ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಕನ್ನಡಿಗರ ದೌರ್ಬಲ್ಯ ದೂರಾಗಲಿ: ಕಮಾಟಿ

Mainashree
Updated On : 1 Nov 2013, 11:55 am

ಹಾನಗಲ್ಲ: ಆಡಳಿತಾತ್ಮಕವಾಗಿ ಬ್ರಿಟಿಷರ ದಾಸ್ಯ ತೊಲಗಿದರೂ ಭಾಷಿಕವಾಗಿ ಕನ್ನಡಿಗರ ದೌರ್ಬಲ್ಯ ದೂರವಾಗಬೇಕು ಎಂದು ಉಪನ್ಯಾಸಕ ಎಸ್.ಬಿ. ಕಮಾಟಿ ನುಡಿದರು. ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಭಾಷೆ ಕಲಿಯಲು ಯಾರಿಗೂ ನಿರ್ಬಂಧವಿಲ್ಲ. ಆದರೆ, ಕನ್ನಡ ಪ್ರೀತಿ ದೂರಾಗಬಾರದು. ಮಾತೃಭಾಷಾ ಶಿಕ್ಷಣ ಕೇವಲ ನೆಪವಾಗಬಾರದು. ಅಚ್ಚ ಕನ್ನಡದ ಪ್ರೀತಿ ಜಾಗೃತವಾಗಬೇಕು ಎಂದರು. ಪ್ರಾಚಾರ್ಯ ಎಸ್.ಸಿ. ಪೀರಜಾದೆ ಅಧ್ಯಕ್ಷತೆ ವಹಿಸಿ, ಭಾಷೆಯ ಉಳಿವಿಗಾಗಿ ಕನ್ನಡ ನೆಲದ ಜನ ಆಂತರಿಕ ಕಚ್ಚಾಟಗಳಿಗೆ ತೆರೆ ಎಳೆಯಬೇಕು. ಕನ್ನಡದ ಬಗ್ಗೆ ನೈಜ ಕಳಕಳಿ ವ್ಯಕ್ತವಾಗಬೇಕು. ಸಾಹಿತ್ಯ ಚಟುವಟಿಕೆಯಲ್ಲಿ ರಾಜಕಾರಣ ಬೇಡ. ಕನ್ನಡದ ನೆಲದಲ್ಲಿ ಕನ್ನಡೇತರರ ಅಟ್ಟಹಾಸವೂ ಸಲ್ಲದು. ನಾಡಿನಲ್ಲಿ ಕನ್ನಡ ಸುರಕ್ಷಿತವಾಗಿ ಬೆಳೆಯಬೇಕು ಎಂದರು. ಅಂಜುಮನ್ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ವಿ.ಯು. ಪಾಟೀಲ ಇದ್ದರು. ಮಾರುತಿ ಶಿಡ್ಲಾಪುರ, ಅನಿತಾ ಬಿ.ಕೆ. ಪ್ರಾಸ್ತಾವಿಕ ಮಾತನಾಡಿದರು. ಮಾತನಾಡಿದರು. ಉಪನ್ಯಾಸಕರಾದ ಟಿ. ಈಶ್ವರ, ವೀಣಾ ದೇವರಗುಡಿ, ಎಸ್.ವಿ. ರಶ್ಮೀ, ಹೊನ್ನತ್ತಿ, ಡಿ.ಸಿ. ಹಿರೇಮಠ ಇದ್ದರು. ಶಫಿಯಾಬಾನು ಶಿರಮಾಪುರ ನಾಡಗೀತೆ, ಕನ್ನಿಕಾ ಪಾಟೀಲ ಭಾವಗೀತೆ ಹಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement