ಎಸ್ಬಿಐಯಿಂದ ಪ್ರಾಥಮಿಕ ಶಾಲೆಗೆ ಫ್ಯಾನ್ ವಿತರಣೆ
ಕನ್ನಡಪ್ರಭ ವಾರ್ತೆ, ಶಿಗ್ಗಾಂವಿ, ಮೇ 23
ಶಿಕ್ಷಣಕ್ಕಾಗಿ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದ್ದು, ಅದರಂತೆ ಭಾರತೀಯ ಸ್ಟೇಟ್ ಬ್ಯಾಂಕ್ ಕೂಡಾ ಲಾಭಾಂಶದ ಕೆಲವೊಂದು ವಸ್ತುಗಳನ್ನು ಸರ್ಕಾರಿ ಶಾಲೆಗಳಿಗೆ ಹೆಚ್ಚಿನ ಅನುಕೂಲವಾಗುವ ದೃಷ್ಟಿಯಂದ ವಿತರಿಸಲಾಗಿದೆ ಎಂದು ಎಸ್ಬಿಐ ಪ್ರಬಂಧಕ ಎಸ್.ಎನ್. ಜೋಶಿ ಹೇಳಿದರು.
ತಾಲೂಕಿನ ಮುಳಕೇರಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ನಾಲ್ಕು ಫ್ಯಾನ್ ಹಾಗೂ ರಾಜೀವ್ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ 1 ಫ್ಯಾನ್, ಶಿಗ್ಗಾಂವಿ ಮೇಟ್ರಿಕ್ ಪೂರ್ವ ಬಾಲಕಿಯರ ವಸತಿ ಶಾಲೆಗೆ 5 ಸೇರಿದಂತೆ ಒಟ್ಟು 10 ಫ್ಯಾನ್ಗಳನ್ನು ಉಚಿತವಾಗಿ ವಿತರಿಸಿದರು.
ಎಸ್ಬಿಐ ಸಾಂಸ್ಥಿಕ ಸಾಮಾಜಿಕ ಕಳಕಳಿ ಯೋಜನೆಯಡಿಯಲ್ಲಿ ವಿತರಿಸಲಾಗಿದೆ. ಶೈಕ್ಷಣಿಕವಾಗಿ ಉತ್ತರೋತ್ತರವಾಗಿ ಅಭಿವೃದ್ಧಿಯಾಗಲಿ ಎಂದು ಹಾರೈಸಿದರು.
ತಾಲೂಕಿನ ಮುಳಕೇರಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಫಕೀರಪ್ಪ ಸಿಗ್ಗಟ್ಟಿ ಮಾತನಾಡಿದರು. ಗ್ರಾಪಂ ಸದಸ್ಯರಾದ ರವಿ ಹೊಸಮನಿ, ಮಲ್ಲಮ್ಮ ಕಬನೂರ, ಎಸ್ಡಿಎಂಸಿ ಉಪಾಧ್ಯಕ್ಷ ರುದ್ರಯ್ಯ ಹಿರೇಮಠ, ಬಸಪ್ಪ ರಾಯಣ್ಣವರ, ಬಸಪ್ಪ ಸಿಗ್ಗಟ್ಟಿ ಸೇರಿದಂತೆ ಗ್ರಾಮಸ್ಥರು ಇದ್ದರು.
ಶಾಲಾ ಪ್ರಧಾನ ಗುರುಗಳಾದ ಎಂ.ಎಂ. ದೇವಕ್ಕಿಗೌಡ್ರ ಸ್ವಾಗತಿಸಿದರು. ಜಿ.ಎಸ್. ಸೇಟ್ ನಿರೂಪಿಸಿದರು. ಎಸ್.ಸಿ. ಹಿರೇಮಠ ವಂದಿಸಿದರು.