ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಉತಾರ ಲೋಪ: ಪುರಸಭೆ ಮುಂದೆ ಉಂಕಿ ಕುಟುಂಬದ ಪ್ರತಿಭಟನೆ

Vishwanath S
Updated On : 4 Nov 2013, 11:48 am

ಶಿಗ್ಗಾಂವಿ: ಆಸ್ತಿ ದಾಖಲಾತಿಯಲ್ಲಿ ಪುರಸಭೆ ಅಧಿಕಾರಿಗಳು ಲೋಪ-ದೋಷ ಎಸಗಿದ್ದಾರೆ ಎಂದು ಆರೋಪಿಸಿ ಪಟ್ಟಣದ ಅಂಕದಕಣ ಜಾಡಗೊಪ್ಪದವರ ಓಣಿಯ ಶಂಕರೆಪ್ಪ ಉಂಕಿ ಕುಟುಂಬದ ಸದಸ್ಯರು ಪುರಸಭೆ ಮುಂದೆ ಪ್ರತಿಭಟನೆ ನಡೆಸಿದರು.
ಪುರಸಭೆ ಅಧಿಕಾರಿಗಳು ಪರಿಶೀಲನೆ ಮಾಡದೆ ಆಸ್ತಿ ಉತಾರ ಕೊಟ್ಟಿದ್ದಾರೆ. ಅದರಲ್ಲಿ ಯಾರ ಆಸ್ತಿ ಎಷ್ಟಿದೆ ಎಂಬುದನ್ನು ಸ್ಪಷ್ಟವಾಗಿ ಬರೆಯದೆ ಅಳತೆಯಲ್ಲಿ ಒಬ್ಬರಿಗೆ ಕಡಿಮೆ ಇನ್ನೊಬ್ಬರಿಗೆ ಹೆಚ್ಚು ಮಾಡಿದ್ದಾರೆ. ಈ ಲೋಪ-ದೋಷ ಸರಿಪಡಿಸುವಂತೆ ಹಲವಾರು ಬಾರಿ ಲಿಖಿತವಾಗಿ ಮತ್ತು ಮೌಖಿಕವಾಗಿ ಮನವಿ ಮಾಡಲಾಗಿದೆ. ಆದರೂ ಪ್ರಯೋಜನವಾಗಿಲ್ಲ. ತಕ್ಷಣ ಮೇಲಧಿಕಾರಿಗಳು ಸ್ಥಳ ಪರಿಶೀಲನೆ ಮಾಡಬೇಕು. ನೀಡಿರುವ ಆಸ್ತಿ ಉತಾರ ಸಿ ಫಾರಂಗಳನ್ನು ತಿದ್ದುಪಡಿಸಿ ಹೊಸದಾಗಿ ಉತಾರ ನೀಡಬೇಕು ಎಂದು ಆಗ್ರಸಿದ್ದಾರೆ.
ಪುರಸಭೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ದಾಖಲೆಗಳನ್ನು ಪರಿಶೀಲಿಸಿ ನ್ಯಾಯ ನೀಡುವುದಾಗಿ ಭರವಸೆ ನೀಡಿದರು. ಶಂಕರಪ್ಪ ಗುರಪ್ಪ  ಉಂಕಿ, ಶಿವಾನಂದ ಉಂಕಿ, ಬಸಮ್ಮ ಉಂಕಿ, ಬಸವರಾಜ ಉಂಕಿ, ನೀಲಾ ಬಾಗಲಕೋಟಿ, ಮಹಾಲಕ್ಷ್ಮೀ ಉಂಕಿ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement