ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಸುದ್ದಿ ಸಂಕ್ಷೇಪ

Mainashree
Updated On : 1 Nov 2013, 11:56 am

4ರಿಂದ ಮೂರ್ತಿ ಪ್ರತಿಷ್ಠಾಪನೆ, ಧರ್ಮಸಭೆ
ಹಿರೇಕೆರೂರು: ತಾಲೂಕಿನ ಹಳ್ಳೂರು ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ಮಹಾಸ್ವಾಮಿ, ಶ್ರೀ ಮರುಳಸಿದ್ದೇಶ್ವರ ಮಹಾಸ್ವಾಮಿ, ಶ್ರೀ ಭದ್ರಕಾಳಿ ದೇವಾಲಯದ ಪ್ರವೇಶ, ನೂತನ ಶಿಲಾಮೂರ್ತಿಗಳ ಪ್ರತಿಷ್ಠಾಪನೆ, ರಾಜಗೋಪುರ ಹಾಗೂ ಕರಿಯಮ್ಮ ದೇವಿಯ ಗೋಪುರದ ಕಳಸಾರೋಹಣ ಮತ್ತು ಜನಜಾಗೃತಿ ಸಮಾವೇಶ ನ. 4, 5ರಂದು ನಡೆಯಲಿದೆ. ನ. 4ರ ಬೆಳಗ್ಗೆ 9 ಗಂಟೆಗೆ ಶ್ರೀ ಕಾಮನಾಳು ಸಿದ್ಧಪಾದ ಶಿವಾಚಾರ್ಯ ಸ್ವಾಮಿಗಳಿಂದ ಶ್ರೀ ಜಗದ್ಗುರು ಪಂಚಾಚಾರ್ಯರ ಧರ್ಮ ದ್ವಜಾರೋಹಣ ನಡೆಯಲಿದೆ. ಬಳಿಕ ದೇವಾಲಯ ಪ್ರವೇಶ, ವಿಘ್ನೇಶ್ವರ ಪೂಜೆ, ಉಮಾಮಹೇಶ್ವರಿ ಪೂಜೆ, ಪಂಚಕಲಶ ಪೂಜೆ, ನವಗ್ರಹ ಹೋಮ ಇತ್ಯಾದಿಗಳು ನಡೆಯುತ್ತವೆ. ನ. 5ರಂದು ಸಮಸ್ತ ದೇವರಿಗೆ ಅಭಿಷೇಕ, ವೀರಭದ್ರೇಶ್ವರ ಸ್ವಾಮಿಯ ಸೆರಭಿ ಗುಗ್ಗಳ, ಜಯಾದಿ ಹೋಮ, ದೇವಾಲಯ ದಿಗ್ಬಂಧನ, ಪೂರ್ಣಾಹುತಿ, ಅಷ್ಟೋತ್ತರ ಸೇವೆ ಬಳಿಕ ರಂಭಾಪುರಿಯ ಜಗದ್ಗುರು ಶ್ರೀ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳ ಪುರಪ್ರವೇಶ. ಅವರ ಸಾನ್ನಿಧ್ಯದಲ್ಲಿ ಜನಜಾಗೃತಿ ಸಭೆ ಜರುಗಲಿದೆ. ಹೊನ್ನಾಳಿ ಹಿರೇಕಲ್ಮಠದ ಸ್ಥಿರ ಪಟ್ಟಾಧ್ಯಕ್ಷ ಶ್ರೀ ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಅಧ್ಯಕ್ಷತೆ ವಹಿಸುವರು. ಕಬ್ಬಿಣಕಂತಿ ಮಠದ ಶಿವಲಿಂಗ ಶಿವಾಚಾರ್ಯರು, ಹೊಟ್ಯಾಪುರ ಹಿರೇಮಠದ ಗಿರಿಸಿದ್ಧೇಶ್ವರ ಶಿವಾಚಾರ್ಯರು, ಚನ್ನಗಿರಿ ಹಿರೇಮಠದ ಶಿವಶಾಂತ ಕೇದಾರಲಿಂಗ ಶ್ರೀಗಳು ಆಗಮಿಸುವರು. ಶಿವಮೊಗ್ಗದ ಹುಮಾಯೂನ್ ಹರ್ಲಾಪುರ ಅವರಿಂದ ಸಂಗೀತ ಸೇವೆ ಜರುಗಲಿದೆ.  ಎಂದು ಶ್ರೀ ವೀರಭದ್ರೇಶ್ವರ ಸ್ವಾಮಿ ಟ್ರಸ್ಟ್ ಕಮಿಟಿಯ ಕಾರ್ಯದರ್ಶಿ ಚಂದ್ರಶೇಖರ ಸ್ವಾಮಿ ಹಿರೇಮಠ ತಿಳಿಸಿದ್ದಾರೆ.
ಅವಧಿ ವಿಸ್ತರಣೆ
ಹಾವೇರಿ: ಕರ್ನಾಟಕ ಪಶ್ಚಿಮ ಪದವೀಧರ ಮತ ಕ್ಷೇತ್ರದಿಂದ ಕರ್ನಾಟಕ ವಿಧಾನ ಪರಿಷತ್-2014ರಲ್ಲಿ ಚುನಾವಣೆ ಜರುಗಲಿದ್ದು, ಅರ್ಹ ಪದವೀಧರರು ಗೊತ್ತುಪಡಿಸಿದ ನಮೂನೆ-18ರಲ್ಲಿ ಹಕ್ಕು ಮತ್ತು ಆಕ್ಷೇಪಣೆಗಳನ್ನು ಪೂರಕ ದಾಖಲೆಗಳೊಂದಿಗೆ ಸಂಬಂಧಪಟ್ಟ ತಹಸೀಲ್ದಾರ್ ಕಚೇರಿಗೆ ಸಲ್ಲಿಸುವ ಅವಧಿಯನ್ನು ನ. 15ರ ವರೆಗೆ ವಿಸ್ತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪಾಂಡುರಂಗ ನಾಯಕ ತಿಳಿಸಿದ್ದಾರೆ.
ಕುರುವತ್ತಿಗೌಡರ ಬಿಜೆಪಿ ಸೇರ್ಪಡೆ
ಹಾವೇರಿ: ಹಾವೇರಿ ತಾಪಂ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಪರಮೇಶ ಕುರವತ್ತಿ ಗೌಡರ ತಮ್ಮ ಬೆಂಬಲಿಗರೊಂದಿಗೆ ಬಿಜೆಪಿ ಸೇರಿದ್ದಾರೆ. ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಸರಳ ಸಮಾರಂಭದಲ್ಲಿ ತಾಲೂಕು ಅಧ್ಯಕ್ಷ ಡಾ೤ಮಲ್ಲೇಶಪ್ಪ ಹರಿಜನ ಅಧ್ಯಕ್ಷತೆಯಲ್ಲಿ, ಜಿಲ್ಲಾ ವಕ್ತಾರ ಪ್ರಭು ಹಿಟ್ನಳ್ಳಿ, ನಗರಾಧ್ಯಕ್ಷ ಗುಡ್‌ಡನಗೌಡರ ಅಂದಾನಿಗೌಡರ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪ್ರದೀಪ ಮುಳ್ಳೂರ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜ ಕಲಕೋಟಿ ಸಮ್ಮುಖದಲ್ಲಿ ಕುರವತ್ತಿಗೌಡರ ಕಮಲ ಪಕ್ಷ ಸೇರಿದರು. ರಾಷ್ಟ್ರದ ಹಿತದೃಷ್ಟಿಯಿಂದ ನರೇಂದ್ರ ಮೋದಿ ಪ್ರಧಾನಿಯಾಗಬೇಕೆಂದು ಆಶಿಸಿ ತಾವು ಬಿಜೆಪಿ ಸೇರುತ್ತಿರುವುದಾಗಿ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement