ಶೇ. 92ರಷ್ಟು ಫಲಿತಾಂಶ
ಹಾನಗಲ್ಲ: ತಾಲೂಕಿನ ಮಹಾರಾಜಪೇಟ ಸರ್ಕಾರಿ ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಶೇ. 91.83ರಷ್ಟಾಗಿದೆ. ಪರೀಕ್ಷೆಗೆ ಹಾಜರಾದ 49ರಲ್ಲಿ 45 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಪ್ರಥಮ ಶ್ರೇಣಿಯಲ್ಲಿ 15, ದ್ವಿತೀಯ ಶ್ರೇಣಿಯಲ್ಲಿ 12, ತೃತೀಯ ಶ್ರೇಣಿಯಲ್ಲಿ 18 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪ್ರಿಯಾ ವಿರಕ್ತಮಠ (ಶೇ. 84.16), ಸುಮಾ ಉಗ್ಗನವರ (ಶೇ. 82.56) ಹಾಗೂ ಅರ್ಚನಾ ವೀರಾಪುರ (ಶೇ. 77.76) ಉತ್ತಮ ಅಂಕ ಗಳಿಸಿದ್ದಾರೆ.