ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಮೋದಿ ಜನಪ್ರಿಯತೆ ಕುಗ್ಗಿಸಲು ಹುನ್ನಾರ: ವಿರೂಪಾಕ್ಷಪ್ಪ ಬಳ್ಳಾರಿ

Vishwanath S
Updated On : 4 Nov 2013, 11:47 am

ಕನ್ನಡಪ್ರಭ ವಾರ್ತೆ, ಬ್ಯಾಡಗಿ, ನ. 3
ಕುಟುಂಬ ರಾಜಕಾರಣ ನಡೆಸಲು ದೇಶದಲ್ಲಿ ರಾಜಪ್ರಭುತ್ವ ಜಾರಿಯಲ್ಲಿಲ್ಲ. ಅಭಿವೃದ್ಧಿಯಿಂದಲೇ ವಿಶ್ವಕ್ಕೆ ಪರಿ ಚಿತವಾಗಿರುವ ನರೇಂದ್ರ ಮೋದಿ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಉಳಿಯುವಂತೆ ಮಾಡಿದ್ದಾರೆ. ಆದರೆ, ರ್ಯಾಲಿಗಳಲ್ಲಿ ಬಾಂಬ್ ಸಿಡಿಸುವ ಮೂಲಕ ಮೋದಿ ಜನಪ್ರಿಯತೆಗೆ ಕಡಿವಾಣ ಹಾಕುವ ಹುನ್ನಾರ ನಡೆದಿದೆ ಎಂದು ಜಿಪಂ ಸದಸ್ಯ ವಿರೂಪಾಕ್ಷಪ್ಪ ಬಳ್ಳಾರಿ ಆರೋಪಿಸಿದರು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಬಿಜೆಪಿ ಪ್ರಧಾನಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿ ರ್ಯಾಲಿಯಲ್ಲಿ ಪಾಲ್ಗೊಳ್ಳುವ ಕಾರ್ಯಕರ್ತರಿಗೆ ಪಕ್ಷದ ಕಾರ್ಯಾಲಯದಲ್ಲಿ ರು. 10ರ ಪಾಸ್ ವಿತರಿಸಿ ಅವರು ಮಾತನಾಡಿದರು. 2014ರ ಸಾರ್ವತ್ರಿಕ ಚುನಾವಣೆಯಲ್ಲಿ ಎನ್ಡಿಎ ಮೈತ್ರಿಕೂಟ ಬಹುಮತ ಪಡೆಯುವ ಮೂಲಕ ಕಾಂಗ್ರೆಸ್ ದುರಾಡಳಿತ ಹಾಗೂ ಕುಟುಂಬ ರಾಜಕಾರಣಕ್ಕೆ ಕೊನೆ ಹಾಡಲಿದೆ. ನಿರೀಕ್ಷೆಯಂತೆ ನರೇಂದ್ರ ಮೋದಿ ಪ್ರಧಾನಿಯಾಗಲಿದ್ದಾರೆ ಎಂದರು.
ದುರ್ಬಲ ಪ್ರಧಾನಿಯೊಬ್ಬರು 10 ವರ್ಷಗಳಿಂದ ಆಡಳಿತ ನಡೆಸಿರುವುದು ವಿಶ್ವಕ್ಕೆ ತಿಳಿದಿದೆ. ಜನರಿಗೆ ಹೊಸ ಯೋಜನೆಗಳನ್ನು ಪ್ರಕಟಿಸುವುದರಿಂದ ದೇಶ ಪ್ರಗತಿ ಸಾಧಿಸುವುದಿಲ್ಲ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನ ಸಾಮಾನ್ಯರು ಬದುಕು ನಡೆಸುವುದು ದುಸ್ತರವಾಗಿದೆ. ಇಬ್ಬರು ಅರ್ಥಶಾಸ್ತ್ರಜ್ಞರು ಪ್ರಧಾನಿ ಹಾಗೂ ಹಣಕಾಸು ಸಚಿವರಾಗಿದ್ದರೂ ದೇಶ ಹಿಂದೆಂದೂ ಕಂಡರಿಯದಷ್ಟು ರುಪಾಯಿ ಅಪಮೌಲ್ಯ ಅನುಭವಿಸಿತು. ಮೋದಿ ರ್ಯಾಲಿಗೆ ಕಪ್ಪು ಹಣ ಖರ್ಚಾಗುತ್ತಿದೆ ಎಂದು ಸುಳ್ಳು ಆರೋಪ ಮಾಡುತ್ತಿರುವ ಕಾಂಗ್ರೆಸ್ ಮುಖಂಡರು ಸ್ವಿಸ್ ಬ್ಯಾಂಕ್ನಲ್ಲಿರುವ ಹಣ ಯಾವ ಬಣ್ಣದ್ದೆಂದು ದೇಶದ ಜನರಿಗೆ ಉತ್ತರಿಸಲಿ. ಮೋದಿ ಪ್ರಧಾನಿಯಾದರೆ ಇವರ ಜಾತಕ ಬಯಲಾಗುವ ಭಯ ಕಾಡುತ್ತಿದೆಯೇ ಎಂದು ಪ್ರಶ್ನಿಸಿದರು.
ಬಿಜೆಪಿ ತಾಲೂಕು ಅಧ್ಯಕ್ಷ ರಾಮಣ್ಣ ಉಕ್ಕುಂದ, ತಾಪಂ ಉಪಾಧ್ಯಕ್ಷ ಚಂದ್ರಣ್ಣ ಮುಚ್ಚಟ್ಟಿ, ಶಂಕರಗೌಡ ಪಾಟೀಲ, ಮಲ್ಲಿಕಾರ್ಜುನ ದೊಡ್ಮನಿ, ಬಿ.ಬಿ. ಬಂಗೇರ, ಮಲ್ಲನಗೌಡ ಭದ್ರಗೌಡ್ರ, ವಿಷ್ಣು ಬೆನ್ನೂರ, ಸುರೇಶ ಯತ್ನಳ್ಳಿ, ಬಸಣ್ಣ ಬೆಟಗೇರಿ, ದಿಲೀಪ ಮೇಗಳಮನಿ, ವೀರೇಂದ್ರ ಶೆಟ್ಟರ, ಸಂತೋಷ ಮೂಲಿಮನಿ, ಕರಬಸಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement