ್ಯ ಎಸ್‌ಟಿ ಘಟಕದ ಪ್ರಧಾನ ಕಾರ್ಯದರ್ಶಿ ಪ್ರಕಾಶ ಹಾದಿಮನಿ ಮನವಿ ಮಾಡಿ ಹೇಳಿದರು.
ಆಹಾರ ಮತ್ತು ನಾಗರಿಕ ಸರಬುರಾಜು ನೂತನ ಸಚಿವರಾದ ದಿನೇಶ ಗುಂಡುರಾವ್‌ಗೆ ಅಭಿನಂದಿಸಿ ಮಾತನಾಡಿದರು. ಯುವ ಮುಖಂಡರಾದ ವಿದ್ಯಾಧರ ಸುಂಕದ, ಬಸವರಾಜ ಟಿ. ಹಾವೇರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಮೇಶ ತಳವಾರ ಸೇರಿದಂತೆ ಹಲವರು ಮುಖಂಡರು ಇದ್ದರು.

ಬ್ಯಾಡಗಿಯಲ್ಲಿ ವಾಸವಿ ಜಯಂತಿ ಆಚರಣೆ
ಬ್ಯಾಡಗಿ: ಅಹಿಂಸೆಯ ಪ್ರತೀಕಳಾದ ವೈಷ್ಣವ ಧರ್ಮದ ಪ್ರತಿಪಾದಕಿ ವಾಸವಿ (ಕನ್ನಿಕಾ ಪರಮೇಶ್ವರಿ) ಯುದ್ಧ ಪರಂಪರೆಗಳಿಂದ ವಿನಾಶವಾಗುತ್ತಿದ್ದ ಮಾನವ ಸಂಕುಲ ಕಾಪಾಡುವ ನಿಟ್ಟಿನಲ್ಲಿ ಯಶಸ್ವಿಯಾಗಿದ್ದಾಳೆ ಎಂದು ಆರ್ಯವೈಶ್ಯ ಸಮಾಜದ ಮುಖಂಡ ಲಕ್ಷ್ಮೀನಾರಾಯಣ ಮೇಲಗಿರಿ ಹೇಳಿದರು.
ವಾಸವಿ ಜಯಂತಿ ಅಂಗವಾಗಿ ಸೋಮವಾರ ಆರ್ಯವೈಶ್ಯ ಸಮಾಜದ ಆಶ್ರಯದಲ್ಲಿ ಪಟ್ಟಣದ ದೊಡ್ಡ ಆಂಜನೇಯ ದೇವಸ್ಥಾನದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಯಂತಿ ಅಂಗವಾಗಿ ಆರ್ಯವೈಶ್ಯ ಸಮಾಜದ ಸುಮಂಗಲೆಯರಿಂದ ಕುಡಿಯುವ ಹೊಂಡದಿಂದ ಮಾರುತಿ ದೇವಸ್ಥಾನದ ಆವರಣದವರೆಗೆ ಪೂರ್ಣಕುಂಭಗಳ ಮೆರವಣಿಗೆ ಜರುಗಿತು.
ಬಳಿಕ ವಾಸವಿ ಮಾತೆ ತೊಟ್ಟಿಲೋತ್ಸವ ಹಾಗೂ ಕುಂಕುಮಾರ್ಚನೆ ಜರುಗಿತು. ಸಂಜೆ ಅಲಂಕೃತಗೊಂಡ ಪಲ್ಲಕ್ಕಿಯಲ್ಲಿ ವಾಸವಿ ದೇವಿ ಶಿಲಾಮೂರ್ತಿಯನ್ನು ಸಕಲ ವಾದ್ಯ ವೈಭವಗಳೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಯಿತು. ರಾಧಾಕೃಷ್ಣ ರಟ್ಟಿಹಳ್ಳಿ, ಪರುಶರಾಮ ಮೇಲಗಿರಿ, ಸುರೇಶ ಮೇಲಗಿರಿ, ಕೃಷ್ಣಯ್ಯ ಶೆಟ್ಟಿ, ರಂಗಣ್ಣ ಗುತ್ತಲ, ಜಗದೀಶ ಅಗಡಿ, ರಾಘವೇಂದ್ರ ರಟ್ಟಿಹಳ್ಳಿ, ಗೋಪಾಲಕೃಷ್ಣ ಶೆಟ್ಟಿ, ಆರ್.ಎಸ್. ಬಿಜಾಪುರ, ಕೃಷ್ಣಪ್ಪ ಅಗಡಿ, ಶ್ರೀನಿವಾಸ ಅಗಡಿ, ನಾಗಾರ್ಜುನ ರಟ್ಟಿಹಳ್ಳಿ, ವೆಂಕಣ್ಣ ಆನೆಗೊಂದಿ, ವಾಸವಿ ಮಹಿಳಾ ಮಂಡಳದ ಸದಸ್ಯರಾದ ದೀಪಾ ಶೆಟ್ಟರ, ಶೀಲಾ ಮೇಲಗಿರಿ, ಜಯಮ್ಮ ಅಗಡಿ, ಲತಾ ಶೆಟ್ಟರ, ಶಾಂತಮ್ಮ ರಟ್ಟಿಹಳ್ಳಿ, ಸುಜಾತಾ ರಟ್ಟಿಹಳ್ಳಿ, ಭಾರತಿ ಉಮಾಪತಿ, ವಿಜಯಲಕ್ಷ್ಮಿ ಉಮಾಪತಿ, ಇನ್ನಿತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement