ಅನುಷಾ, ಬೀನಾಗೆ ಕನ್ನಡ ಮಾಧ್ಯಮ ಪ್ರಶಸ್ತಿ
ಹಾನಗಲ್ಲ: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕನ್ನಡ ವ್ಯಾಸಂಗ ಗೌರವವಾದ 'ಕನ್ನಡ ಮಾಧ್ಯಮ ಪ್ರಶಸ್ತಿ'ಗೆ ಹಾನಗಲ್ಲ ಜನತಾ ಬಾಲಕಿಯರ ಪ್ರೌಢಶಾಲೆಯ ಬೀನಾ ಕುರುಡೇಕರ ಹಾಗೂ ಅನುಷಾ ತಿರುಮಲೆ ಆಯ್ಕೆಯಾಗಿದ್ದಾರೆ. ಹಾನಗಲ್ಲಿನ ಜನತಾ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಬೀನಾ ಕುರುಡೇಕರ ಹಾಗೂ ಅನುಷಾ ತಿರುಮಲೆ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಕನ್ನಡ ಮಾತೃಭಾಷಾ ವಿಷಯದಲ್ಲಿ 125ಕ್ಕೆ 124 ಅಂಕ ಗಳಿಸಿ, ಈ ಗೌರವಕ್ಕೆ ಭಾಜನರಾಗಿದ್ದಾರೆ. ಸಂಸ್ಥೆಯ ಅಧ್ಯಕ್ಷ ಎ.ಎಸ್. ಬಳ್ಳಾರಿ, ಉಪಾಧ್ಯಕ್ಷ ಪಿ.ವೈ. ಗುಡಗುಡಿ, ಕಾರ್ಯದರ್ಶಿ ಎಂ.ಎಚ್. ಬಳಿಗಾರ, ಆಡಳಿತ ಮಂಡಳಿ ಸದಸ್ಯರು, ಮುಖ್ಯೋಪಾಧ್ಯಾಯ ವಿ.ಎಲ್. ಚವ್ಹಾಣ ಹಾಗೂ ಸಿಬ್ಬಂದಿ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.