ವಿಠ್ಠಲ ರುಖುಮಾಯಿ ದಿಂಡಿ ಉತ್ಸವ
ರಾಣಿಬೆನ್ನೂರು: ಹಿಂದೂ ಸಂತ ನಾಮದೇವ ಶಿಂಪಿ ಸಮಾಜದ ವಿಠ್ಠಲ ರುಖುಮಾಯಿ ದಿಂಡಿ ಉತ್ಸವ ಬುಧವಾರ ವಿಜೃಂಭಣೆಯಿಂದ ಜರುಗಿತು. ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ದಿಂಡಿ ಉತ್ಸವ ಮೊದಲು ಕಂಚಗಾರ ಓಣಿ, ದುರ್ಗಾ ವೃತ್ತ, ಎಂ.ಜಿ. ರಸ್ತೆ, ಚಕ್ಕಿಮಕ್ಕಿ ದುರ್ಗಾದೇವಿ ದೇವಸ್ಥಾನ, ಅಂಬಾ ಭವಾನಿ ಮತ್ತು ವಿಠ್ಠಲ ರುಖುಮಾಯಿ ದೇವಸ್ಥಾನದ ಮೂಲಕ ಸಾಗಿ ದೊಡ್ಡಪೇಟೆ ಮತ್ತು ಗವಾರದವರ ಓಣಿ ಮೂಲಕ ಪಾಂಡುರಂಗ ದೇವಸ್ಥಾನ ತಲುಪಿತು. ಉತ್ಸವ ಸಮಿತಿ ಅಧ್ಯಕ್ಷ ಬಸವರಾಜ ಎಸ್. ಗೋಂದಕರ ಹಾಗೂ ಸಮಾಜದ ಹಿರಿಯರು ನೇತೃತ್ವ ವಹಿಸಿದ್ದರು. ಸಂತ ಶಿರೋಮಣಿಗಳು, ಸಮಾಜ ಬಾಂಧವರು, ಮಹಿಳೆಯರು ಮತ್ತು ಯುವಕರು ಉತ್ಸಾಹದಿಂದ ಭಾಗವಹಿಸಿ ಉತ್ಸವ ಯಶಸ್ವಿಗೊಳಿಸಿದರು.