ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಬಡತನ ಮುಕ್ತ ರಾಜ್ಯ ಮುಖ್ಯಮಂತ್ರಿ ಕನಸು

Lingaraj Badiger
Updated On : 28 May 2013, 11:37 am

ಶಿರಹಟ್ಟಿ: ರಾಜ್ಯದ ಪ್ರತಿಯೊಬ್ಬರೂ ಗುಣಮಟ್ಟದ ಜೀವನ ನಡೆಸಬೇಕು. ಸರ್ಕಾರ ರು. 1 ಅಂತೆ ಅಕ್ಕಿ ವಿತ್ತರಣೆ ಮಾಡುತ್ತಿದ್ದು, ಆದ್ದರಿಂದ ಬಡತನ ಮುಕ್ತ ರಾಜ್ಯವನ್ನಾಗಿಸುವ ಕನಸು ಮುಖ್ಯಮಂತ್ರಿ ಸಿದ್ದರಾಮಯ್ಯ ಹೊಂದಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಭಾನುವಾರ ಸಂಜೆ ಫಕೀರೇಶ್ವರ ಜಾತ್ರೆಯ ಧರ್ಮಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ 5 ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ಪ್ರತಿ ಗ್ರಾಮಕ್ಕೂ ಶುದ್ಧ ಘಟಕ ಸ್ಥಾಪಿಸಲಾಗುವುದು. ಬಡ ಜನತೆಯು ಶುದ್ಧವಾದ ನೀರು ಕುಡಿಯಬೇಕು ಎಂಬ ಮಹದಾಶೆ ನನ್ನದಾಗಿದೆ. ಶಿರಹಟ್ಟಿಗೆ ಕುಡಿವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ಎಎಸ್‌ಎಫ್‌ಸಿ ಯೋಜನೆಯ ಅಡಿಯಲ್ಲಿ ರು. 10 ಲಕ್ಷ ಬಿಡುಗಡೆ ಮಾಡಲಾಗಿದೆ. ಜಿಲ್ಲೆಯ ಗದಗ-ಬೇಟಗೇರಿ, ರೋಣ, ಮುಂಡರಗಿ, ನರಗುಂದ, ನರೇಗಲ್ಲ, ಮುಳಗುಂದ, ಲಕ್ಷ್ಮೇಶ್ವರ, ಶಿರಹಟ್ಟಿಯ ಪ್ರತಿ ವಾರ್ಡ್‌ಲ್ಲಿ 3-4 ದಿನಗಳಿಗೊಮ್ಮೆ ನೀರನ್ನು ಬಿಡುಗಡೆಗೆ ಪ್ರಯತ್ನಿಸಲಾಗುವುದು ಎಂದರು.
ಜ. ಫಕೀರಸಿದ್ಧರಾಮ ಶ್ರೀಗಳು, ಸಚಿವ ಎಚ್.ಕೆ. ಪಾಟೀಲರನ್ನು ಸನ್ಮಾನಿಸಿ ಮಾತನಾಡಿ, ಸಚಿವ ಎಚ್.ಕೆ. ಪಾಟೀಲರು ವಿವಾದ ರಹಿತ, ಒಳ್ಳೆಯ ರಾಜಕಾರಣಿ, ಉತ್ತಮ ಮತ್ತು ಪ್ರಾಮಾಣಿಕ ವ್ಯಕ್ತಿತ್ವ ಹೊಂದಿದ್ದಾರೆ. ಗ್ರಾಮೀಣ ಜನರಿಗೆ ಕುಡಿವ ನೀರು, ರಸ್ತೆ ಮೂಲ ಅವಶ್ಯಕತೆಯಾಗಿದ್ದು, ಅವುಗಳನ್ನು ಸಚಿವ ಎಚ್.ಕೆ. ಪಾಟೀಲರು ತಮ್ಮ ಅವಧಿಯಲ್ಲಿ ಒದಗಿಸಲಿ ಎಂದು ಸಲಹೆ ನೀಡಿದರು. ಶಾಸಕ ರಾಮಕೃಷ್ಣ ದೊಡ್ಡಮನಿ ಮಾತನಾಡಿ, ಶಿರಹಟ್ಟಿ ಮತಕ್ಷೇತ್ರದ ಅಭಿವೃದ್ಧಿಗೆ ಎಲ್ಲರ ಸಹಕಾರ, ವಿಶ್ವಾಸ ಪಡೆದುಕೊಂಡು ಕಾರ್ಯನಿರ್ವಹಿಸುವುದಾಗಿ ತಿಳಿಸಿದರು. ಬಾಲೇಹೋಸೂರಿನ ದಿಂಗಾಲೇಶ್ವರ ಶ್ರೀಗಳು, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಿ.ಎಸ್. ಗಡ್ಡದೇವರಮಠ, ಜಿಪಂನ ಮಾಜಿ ಸದಸ್ಯ ಶಿವಪ್ರಕಾಶ ಮಹಾಜನಶೆಟ್ಟರ, ಪಪಂನ ಮಾಜಿ ಅಧ್ಯಕ್ಷ ಎಚ್.ಡಿ. ಮಾಗಡಿ, ವೈ.ಎಸ್. ಪಾಟೀಲ, ಮಹೇಂದ್ರ ಮುಂಡವಾಡ, ಮಂಜುನಾಥ ಘಂಟಿ, ಕಾಂಗ್ರೆಸ್‌ನ ಬ್ಲಾಕ್ ಕಮಿಟಿ ಅಧ್ಯಕ್ಷ ವೀರಣ್ಣ ಅಂಗಡಿ, ಪಪಂ ಸದಸ್ಯ ಸಂತೋಷ ಕುರಿ, ಬುಡನಶ್ಯಾ ಮಕಾನದಾರ, ಸಿಕಂದರ ಟಪಾಲ, ರಾಘು ಕುಲಕರ್ಣಿ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement