ಲಘು ಪೌಷ್ಟಿಕಾಂಶದ ಕೊರತೆ: ಶಿವನಗೌಡ್ರ
ಹಿರೇಕೆರೂರ: ಮೂರು ಹೋಬಳಿ ಕೇಂದ್ರಗಳಲ್ಲಿ ಭೂ ಚೇತನ ಕಾರ್ಯಕ್ರಮದಲ್ಲಿ ಪ್ರಾತ್ಯಕ್ಷಿಕೆ ನಡೆಸಲಾಗಿದ್ದು, ಕೆಲ ಭಾಗದಲ್ಲಿ ಲಘು ಪೌಷ್ಟಿಕಾಂಶದ ಕೊರತೆ ಕಂಡು ಬಂದಿದೆ ಎಂದು ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಜಿ. ಶಿವನಗೌಡ್ರ ಹೇಳಿದರು.
ತಾಲೂಕು ಕೃಷಿ ಇಲಾಖೆ ಕಚೇರಿ ಆವರಣದಲ್ಲಿ ಮುಂಗಾರು ಬಿತ್ತನೆಗಾಗಿ ಸಹಾಯಧನದಲ್ಲಿ ಮೆಕ್ಕೆಜೋಳವನ್ನು ವಿತರಣೆಗೆ ಚಾಲನೆ ನೀಡಿ ಮಾತನಾಡಿದರು.
ಸಹಾಯಧನದಲ್ಲಿ ಜಿಂಕ್ ಸಲ್ಫೇಟ್ ಎಕರೆಗೆ 5 ಕೆಜಿ, ಇದೇ ರೀತಿ ಜಿಪ್ಸ್ಂನ್ನು ಒಂದು ಎಕರೆಗೆ ಒಂದು ಕ್ವಿಂಟಲ್, ಬೋರಾನ್ ಒಂದು ಎಕರೆಗೆ ಎರಡು ಕೆಜಿಯಂತೆ ವಿತರಿಸಲಾಗುವುದು. ಇದನ್ನು ರೈತರು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. ಸಹಾಯಕ ಕೃಷಿ ನಿರ್ದೇಶಕ ಪಿ. ಸೇವಾನಾಯ್ಕ, ಕೃಷಿಕ ಸಮಾಜದ ಸದಸ್ಯರಾದ ಶಿವಣ್ಣ ಹುಲ್ಲತ್ತಿ, ಮಲ್ಲೇಶಪ್ಪ ಕುಡುಪಲಿ, ತಾಂತ್ರಿಕ ಸಹಾಯಕ ಪ್ರಶಾಂತ ಕುಸಗೂರ ಇದ್ದರು.