ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಭುವನೇಶ್ವರಿ ಮೆರವಣಿಗೆಗೆ ಚಾಲನೆ

Mainashree
Updated On : 1 Nov 2013, 11:56 am

ಹಾನಗಲ್ಲ: ತಾಲೂಕು ಆಡಳಿತ ಏರ್ಪಡಿಸಿದ ಕನ್ನಡ ರಾಜ್ಯೋತ್ಸವದ ಭುವನೇಶ್ವರಿ ಮೆರವಣಿಗೆಗೆ ಶಾಸಕ ಮನೋಹರ ತಹಶೀಲ್ದಾರ ಶುಕ್ರವಾರ ಚಾಲನೆ ನೀಡಿದರು.
ನಗರದ ಕನಕದಾಸ ವೃತ್ತದಲ್ಲಿ ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಅವರು, ಅಲಂಕೃತ ಟ್ರ್ಯಾಕ್ಟರ್ ಚಲಾಯಿಸಿ ಮೆರವಣಿಗೆಗೆ ಹಸಿರು ನಿಶಾನೆ ತೋರಿದರು. ಪ್ರಮುಖ ಬೀದಿಗಳಲ್ಲಿ ಸಾಗಿದ ಮೆರವಣಿಗೆ ತಾಲೂಕು ಕ್ರೀಡಾಂಗಣ ತಲುಪಿತು.
ತಹಸೀಲ್ದಾರ್ ಡಾ೤ ನಾಗೇಂದ್ರ ಹೊನ್ನಳ್ಳಿ, ಗಣ್ಯರಾದ ಕೆ.ಎಲ್. ದೇಶಪಾಂಡೆ, ಮಾಜಿ ತಾಪಂ ಸದಸ್ಯ ದಾನಪ್ಪ ಗಂಟೇರ, ಪರಶುರಾಮ ಡೂಗನವರ, ಜಿ.ಎಂ. ಮುಲ್ಲಾ, ಅಧಿಕಾರಿಗಳಾದ ಕೆ.ಆರ್. ಮಠದ, ಬಿ.ವೈ. ಬಂಡಿವಡ್ಡರ, ಎಸ್.ಎಂ. ಸೋಮಶೇಖರ, ಕ್ಷೇತ್ರ ಶಿಕ್ಷಣಾಧಿಕಾರಿ ಸುಣಗಾರ, ಕಸಾಪ ನಿಕಟಪೂರ್ವ ಜಿಲ್ಲಾಧ್ಯಕ್ಷ ಮಾರುತಿ ಶಿಡ್ಲಾಪುರ, ಎಸ್.ಎಫ್. ಕೆಂಗಮ್ಮನವರ, ಶಿಕ್ಷಕ ಎಸ್.ಎಸ್. ಕೋಟಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement