ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಮಳೆ ಆರ್ಭಟಕ್ಕೆ ಬಿತ್ತಲಿಲ್ಲ ಬೀಜ

Lingaraj Badiger
Updated On : 30 May 2013, 11:28 am

ಶಿಗ್ಗಾಂವಿ: ತಾಲೂಕಿನ ದುಂಡಶಿ ಹೋಬಳಿ ಮಟ್ಟದಲ್ಲಿ ಉತ್ತಮ ಮಳೆಯಾಗಿದ್ದು ಬಿತ್ತನೆಗೆ ಭೂಮಿಯನ್ನು ಹದಗೊಳಿಸಿ ಬತ್ತದ ಬಿತ್ತನೆಗೆ ರೈತರು ಪೂರ್ಣ ಪ್ರಮಾಣದಲ್ಲಿ ತೊಡಗಿಕೊಂಡಿದ್ದಾರೆ. ತಾಲೂಕಿನ ದುಂಡಶಿ ಹೋಬಳಿ ಮಟ್ಟ ಮಲೆನಾಡು ಪ್ರದೇಶವಾಗಿದ್ದರಿಂದ ಮಳೆ ದೊಡ್ಡ ಪ್ರಮಾಣದಲ್ಲಿ ಆಗುವ ಮುನ್ನವೆ ಬಿತ್ತನೆ ಕೆಲಸವು ಮುಗಿಯಬೇಕಿದೆ. ಆದರ ಮಳೆ ಆರ್ಭಟಕ್ಕೆ ಬಿತ್ತನೆ ಮಾಡದೆ ಕಾಲಕಳೆಯುವಂತಾಗಿದೆ. ಮೇ 25ರಿಂದಲೇ ಬತ್ತದ ಬಿತ್ತನೆ ಪ್ರಾರಂಭಿಸಿದ್ದು, ಮೇ 29ರಂದು ಮಳೆ ಪ್ರಮಾಣ ಹೆಚ್ಚಾಗಿದ್ದರಿಂದ ಬಿತ್ತನೆಗೆ ಮುಂದಾಗಿದ್ದ ರೈತರು ಮರಳಿ ಮನೆಗೆ ಬರುವಂತಾಗಿದೆ. ದುಂಡಶಿ ರೈತ ಸಂಪರ್ಕ ಕೇಂದ್ರದಲ್ಲಿ ಪೂರ್ವದಲ್ಲಿಯೆ ಬಿತ್ತನೆ ಬೀಜವನ್ನು  ನೀಡಿದ್ದಕ್ಕಾಗಿ, ಸ್ಥಳೀಯ ರೈತರು ಶಾಸಕ ಬಸವರಾಜ ಬೊಮ್ಮಾಯಿ, ಕೃಷಿ ಅಧಿಕಾರಿ ಶಿವಕುಮಾರ ಮಲ್ಲಾಡದ ಅವರನ್ನು ಅಭಿನಂದಿಸಿದ್ದಾರೆ.
ಇಂದು ವಿದ್ಯಾರ್ಥಿಗಳಿಂದ ಜಿಲ್ಲಾಧಿಕಾರಿಗೆ ಮನವಿ
ಗದಗ: ಜಿಲ್ಲೆಯಲ್ಲಿ ಸುಮಾರು 300 ವಿದ್ಯಾರ್ಥಿಗಳು ನರ್ಸಿಂಗ್ ತರಬೇತಿಯನ್ನು ಪಡೆಯುತ್ತಿದ್ದು, ಈ ವಿದ್ಯಾರ್ಥಿಗಳ ಪರೀಕ್ಷೆಗಳನ್ನು ಹುಬ್ಬಳ್ಳಿಯಲ್ಲಿ ನಡೆಸಲು ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ ಮತ್ತು ರಾಜ್ಯ ಶುಶ್ರೂಷ ಪರೀಕ್ಷಾ ಮಂಡಳಿ ಬೆಂಗಳೂರ ಇವರು ತೀರ್ಮಾನಿಸಿದ್ದು, ಇದನ್ನು ಖಂಡಿಸಿ ಜಿಲ್ಲೆಯ ನರ್ಸಿಂಗ್ ವಿದ್ಯಾರ್ಥಿಗಳು ಮೇ 30ರಂದು ಮುಳಗುಂದ ನಾಕಾದ ಮಹಾವೀರ ವೃತ್ತದಿಂದ ಬೆಳಗ್ಗೆ 11 ಗಂಟೆಗೆ ಪ್ರತಿಭಟನಾ ಮೆರವಣಿಗೆಯ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ಅರ್ಪಿಸಲಿದ್ದಾರೆಂದು ಪ್ರಕಟಣೆ ತಿಳಿಸಿದೆ.
ಮಟ್ಕಾ: ಮೂವರ ಬಂಧನ
ಗದಗ:  ನಗರದ ಮಹಾತ್ಮಗಾಂಧಿ ವೃತ್ತದ ಬಳಿ ಇರುವ ಕುಮಾರೇಶ್ವರ ಕಾಂಪ್ಲೆಕ್ಸ್ ಹತ್ತಿರ ಮಟಕಾ ಆಡುತ್ತಿದ್ದ ಮೂವರನ್ನು ಗದಗ ಶಹರ ಪೊಲೀಸರು ಬಂಧಿಸಿದ್ದಾರೆ. ಅವರಿಂದ ರು. 1,62,000 ವಶಪಡಿಸಿಕೊಂಡಿದ್ದಾರೆ. ನಗರದ ನಿವಾಸಿಗಳಾದ ಶ್ರೀಕಾಂತ ಭಾಂಡಗೆ, ಕಿರಣ ಬಾಕಳೆ, ವಿನೋದ ಶಿದ್ಲಿಂಗ್ ಬಂಧಿತ ಆರೋಪಿಗಳು. ಈ ಕುರಿತು ಗದಗ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಸ್ಪೀಟ್: 9 ಜನ ಬಂಧನ
ಗದಗ:  ನಗರದ ಎಪಿಎಂಸಿ ಯಾರ್ಡ್ ಮೆಣಸಿನಕಾಯಿ ಬಜಾರ ಹಂಜಗಿಯವರ ದಲಾಲಿ ಅಂಗಡಿ ಹತ್ತಿರ ಇಸ್ಪೀಟ್ ಜೂಜಾಟ ಆಡುತ್ತಿದ್ದ 9 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ರು. 4700 ವಶಪಡಿಸಿಕೊಂಡಿದ್ದಾರೆ. ಈ ಕುರಿತು ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement