ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಸಚಿವ ಸ್ಥಾನ ಕೈವಾಡ ತಿಳಿಯದಾಗಿದೆ: ಕೋಳಿವಾಡ

Lingaraj Badiger
Updated On : 21 May 2013, 11:23 am

ಕನ್ನಡಪ್ರಭ ವಾರ್ತೆ, ರಾಣಿಬೆನ್ನೂರು, ಮೇ 20
43 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಏಳ್ಗೆಗಾಗಿ ಹಗಲಿರುಳೆನ್ನದೆ ದುಡಿದಿರುವ ಹಾಗೂ ರಾಜ್ಯ ಕಾಂಗ್ರೆಸ್ ಶಾಸಕರಲ್ಲಿ ಹಿರಿಯವನಾದ ನನಗೆ ಸಿದ್ದರಾಮಯ್ಯನವರ ಸಚಿವ ಸಂಪುಟದಲ್ಲಿ ಮಂತ್ರಿ ಸ್ಥಾನ ತಪ್ಪಲು ಯಾರ ಕೈವಾಡವಿದೆ ಎಂಬುದು ಹಾಗೂ ಮಂತ್ರಿ ಸ್ಥಾನ ಕೈ ತಪ್ಪಲು ಕಾರಣವೆಂಬುದು ನನಗೆ ತಿಳಿಯದಾಗಿದೆ ಎಂದು ರಾಣಿಬೆನ್ನೂರು ಶಾಸಕ ಕೆ.ಬಿ. ಕೋಳಿವಾಡರು ತಮಗಾಗಿರುವ ನೋವನ್ನು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದುರ್ದೈವಿ ರಾಜಕಾರಣಿ: ಕಳೆದ 43 ವರ್ಷಗಳಿಂದ ಅಖಂಡ ಧಾರವಾಡ ಜಿಲ್ಲೆ ಹಾಗೂ ರಾಜ್ಯದ ಮೂಲೆ ಮೂಲೆಗಳಲ್ಲಿನ ಹಳ್ಳಿ ಮತ್ತು ಪಟ್ಟಣಗಳಿಗೆ ಸಂಪರ್ಕಿಸಿ ಕಾಂಗ್ರೆಸ್ ಪಕ್ಷದ ಎಳ್ಗೆಗಾಗಿ ಹಗಲಿರುಳೆನ್ನದೆ ದುಡಿದಿದ್ದೇನೆ. ರಾಜ್ಯ ಕಾಂಗ್ರೆಸ್ ಶಾಸಕರಲ್ಲಿ ಮತ್ತು ಮುಖಂಡರಲ್ಲಿ ಹಿರಿಯ ನಾಯಕನೆಂಬ ಕ್ಯಾತಿಗೆ ಪಾತ್ರವಾಗಿರುವ ನನಗೆ ಸಿದ್ದರಾಮಯ್ಯನವರ ಸಚಿವ ಸಂಪುಟದಲ್ಲಿ ಮುಂತ್ರಿ ಸ್ಥಾನ ಕೈತಪ್ಪಲು ಯಾರ ಷಡ್ಯಂತ್ರವಿದೆ ಎಂಬುದು ತಿಳಿಯದಾಗಿದೆ. ಕಾರಣ ನಾನೊಬ್ಬ ದುರ್ದೈವಿ ರಾಜಕಾರಣಿ ಎಂಬುವದರಲ್ಲಿ ಸಂದೇಹವಿಲ್ಲ.
ತಿಳಿಯದ ಮರ್ಮ: 1972ರಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷದಿಂದ ಶಾಸಕನಾಗಿ ಆಯ್ಕೆಯಾದ ನಾನು 2013ರಲ್ಲಿ ನಡೆದ ಚುನಾವಣೆಯಲ್ಲಿ 5ನೇ ಬಾರಿಗೂ ಕಾಂಗ್ರೆಸ್ ಪಕ್ಷದಿಂದ ಶಾಸಕನಾಗಿ ಆಯ್ಕೆಯಾಗಿದ್ದು, ರಾಜ್ಯಾದ್ಯಂತ ಆಯ್ಕೆಯಾಗಿರುವ 121 ಶಾಸಕರಲ್ಲಿ ಅನೇಕರು 1983 ನಂತರ ಶಾಸಕರಾದವರಾಗಿದ್ದು, ಅಂಥವರಿಗೆ ಮಂತ್ರಿ ಸ್ಥಾನವನ್ನು ನೀಡಿ ಹಿರಿಯವನಾದ ನನ್ನನ್ನು ಕಡೆಗಣಿಸಲು ಕಾರಣವೇನು ಯಾರ ಷಡ್ಯಂತ್ರವಿದೆ ಎಂಬುದು ತಿಳಿಯದಾಗಿದೆ ಎಂದರು.
43 ವರ್ಷಗಳಿಂದ ಅಪ್ಪಟ ಕಾಂಗ್ರೆಸ್ ಕಾರ್ಯಕರ್ತನಾಗಿರುವ ನನ್ನ ಮೈಯಲ್ಲಿ ಹರಿಯುತ್ತಿರುವ ಹನಿ ಹನಿ ರಕ್ತವು ಕಾಂಗ್ರೆಸ್ ಕಾಂಗ್ರೆಸ್ ಎಂದು ಪಟಿಸುತ್ತಿದ್ದು, ಇನ್ನು ಮುಂದಾದರು ಸಿದ್ಧರಾಮಯ್ಯನವರು ನನಗೆ ಸಚಿವ ಸ್ಥಾನ ನೀಡುತ್ತಾರೆಂಬ ಭರವಸೆಯಲ್ಲಿಯೇ ಶಾಸಕನಾಗಿ ತಾಲೂಕಿನ ಅಭಿವೃದ್ಧಿಗಾಗಿ ಚಿಂತನೆಯನ್ನು ಕಾರ್ಯಪ್ರವೃತ್ತನಾಗಿದ್ದು, ನನ್ನ ಕರ್ತವ್ಯದಲ್ಲಿ ನಾನು ಮುಂದುವರಿಯುತ್ತೇನೆ ಎಂದು ಕೆ.ಬಿ. ಕೋಳಿವಾಡ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement