ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಇಂದು ಅಹೋರಾತ್ರಿ ಸಂಗೀತ ಕಲಾ ಸೌರಭ

Lingaraj Badiger
Updated On : 6 Nov 2013, 11:23 am

ಹಾವೇರಿ: ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕ ರಾಜ್ಯೋತ್ಸವದ ಅಂಗವಾಗಿ ಅಹೋರಾತ್ರಿ ಸಾಂಸ್ಕೃತಿಕ ಸಂಗೀತ ಕಾರ್ಯಕ್ರಮ 'ಕಲಾ ಸೌರಭ'ವನ್ನು ನ. 6ರಂದು ರಾತ್ರಿ 9 ಗಂಟೆಗೆ ನಗರದ ಜಿಲ್ಲಾ ಗುರುಭವನದಲ್ಲಿ ಹಮ್ಮಿಕೊಂಡಿದೆ.
ಶಾಸ್ತ್ರೀಯ ಸಂಗಿತ, ನೃತ್ಯ, ವಾದ್ಯ ಸಂಗೀತ, ಜಾನಪದ ನೃತ್ಯ, ಸಿನೆಮಾ ಹಾಡುಗಳ ರಸಮಂಜರಿ ಒಳಗೊಂಡ 'ಕಲಾ ಸೌರಭ'ವನ್ನು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಉಪಕುಲಪತಿ ಡಾ೤ ಅಂಬಳಿಕೆ ಹಿರಿಯಣ್ಣ ಉದ್ಘಾಟಿಸಲಿದ್ದಾರೆ. ಹುಕ್ಕೇರಿ ಮಠದ ಸದಾಶಿವ ಶ್ರೀಗಳು ಸಾನ್ನಿಧ್ಯ, ಹೊಸಮಠದ ಬಸವಶಾಂತಲಿಂಗ ಶ್ರೀಗಳು ಹಾಗೂ ಹರಸೂರು ಬಣ್ಣದಮಠದ ಅಭಿನವ ರುದ್ರಚನ್ನಮಲ್ಲಿಕಾರ್ಜುನ ಶ್ರೀಗಳು ಸಮ್ಮುಖ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ನಿಂಗಪ್ಪ ಚಾವಡಿ ಅಧ್ಯಕ್ಷತೆ ವಹಿಸಲಿದ್ದಾರೆ.
ರಾತ್ರಿ 9.30ರಿಂದ ಬಾಲ ಕಲಾವಿದರಾದ ಪ್ರಿಯಂಕಾ ಕಾಶೆಟ್ಟಿ, ಸಂಜನಾ ಜೋಶಿ, ವಿದ್ಯಾ ನರಗುಂದ ಹಾಗೂ ದಿವ್ಯಾ ನಾಯ್ಕ ಭರತನಾಟ್ಯ ಪ್ರದರ್ಶಿಸುವರು. ವಾದ್ಯ ಸಂಗೀತ ಕಾರ್ಯಕ್ರಮದಲ್ಲಿ ಹುಬ್ಬಳಿಯ ಪಂ. ಶ್ರೀನಿವಾಸ ಜೋಶಿ (ಸಿತಾರ್), ಶಿಗ್ಗಾಂವಿಯ ಹನುಮಂತಪ್ಪ ಕಾಮನಹಳ್ಳಿ (ವಯೋಲಿನ್), ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಂ. ಬಸವರಾಜ ಭಜಂತ್ರಿ ಹೆಡ್ಡಿಗೊಂಡ (ಶಹನಾಯಿ ವಾದಕ) ಹಾಗೂ ಹುಬ್ಬಳಿಯ ಆದಿತ್ಯ ಕುಲಕರ್ಣಿ (ಕೊಳಲು) ಭಾಗವಹಿಸಲಿದ್ದಾರೆ.
ಧಾರವಾಡದ ಪಂ. ಬಾಲಚಂದ್ರ ನಾಕೋಡ, ಹುಬ್ಬಳ್ಳಿಯ ರೇಖಾ ಹೆಗಡೆ ಹಾಗೂ ಆಕಾಶವಾಣಿ ಕಲಾವಿದೆ ಹಾವೇರಿಯ ಭಾಗ್ಯವತಿ ಕೋಡಬಾಳ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ಪ್ರಸ್ತುತಪಡಿಸುವರು. ಗದುಗಿನ ಶಹಜಾನ ಮುದಕವಿ ಹಾಗೂ ತಂಡದಿಂದ ಜಾನಪದ ನೃತ್ಯವಿದೆ.
ಪೃಥ್ವಿ ಶಿರೂರ ಅವರಿಂದ ನೃತ್ಯ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜ್ಯೂನಿಯರ್ ರಾಜಕುಮಾರ ತಂಡದಿಂದ ರಸಮಂಜರಿ ಕಾರ್ಯಕ್ರಮಗಳು ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement