ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಗ್ರಾಹಕರಿಗೆ ಸಿಂಡಿಕೇಟ್ ಬ್ಯಾಂಕ್ ಸಹಕಾರಿ: ಗೌಡರ

Mainashree
Updated On : 27 May 2013, 11:05 am

ಮುಂಡರಗಿ: ಸಿಂಡಿಕೇಟ್ ಬ್ಯಾಂಕ್ ಉತ್ತಮ ಕಾರ್ಯನಿರ್ವಹಿಸುತ್ತಿದ್ದು, ಅಲ್ಲಿನ ಸಿಬ್ಬಂದಿ ಗ್ರಾಹಕರೊಂದಿಗೆ ಪ್ರೀತಿ ವಿಶ್ವಾಸದಿಂದ ನಡೆದುಕೊಳ್ಳುವ ಮೂಲಕ ಗ್ರಾಹಕರಿಗೆ ಬ್ಯಾಂಕ್ ಸಹಕಾರಿಯಾಗಿದೆ ಎಂದು ಕುರಿ ಹಾಗೂ ಉಣ್ಣೆ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ವೈ.ಎನ್. ಗೌಡರ ಹೇಳಿದರು.
ಇತ್ತೀಚೆಗೆ ಪಟ್ಟಣದ ಸಿಂಡಿಕೇಟ್ ಬ್ಯಾಂಕಿನಲ್ಲಿ ಜರುಗಿದ ಗ್ರಾಹಕರ ದಿನಾಚರಣೆಯಲ್ಲಿ ಮಾತನಾಡಿ, ವಿವಿಧ ಉದ್ಯೋಗಗಳನ್ನು ಮಾಡುವವರು ಹಾಗೂ ರೈತರು ಸಿಂಡಿಕೇಟ್ ಬ್ಯಾಂಕಿನ ವ್ಯವಹಾರವನ್ನು ಸಮರ್ಪಕವಾಗಿ ಬಳಸಿ ಅಲ್ಲಿ ಪಡದ ಸಾಲವನ್ನು ಮರುಪಾವತಿಸುವ ಮೂಲಕ ಮತ್ತಷ್ಟು ಸಾಲ ಪಡೆದು ಹೆಚ್ಚಿನ ಉದ್ಯೋಗಗಳನ್ನು ಮಾಡಬಹುದು ಎಂದರು. ಕರಬಸಪ್ಪ ಹಂಚಿನಾಳ ಮಾತನಾಡಿ, ಸಿಂಡಿಕೇಟ್ ಬ್ಯಾಂಕಿನಲ್ಲಿ ಗ್ರಾಹಕರಿಗೆ ಅನುಕೂಲವಾಗುವ ಎಲ್ಲ ಸೇವೆಗಳನ್ನು ತ್ವರಿತವಾಗಿ ಒದಗಿಸಬೇಕು. ಎಟಿಎಂನಲ್ಲಿ ನಿರಂತರ ಹಣ ದೊರೆಯುವಂತೆ ವ್ಯವಸ್ಥೆ ಮಾಡಬೇಕು. ಎಟಿಎಂನಲ್ಲಿ ಯಾವಾಗಲೂ ಹಣ ಇರುವುದಿಲ್ಲ ಎನ್ನುವ ದೂರುಗಳಿದ್ದು, ಗ್ರಾಹಕರ ಅನುಕೂಲಕ್ಕಾಗಿ ಇದನ್ನು ಸರಿಪಡಿಸಬೇಕು ಎಂದರು. ಅಧ್ಯಕ್ಷತೆ ವಹಿಸಿ ಬ್ಯಾಂಕ್ ವ್ಯವಸ್ಥಾಪಕ ಎಂ.ಡಿ. ಹಾದಿಮನಿ ಮಾತನಾಡಿದರು. ನಾರಾಯಣಪ್ಪ ಇಲ್ಲೂರ, ಕೆ.ವಿ. ಹಂಚಿನಾಳ, ಕೊಟ್ರೇಶ ಅಂಗಡಿ, ಪವನ್ ಚೋಪ್ರಾ, ವಿ.ಎಸ್. ಚವಡಿ ಗ್ರಾಹಕರ ಸಮಸ್ಯೆಗಳು ಹಾಗೂ ಹೆಚ್ಚಿನ ಅನುಕೂಲತೆಗಳ ಬಗ್ಗೆ ಮಾತನಾಡಿದರು. ಶ್ರೀನಿವಾಸ ಕಟ್ಟೀಮನಿ, ಪ್ರೊ. ಎಸ್.ಆರ್. ಬಸಾಪೂರ, ಸಿ.ಜಿ. ಧರ್ಮಾಧಿಕಾರಿ, ವಿ.ಸಿ. ಹಂಚಿನಾಳ, ಕೆ.ಐ. ನಾಡಗೌಡ್ರ, ಯತೀಶ, ಬಾಲಾಜಿ, ಎಸ್.ಬಿ. ಕುರುಡಗಿ, ವೀರೇಶ ಬಾಗೋಡಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement