ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಪುರಸಭೆ ವರ್ತನೆಗೆ ಕಾಂಗ್ರೆಸ್ ಖಂಡನೆ

Mainashree
Updated On : 25 May 2013, 10:40 am

ಹಾನಗಲ್ಲ: ಕಳೆದ 15 ದಿನಗಳಿಂದ ಹಾನಗಲ್ಲ ಪುರಸಭಾ ಅಧಿಕಾರಿಗಳು ಪಟ್ಟಣದ ಜನತೆಗೆ ಕುಡಿಯುವ ನೀರನ್ನು ಸರಿಯಾಗಿ ಪೂರೈಸದಿರುವುದನ್ನು ಖಂಡಿಸಿ ಹಾಗೂ 7 ದಿನಕ್ಕೊಮ್ಮೆ ನೀರು ಪೂರೈಸುವುದಾಗಿ ಡಂಗುರ ಸಾರಿದ್ದನ್ನು ಖಂಡಿಸಿ, ಪುರಸಭೆ ಕಾಂಗ್ರೆಸ್ ಸದಸ್ಯರು ಮುಖ್ಯಾಧಿಕಾರಿಗೆ ಶುಕ್ರವಾರ ಮನವಿ ಸಲ್ಲಿಸಿದರು. ಮೇ 20ರಂದು ತಾಲೂಕು ಪಂಚಾಯಿತಿ ಸಭಾ ಭವನದಲ್ಲಿ ನಡೆದ ಟಾಸ್ಕ್‌ಪೋರ್ಸ್ ಸಮಿತಿ ಸಭೆಯಲ್ಲಿ ನೂತನ ಶಾಸಕ ಮನೋಹರ ತಹಸೀಲ್ದಾರ್, ಪುರಸಭೆಯ ಅಧಿಕಾರಿಗಳು 7 ದಿನಕ್ಕೊಮ್ಮೆ ನೀರನ್ನು ಬಿಡುವುದಾಗಿ ಡಂಗುರ ಸಾರಿದ್ದನ್ನು ಖಂಡಿಸಿದರು. ನೂತನ ಸರ್ಕಾರಕ್ಕೆ ಮಸಿ ಬಳಿಯದಂತೆ 4 ದಿನಕ್ಕೊಮ್ಮೆ ನೀರು ಬಿಡುವಂತೆ ಆದೇಶಿಸಿದ್ದರು. ಅವರ ಆದೇಶವನ್ನೂ ಅಧಿಕಾರಿಗಳು ಪಾಲಿಸುತ್ತಿಲ್ಲ. ಅಲ್ಲದೇ ಪುರಸಭೆ ವ್ಯಾಪ್ತಿಯಲ್ಲಿ ಬರುವ 34 ಕೊಳವೆ ಬಾವಿಗಳು ಹಾಳಾಗಿವೆ. ಅವುಗಳನ್ನು ಕೂಡಲೇ ದುರಸ್ತಿಗೊಳಿಸಿ, ನೀರೆತ್ತಿ ಪಟ್ಟಣದ ಜನತೆಗೆ ಸರಿಯಾದ ಸಮಯಕ್ಕೆ ನೀರು ಪೂರೈಸುವಂತೆ ಪುರಸಭೆ ಕಾಂಗ್ರೆಸ್ ಸದಸ್ಯರು ಮುಖ್ಯಾಧಿಕಾರಿಗೆ ನೀಡಿದ ಮನವಿಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭ ಪುರಸಭಾ ಸದಸ್ಯರಾದ ಎಸ್.ಪಿ. ಸುಣಗಾರ, ಎಂ.ಎಂ. ಖೇಣಿ, ಅಶೋಕ ಆರೇಗೊಪ್ಪ, ದಿಲ್‌ಶ್ಯಾನಬಾನು ಸಾರಬಾನ, ಪಿ.ಕೆ. ಪಾರಗಾಂವಕರ, ಘನಶ್ಯಾಮ ದೇಶಪಾಂಡೆ, ವಿದ್ಯಾಶಂಕರ ದೇಶಪಾಂಡೆ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement