ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಸಮರ್ಪಕ ನೀರೊದಗಿಸಲು ಆಗ್ರಹ

Rashmi Kasaragodu
Updated On : 22 May 2013, 11:51 am

ಕನ್ನಡಪ್ರಭ ವಾರ್ತೆ, ಹಾನಗಲ್ಲ, ಮೇ 21
ಅಧಿಕಾರಿಗಳ, ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಆನೆಕೆರೆ ಕಾಮಗಾರಿ ವಿಳಂಬವಾಗಿದೆ. ಮಳೆಗಾಲ ಆರಂಭವಾಗಿದ್ದು ಕಾಮಗಾರಿ ಶೀಘ್ರ ಮುಗಿಸುವಂತೆ ಹಾಗೂ ಹಾನಗಲ್ಲ ನಗರಕ್ಕೆ 5 ದಿನಕ್ಕೊಮ್ಮೆ ಕುಡಿವ ನೀರು ಒದಗಿಸುವಂತೆ ಒತ್ತಾಯಿಸಿ ಪುರಸಭೆಯ ಕೆಜೆಪಿ ಸದಸ್ಯರು ಸಣ್ಣ ನೀರಾವರಿ ಇಲಾಖೆ ಹಾಗೂ ಪುರಸಭೆ ಅಧಿಕಾರಿಗಳಿಗೆ ಮನವಿ ನೀಡಿದರು.
ಮಂಗಳವಾರ, ನಗರದಲ್ಲಿ ಪುರಸಭೆ ಕೆಜೆಪಿ ಸದಸ್ಯರು ಅಧಿಕಾರಿಗಳಿಗೆ ಮನವಿ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಆನೆಕೆರೆ ಕಾಮಗಾರಿ ಮಂದಗತಿಯಲ್ಲಿ ಸಾಗಿದೆ. ಇದರಿಂದ ಕೆರೆಯಲ್ಲಿ ನೀರು ಸಂಗ್ರಹ ಆಗದೆ ನಗರಕ್ಕೆ ಕುಡಿವ ನೀರು ಒದಗಿಸಲು ತೊಂದರೆಯಾಗಲಿದೆ. ಈವರೆಗೂ ಕೆರೆಯ ತೂಬು(ಬದು)ಗಳನ್ನು ಕಟ್ಟಿಲ್ಲ. ಈ ತೂಬುಗಳನ್ನು ಕೂಡಲೇ ಸರಿಪಡಿಸಿದಿದ್ದರೆ ಕೆರೆಯಲ್ಲಿ ನೀರು ನಿಲ್ಲುವುದಿಲ್ಲ. ಇದರಿಂದ ಕುಡಿವ ನೀರಿನ ತೊಂದರೆ ಇನ್ನೂ ಹೆಚ್ಚಾಗಲಿದೆ. ಕೂಡಲೇ ಕಾಮಗಾರಿ ಪೂರ್ಣಗೊಳಿಸದಿದ್ದರೆ ಬೀದಿಗಿಳಿದು ಹೋರಾಟ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.
ಹಾನಗಲ್ಲ ಜನತೆಗೆ ಕುಡಿವ ನೀರು ಒದಗಿಸಲು ಬೇಕಾದ ಎಲ್ಲ ಸೌಲಭ್ಯಗಳನ್ನು ಮುಂಚಿತವಾಗಿ ಯೋಜನೆ ರೂಪಿಸಿಕೊಳ್ಳದ ಪುರಸಭೆ, ನಗರದ ಜನತೆಗೆ ತೊಂದರೆ ಮಾಡುತ್ತಿದೆ.
ಏಕಾಏಕಿ 8 ದಿನಗಳಿಗೊಮ್ಮೆ ಕುಡಿವ ನೀರು ಒದಗಿಸುವುದಾಗಿ ಡಂಗೂರ ಸಾರಿಸಿರುವುದು ವಿಷಾದದ ಸಂಗತಿ. 18 ಕೊಳವೆಬಾವಿ ಕಾರ್ಯನಿರ್ವಹಿಸುತ್ತಿಲ್ಲ. 12 ಕೊಳವೆ ಬಾವಿಗಳಿಂದ ಮಾತ್ರ ನೀರೆತ್ತಲಾಗುತ್ತಿದೆ.
ಕೂಡಲೇ ಪುರಸಭೆ ಹಾಗೂ ಸಣ್ಣ ನೀರಾವರಿ ಇಲಾಖೆಗಳು ಕಾಮಗಾರಿ ಶೀಘ್ರವಾಗಿ ಮುಗಿಸಿ ಸಮಸ್ಯೆ ಪರಿಹರಿಸಬೇಕು. ಇಲ್ಲವಾದರೆ ಹೋರಾಟ ಅನಿವಾರ್ಯ ಎಂದು ಪುರಸಭೆ ಸದಸ್ಯರಾದ ಕಲ್ಯಾಣಕುಮಾರ ಶೆಟ್ಟರ್, ಹಸೀನಾಬಿ ನಾಯ್ಕನವರ, ಯಲ್ಲಮ್ಮ ಕಂಚಿಗೊಲ್ಲರ, ರವಿರಾಜ ಕಲಾಲ, ಜಾಫರ್‌ಸಾಬ ಕೇಣಿ, ಮಾಲತೇಶ ಚಿಕ್ಕಣ್ಣನವರ, ನೇತ್ರಾವತಿ ಬೊಮ್ಮನಹಳ್ಳಿ, ರಾಜಮ್ಮ ಪಾಂಡುರಂಗಿ, ಫಾರೂಕಅಹಮ್ಮದ ಅಕ್ಕಿವಳ್ಳಿ, ಶಕುಂತಲಾ ಪವಾಡಿ, ಶೋಭಾ ಗೌಳಿ, ಹಜರತ್‌ಅಲಿ ಮಲ್ಲಿಗಾರ ಹಾಗೂ ಪುರಸಭೆ ಮಾಜಿ ಅಧ್ಯಕ್ಷ ಎಸ್.ಕೆ. ಪೀರಜಾದೆ, ಕೆಜೆಪಿ ನಗರ ಘಟಕದ ಅಧ್ಯಕ್ಷ ರಾಜು ಗೌಳಿ, ಭಾಸ್ಕರ ಹುಲಮನಿ, ಮಹೇಶ ಪವಾಡಿ ಮುಂತಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement