ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಉಚಿತ ಕಂಪ್ಯೂಟರ್ ತರಬೇತಿ

Rashmi Kasaragodu
Updated On : 23 May 2013, 12:05 pm

ಹಾವೇರಿ: ರಾಜ್ಯ ಸರ್ಕಾರದ ಲೋಕ ಶಿಕ್ಷಣ ನಿರ್ದೇಶನಾಲಯದಿಂದ ನಡೆಯುತ್ತಿರುವ ಹಾವೇರಿ ಜಿಲ್ಲೆಯ ನೆಗಳೂರು ವರದಾ ವಿದ್ಯಾಪೀಠದಲ್ಲಿ ಉಚಿತ ಬೇಸಿಕ್ ಕಂಪ್ಯೂಟರ್ ಮತ್ತು ಡಿಟಿಪಿ ತರಬೇತಿಯನ್ನು ಜೂ. 1ರಿಂದ ಐದು ತಿಂಗಳ ಕಾಲ ವಸತಿ ಸಹಿತವಾಗಿ ನೀಡಲಿದೆ. 18ರಿಂದ 35 ವಯೋವುತಿಯ, ಎಸ್ಸೆಸ್ಸೆಲ್ಸಿ ಉತ್ತೀರ್ಣರಾದ ಆಸಕ್ತ ಯುವಕ-ಯುವತಿಯರು ಮೇ 30ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರು. 500 ವಿದ್ಯಾರ್ಥಿವೇತನ ನೀಡಲಾಗುತ್ತದೆ. 40 ಅಭ್ಯರ್ಥಿಗಳಿಗೆ ಅವಕಾಶವಿದೆ. ಸಾಕಷ್ಟು ಸಂಖ್ಯೆಯಲ್ಲಿ ಅರ್ಜಿಗಳು ಬಾರದಿದ್ದಲ್ಲಿ ಜೂ. 7ರ ವರೆಗೂ ಅರ್ಜಿ ಪಡೆಯಲಾಗುವುದು. ಅರ್ಜಿ ಸಲ್ಲಿಸಿದವರು ಮೇ 31ರಂದು ಮುಂಜಾನೆ 11 ಗಂಟೆಗೆ ಮೂಲ ದಾಖಲಾತಿಗಳೊಂದಿಗೆ ನೆಗಳೂರಿನ ವರದಾ ವಿದ್ಯಾಪೀಠದಲ್ಲಿ ಸಂದರ್ಶನಕ್ಕೆ ಸ್ವಂತ ಖರ್ಚಿನಲ್ಲಿ ಕಡ್ಡಾಯವಾಗಿ ಹಾಜರಿರಬೇಕು. ಮಾಹಿತಿಗೆ ವರದಾ ವಿದ್ಯಾಪೀಠದ ಕಚೇರಿ, ನೆಗಳೂರು ಅಥವಾ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳು, ಜಿಲ್ಲಾಡಳಿತ ಭವನ, ದೇವಗಿರಿ, ಹಾವೇರಿ (ದೂ. 08375-249299, 9591177017, 8095989446) - ಇಲ್ಲಿ ಪಡೆಯಬಹುದು ಎಂದು ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement