ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಮಗುವಿನ ಪ್ರಗತಿಗೆ ಪಾಲಕರು ಶ್ರಮಿಸಬೇಕು

Lingaraj Badiger
Updated On : 1 Jun 2013, 11:55 am

ಶಿಗ್ಗಾಂವಿ: ಮಗುವಿನ ಶೈಕ್ಷಣಿಕ ಪ್ರಗತಿ ಕೇವಲ ಶಿಕ್ಷಕರಿಂದ ಮಾತ್ರ ಸಾಧ್ಯವಿಲ್ಲ. ಹಾಗಾಗಿ ಮಗುವಿನ ಪಾಲಕರು ಸಹ ಗಮನಹರಿಸಿದರೆ ಮಾತ್ರ ಮಗುವಿನ ಪ್ರಗತಿ ಸಾಧ್ಯ ಎಂದು ಗ್ರಾಪಂ ಸದಸ್ಯ ಯಲ್ಲಪ್ಪ ಶಿಂದ್ಯೆ ಹೇಳಿದರು. ತಾಲೂಕಿನ ಗೊಟಗೋಡಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದ ಜ್ಯೋತಿ ಬೆಳಗಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸರಿಯಾಗಿ ಶಾಲೆಗೆ ಬಂದು ಶಿಕ್ಷಕರ ಮಾರ್ಗದರ್ಶನದಲ್ಲಿ ಕಲಿತು ಉನ್ನತ ಮಟ್ಟದ ಹುದ್ದೆ ಸಂಪಾದಿಸಬೇಕೆಂದರು.
ಎಸ್‌ಡಿಎಂಸಿ ಅಧ್ಯಕ್ಷ ಸೋಮಣ್ಣ ಸಕ್ರಣ್ಣವರ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಸದಸ್ಯ ಎಚ್.ಎನ್. ಗುಳೇದ, ಮಾಜಿ ಅಧ್ಯಕ್ಷ ಸುಭಾಸ ಸಕ್ರಣ್ಣವರ ಮತ್ತಿತರರಿದ್ದರು. ಪ್ರದಾನ ಗುರುಗಳಾದ ಎನ್.ಎಂ. ಗಿರಿಮಲ್ ಸ್ವಾಗತಿಸಿದರು. ವಿ.ಡಿ. ಛಬ್ಬಿ ನಿರೂಪಿಸಿದರು. ಎಸ್.ಎಂ. ಹಾದಿಮನಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement