ಸಾಮಾಜಿಕ ನ್ಯಾಯಕ್ಕೆ ಶ್ರಮಿಸಿದ ಇಂದಿರಾ
ಕನ್ನಡಪ್ರಭ ವಾರ್ತೆ, ಹಾನಗಲ್ಲ, ನ. 1
ದೇಶದ ಅಭಿವೃದ್ಧಿಯಲ್ಲಿ ಸ್ವಾತಂತ್ರ್ಯ ಪೂರ್ವದಿಂದಲೂ ಕಾಂಗ್ರೆಸ್ಸಿನ ಪಾತ್ರ ಗಣನೀಯವಾಗಿದೆ ಎಂದು ಶಾಸಕ ಮನೋಹರ ತಹಶೀಲ್ದಾರ ತಿಳಿಸಿದರು.
ಪಟ್ಟಣದ ಕಾಂಗ್ರೆಸ್ ಕಾರ್ಯಾಲಯದಲ್ಲಿ ನಡೆದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಇಂದಿರಾ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಸಮಾನತೆ ಆಧಾರದಲ್ಲಿ ದೇಶ ಕಟ್ಟಲು ಪ್ರಾಣವನ್ನೇ ತೆತ್ತ ಇಂದಿರಾ ಗಾಂಧಿ ಆದರ್ಶ ಪ್ರಧಾನಿಯಾಗಿದ್ದರು. ಬಡವರು, ನೊಂದವರ ಹಿತಕ್ಕೆ ಕೈಜೋಡಿಸಿ, ಸಾಮಾಜಿಕ ನ್ಯಾಯಕ್ಕೆ ಶ್ರಮಿಸಿದ ದಿಟ್ಟ ಮಹಿಳೆ ಅವರು. ಉಳುವವನೆ ಒಡೆಯ, ಎಲ್ಲರಿಗೂ ರೋಟಿ, ಕಪಡಾ ಔರ್ ಮಕಾನ್ ಮುಂತಾದವುಗಳ ಮೂಲಕ ಕ್ರಾಂತಿಯನ್ನೇ ಮಾಡಿದರು ಎಂದು ಶ್ಲಾಘಿಸಿದರು. ಹಾನಗಲ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಎಸ್. ಬಡಿಗೇರ ಅಧ್ಯಕ್ಷತೆ ವಹಿಸಿದ್ದರು. ಸುಭಾಸ ತಹಶೀಲ್ದಾರ, ಏಳುಕೋಟೆಪ್ಪ ಹಾವಳೇರ, ಕಾಶಿನಾಥ ನ್ಯಾಮತಿ, ಯಲ್ಲಪ್ಪ ಕಿತ್ತೂರ, ರಾಮಣ್ಣ ಮಾಸನಕಟ್ಟಿ, ಮಖಬುಲ್ ಅಹ್ಮದ ಹುಲಗೂರ, ಸಂತೋಷ ಸುಣಗಾರ, ಆರ್.ಎಸ್. ಪಾಟೀಲ, ವೀರೇಶ ಬೈಲವಾಳ, ಶಿವಾನಂದ ಹಳ್ಳೂರ, ಸುರೇಶ ನೆರ್ಕಿಮನಿ, ರಾಜೇಶ ಬಾರ್ಕಿ, ಪ್ರಭು ದೊಡ್ಡಕುರುಬರ, ಫಕ್ಕೀರೇಶ, ಎಂ.ಆರ್. ಗುತ್ತಲ, ಕೇಶವ ಶೇಷಗಿರಿ, ಅರುಣ ನಾಗಜ್ಜನವರ, ಅಪ್ಪಣ್ಣ ಪಾರಗಾಂವಕರ, ಪಾಪಾಸಾಬ ಕೇಣಿ, ಜಿ.ಎಂ. ಮುಲ್ಲಾ, ಘನಶ್ಯಾಮ ದೇಶಪಾಂಡೆ, ವಿದ್ಯಾಶಂಕರ ದೇಶಪಾಂಡೆ ಇದ್ದರು.