ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ನಾಡಿನ ಸರ್ವತೋಮುಖ ಅಭಿವೃದ್ಧಿಗೆ ಪಣ: ತಹಶೀಲ್ದಾರ

Mainashree
Updated On : 1 Nov 2013, 11:55 am

ಹಾನಗಲ್ಲ: ಏಕೀಕರಣಗೊಂಡ ಕರ್ನಾಟಕ ಸರ್ವತೋಮುಖ ಅಭಿವೃದ್ಧಿ ಸಾಧಿಸುವ ಅಗತ್ಯವಿದೆ ಎಂದು ಶಾಸಕ ಮನೋಹರ ತಹಶೀಲ್ದಾರ ಹೇಳಿದರು.
ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 58ನೇ ಕನ್ನಡ ರಾಜ್ಯೋತ್ಸವ ಸಮಾರಂಭ ಉದ್ಘಾಟಿಸಿದ ಅವರು, ನಾಡಿನಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ಸಿಗಬೇಕು. ಕನ್ನಡಿಗರು ಗೌರವದಿಂದ ಬದುಕುವಂತಾಗಬೇಕು. ಮಹಾಜನ ವರದಿ ಬೆಳಗಾವಿ ಕರ್ನಾಟಕದ ಭಾಗವೆಂದು ಉಲ್ಲೇಖಿಸಿದ್ದರೂ ಮಹಾರಾಷ್ಟ್ರದವರು ಗಡಿ ತಂಟೆ ಬಿಟ್ಟಿಲ್ಲ ಎಂದರು.
ಕರ್ನಾಟಕದ ಎರಡನೇ ರಾಜಧಾನಿ ಎಂದೇ ಬಿಂಬಿತವಾದ ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧ ನಿರ್ಮಿಸಿ, ಕನ್ನಡದ ಹಿರಿಮೆ ಹೆಚ್ಚಿಸಲಾಗಿದೆ. ಪ್ರಾದೇಶಿಕ ಅಸಮತೋಲನ ನಿವಾರಿಸಲು ಸರ್ಕಾರ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.
ತಹಸೀಲ್ದಾರ್ ನಾಗೇಂದ್ರ ಹೊನ್ನಳ್ಳಿ ಧ್ವಜಾರೋಹಣ ನೆರವೇರಿಸಿದರು. ಎಪಿಎಂಸಿ ಅಧ್ಯಕ್ಷ ಬಿ.ಎಸ್. ಅಕ್ಕಿವಳ್ಳಿ, ತಾಪಂ ಅಧ್ಯಕ್ಷ ಮಲ್ಲನಗೌಡ್ರು ವೀರನಗೌಡ್ರು ಮಾತನಾಡಿದರು. ಅಗ್ನಿಶಾಮಕ ದಳ ಹಾಗೂ ಆರೋಗ್ಯ ಇಲಾಖೆ ಪ್ರಾತ್ಯಕ್ಷಿಕೆ ಏರ್ಪಡಿಸಿದ್ದವು.
ಪುರಸಭೆ ಮಾಜಿ ಅಧ್ಯಕ್ಷ ಕಲ್ಯಾಣಕುಮಾರ ಶೆಟ್ಟರ, ತಾಪಂ ಉಪಾಧ್ಯಕ್ಷೆ ಅನಿತಾ ಶಿವೂರ, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಹನುಮಂತಪ್ಪ ಕೋಣನಕೊಪ್ಪ, ದಾನಪ್ಪ ಗಂಟೇರ, ಪಾಪಾಸಾಬ ಕೇಣಿ, ಮಖಬೂಲ ಅಹ್ಮದ ಸರ್ವಿಕೇರಿ, ಮಹ್ಮದ ಜಾಫರ ಕೇಣಿ, ತಾಪಂ ಇಒ ಡಾ೤ ಡಿ.ಸಿ. ಬಸವರಾಜ, ಡಾ೤ ರಾಜೇಂದ್ರ ಗೊಡ್ಡೆಮ್ಮಿ, ಬಿಇಒ ಪ್ರಭು ಸುಣಗಾರ, ಪಿಎಸ್‌ಐ ಮಹದೇವ ಯಲಿಗಾರ, ಅಭಿಯಂತ ಬಿ.ವೈ. ಬಂಡಿವಡ್ಡರ, ಕೆ.ಆರ್. ಮಠದ, ಅಬಕಾರಿ ನಿರೀಕ್ಷಕ ಕೆ. ಮೋಹನ, ಎಂ.ಎಸ್. ಸೋಮಶೇಖರ, ಎನ್.ಎಫ್. ಕಮ್ಮಾರ, ಎನ್.ಜಿ. ಅಮೃತೇಶ್ವರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement