ಡಿಡಿಪಿಯು ಲೋಕಾಯುಕ್ತ ಬಲೆಗೆ
ಹಾವೇರಿ: ಕಾಲೇಜೊಂದಕ್ಕೆ ಗ್ರೇಡ್ ಸರ್ಟಿಫಿಕೇಟ್ ನೀಡಲು ಲಂಚ ಕೇಳಿ ಪಡೆಯುತ್ತಿದ್ದ ವೇಳೆ ಹಾವೇರಿ ಜಿಲ್ಲೆಯ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ (ಡಿಡಿಪಿಯು) ರವೀಂದ್ರ ಕೊಣ್ಣೂರು ಗುರುವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಹಿರೇಕೆರೂರು ತಾಲೂಕಿನ ನಾಗವಂದ ಗ್ರಾಮದ ಪದವಿ ಪೂರ್ವ ಕಾಲೇಜಿಗೆ ಗ್ರೇಡ್ ಸರ್ಟಿಫಿಕೇಟ್ ನೀಡಲು ಕಾಲೇಜಿನ ಉಪನ್ಯಾಸಕ ಸದಾಶಿವ ಬೆಳ್ಳುಬ್ಬಿ ಅವರಿಂದ ರವೀಂದ್ರ ಕೊಣ್ಣೂರು ಅವರು 10 ಸಾವಿರ ಲಂಚ ಕೇಳಿದ್ದರು. 10 ಸಾವಿರಲ್ಲಿ 8 ಸಾವಿರನ್ನು ಲಂಚ ರೂಪದಲ್ಲಿ ನೀಡುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದರು.
ಈ ವೇಳೆ ಅಧಿಕಾರಿ ರವೀಂದ್ರ ಕೊಣ್ಣೂರು ಸಿಕ್ಕಿ ಬಿದ್ದಿದ್ದಾರೆ. ಲೋಕಾಯುಕ್ತ ಡಿಎಸ್ಪಿ ಪಾಟೀಲ, ಪೊಲೀಸ್ ಇನ್ಸ್ಪೆಕ್ಟರ್ ಕೆ. ಶ್ರೀನಿವಾಸ, ಸಿಬ್ಬಂದಿಗಳಾದ ಸಾಲಗುಂದಿ, ಹಿರೇಮಠ, ಉಪ್ಪಾರ ಮೊದಲಾದವರು ದಾಳಿಯಲ್ಲಿ ಪಾಲ್ಗೊಂಡಿದ್ದರು.