ಎಂ.ಎನ್. ವೆಂಕೋಜಿ ಬದಲಾವಣೆಗೆ ಆಗ್ರಹ
ಶಿಗ್ಗಾಂವಿ: ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎನ್. ವೆಂಕೋಜಿಯವರನ್ನು ಈ ಕೂಡಲೇ ಬದಲಾಯಿಸಿ ನೂತನ ಅಧ್ಯಕ್ಷರನ್ನು ನೇಮಕ ಮಾಡಬೇಕೇಂದು ಕಾಂಗ್ರೆಸ್ ಕಾರ್ಯಕರ್ತರು ಆಗ್ರಹಿಸಿದ್ದಾರೆ.
ವೆಂಕೋಜಿ ಅಧ್ಯಕ್ಷರಾದ ಮೇಲೆ ಪಕ್ಷದಲ್ಲಿ ಶಿಸ್ತು ಮಾಯವಾಗಿದೆ. ಅಲ್ಲದೆ, ಪಕ್ಷಕ್ಕೆ ಒಂದು ಕಚೇರಿ ಇಲ್ಲ. ಅವರು ಪಕ್ಷ ಸಂಘಟನೆಗಾಗಿ ಒಂದೇ ಒಂದು ಸಭೆ ನಡೆಸಿಲ್ಲ. ಅವರಿಗೆ ಪಕ್ಷದ ಕಾನೂನು, ಶಿಸ್ತು ಕೂಡ ಗೊತ್ತಿಲ್ಲ ಎಂದು ಆರೋಪಿಸಿದ್ದಾರೆ.
ಮೊನ್ನೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯಾದ್ಯಂತ ಕಾಂಗ್ರೆಸ್ ಅಲೆ ಇದ್ದರೂ ವೆಂಕೋಜಿ ಜವಾಬ್ದಾರಿ ವಹಿಸಿಕೊಂಡು ಕೆಲಸ ಮಾಡಲಿಲ್ಲ. ನೆಪ ಹೇಳುತ್ತ ಸಮಯ ಹಾಳು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಹೀಗಾಗಿ, ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ ದಕ್ಷ, ಪ್ರಾಮಾಣಿಕ ವ್ಯಕ್ತಿಯನ್ನು ನೇಮಕ ಮಾಡಬೇಕೆಂದು ಶಿಗ್ಗಾಂವಿ ತಾಲೂಕು ಕಾಂಗ್ರೆಸ್ನ ತಾಲೂಕು ಕುರುಬ ಸಮಾಜದ ಮಾಜಿ ಅಧ್ಯಕ್ಷ ಶಿವಾನಂದ ರಾಮಗೇರಿ, ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಗುರುನಗೌಡ ಪಾಟೀಲ, ಯೂಸೂಪಸಾಬ ಬಾವಿಕಟ್ಟಿ ಮನವಿ ಮಾಡಿದ್ದಾರೆ.