ಮಳೆ: ಶೀಟ್ ಬಿದ್ದು ಮೂವರಿಗೆ ಗಾಯ
ಶಿಗ್ಗಾಂವಿ: ವಿಪರೀತ ಗಾಳಿ, ಮಳೆಗೆ ಕೆಲವು ಮನೆಗಳ ಸಿಮೆಂಟ್ ಶೀಟ್ ಹಾರಿ ಹೋಗಿ, ಮನೆಯೊಳಗಿದ್ದ ಮೂವರು ಗಾಯಗೊಂಡಿಡು, ರು. 2 ಲಕ್ಷಕ್ಕೂ ಅಧಿಕ ಮೌಲ್ಯದ ಆಸ್ತಿ-ಪಾಸ್ತಿ ಹಾನಿಯಾದ ಘಟನೆ ತಾಲೂಕಿನ ಶ್ಯಾಡಂಬಿ ಗ್ರಾಮದಲ್ಲಿ ಸೋಮವಾರ ಸಂಜೆ ಜರುಗಿದೆ. ಶ್ಯಾಡಂಬಿ ಗ್ರಾಮದ ಶೇಖವ್ವ ಶೇಖಪ್ಪ ಹಿರಿಯಪ್ಪನವರ, ನೇತ್ರಾವತಿ ಹಾಗೂ ಪ್ರಭಾವತಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಶೇಖಪ್ಪ ಮಡಿವಾಳಪ್ಪ ಹಿರಿಯಪ್ಪನವರ ಎಂಬುವರಿಗೆ ಸೇರಿದ ಮನೆಯ ಶೀಟ್ಗಳು ಮುರಿದು ಬಿದ್ದು, ದುರ್ಘಟನೆ ಸಂಭವಿಸಿದೆ. ಶಾಸಕ ಬಸವರಾಜ ಬೊಮ್ಮಾಯಿ ಭೇಟಿ ನೀಡಿ ಪರಿಶೀಲಿಸಿ, ಪರಿಹಾರದ ಭರವಸೆ ನೀಡಿದ್ದಾರೆ.