ಗಣತಿದಾರರಿಗೆ ತರಬೇತಿ
ಹಾವೇರಿ: 6ನೇ ಆರ್ಥಿಕ ಗಣತಿಯ ಮೇಲ್ವಿಚಾರಕರು, ಗಣತಿದಾರರಿಗೆ 2 ದಿನಗಳ ತರಬೇತಿ ಹುಕ್ಕೇರಿ ಮಠದ ಶ್ರೀ ಶಿವಲಿಂಗೇಶ್ವರ ಡಿ.ಎಡ್. ಕಾಲೇಜಿನಲ್ಲಿ ಜರುಗಿತು. ತಹಸೀಲ್ದಾರ್ ಪಂಪನಗೌಡ ಮೇಲ್ಸೀಮೆ ತರಬೇತಿ ಉದ್ಘಾಟಿಸಿ, ಗ್ರಾಮೀಣ ವ್ಯಾಪ್ತಿಯಲ್ಲಿ 118 ಗಣತಿದಾರರು ಹಾಗೂ 59 ಮೇಲ್ವಿಚಾರಕರು, ನಗರ ಚಾರ್ಜ್ ವ್ಯಾಪ್ತಿಯ 40 ಗಣತಿದಾರರು ಹಾಗೂ 20 ಮೇಲ್ವಿಚಾರಕರನ್ನು ಗಣತಿ ಕಾರ್ಯಕ್ಕೆ ನಿಯೋಜನೆ ಮಾಡಲಾಗಿದೆ. ನ. 1ರಿಂದ 30ರ ಅವಧಿಯಲ್ಲಿ ಗಣತಿ ಕಾರ್ಯ ಪೂರ್ಣಗೊಳಿಸಬೇಕೆಂದು ಸೂಚಿಸಿದರು. ತರಬೇತಿದಾರರಾಗಿ ಎ.ಎಂ. ಮುಲ್ಲಾ ಹಾಗೂ ಎಫ್. ಮರಡೂರ, ಕಂದಾಯ, ಸಾಂಖ್ಯಿಕ ಹಾಗೂ ಪೌರಾಡಳಿತ ಇಲಾಖೆ ಸಿಬ್ಬಂದಿ ಪಾಲ್ಗೊಂಡಿದ್ದರು.
ಕನಕ ಜಯಂತಿ ಅದ್ಧೂರಿ ಆಚರಣೆಗೆ ನಿರ್ಧಾರ
ಹಾವೇರಿ: ಕನಕದಾಸರ ಜಯಂತ್ಯುತ್ಸವವನ್ನು ನ. 20ರಂದು ನಗರದ ಮುನ್ಸಿಪಲ್ ಮೈದಾನದಲ್ಲಿ ಅದ್ಧೂರಿಯಾಗಿ ಆಚರಿಸಲಾಗುವುದು. ಅಂದು ಬೆಳಗ್ಗೆ 11 ಗಂಟೆಗೆ ಪುರಸಿದ್ದೇಶ್ವರ ದೇವಸ್ಥಾನದಿಂದ ಕನಕದಾಸರ ಭಾವಚಿತ್ರದ ಮೆರವಣಿಗೆ ಜರುಗಲಿದ್ದು, ಜಾನಪದ ಹಾಗೂ ಕಲಾ ತಂಡಗಳ ಪಾಲ್ಗೊಳ್ಳುವವು. ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮಧ್ಯಾಹ್ನ 2 ಗಂಟೆಗೆ ಮುನ್ಸಿಪಲ್ ಮೈದಾನಕ್ಕೆ ಆಗಮಿಸುವುದು. ಜಿಲ್ಲಾ ಮಟ್ಟದ ಕಾರ್ಯಕ್ರಮ ಮಧ್ಯಾಹ್ನ 3 ಗಂಟೆಗೆ ಜರುಗಲಿದೆ ಎಂದು ಜಿಲ್ಲಾಧಿಕಾರಿ ಪಾಂಡುರಂಗ ನಾಯಕ ತಿಳಿಸಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜರುಗಿದ ಕನಕ ಜಯಂತಿ ಆಚರಣೆ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಜಾನಪದ ಕಲಾ ತಂಡಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯವಸ್ಥೆ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ಕಾಗಿನೆಲೆ ಕನಕ ಗುರುಪೀಠದ ಮಹಾಸ್ವಾಮಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು. ಶಾಸಕ ಬಸವರಾಜ ಶಿವಣ್ಣನವರ, ಜಿಪಂ ಸಿಇಒ ಉಮೇಶ ಕುಸುಗಲ್ಲ, ಅಪರ ಜಿಲ್ಲಾಧಿಕಾರಿ ಶಶಿಧರ ಕುರೇರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಶಶಿಕಲಾ ಹುಡೇದ ಇದ್ದರು.
ಪೈಕಾ ಮಹಿಳಾ ಕ್ರೀಡಾಕೂಟ
ಹಾವೇರಿ: ಮಂಗಳೂರು ಜಿಪಂ, ಯುವ ಸಬಲೀಕರಣ ಮತ್ತು ಇಲಾಖೆ ಹಾಗೂ ಭಾರತೀಯ ಕ್ರೀಡಾ ಪ್ರಾಧಿಕಾರದ ಆಶ್ರಯದಲ್ಲಿ ಪ್ರಕಸ್ತ ಸಾಲಿನ ರಾಜ್ಯ ಮಟ್ಟದ ಪೈಕಾ ಮಹಿಳಾ ಕ್ರೀಡಾಕೂಟ ಗುಂಪು-3 (ಅಥ್ಲೆಟಿಕ್, ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್) ಹಾಗೂ ಗುಂಪು-4 (ಖೋಖೋ, ಕಬಡ್ಡಿ, ವಾಲಿಬಾಲ್) ಕ್ರೀಡಾಕೂಟ ನ. 14ರಿಂದ 16ರ ವರೆಗೆ ಮಂಗಳೂರು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದ ಅಥ್ಲೆಟಿಕ್ಸ್ನ 21, ಟೇಬಲ್ ಟೆನಿಸ್ 4, ಬ್ಯಾಡ್ಮಿಂಟನ್ 4, ವಾಲಿಬಾಲ್ 12, ಖೋಖೋ 10 ಕ್ರೀಡಾಪಟುಗಳು ಅರ್ಹರು. ನ. 14ರಂದು ಮಧ್ಯಾಹ್ನ 1 ಗಂಟೆಗೆ ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ವರದಿ ಮಾಡಿಕೊಳ್ಳಬೇಕು ಎಂದು ಇಲಾಖೆ ಸಹಾಯಕ ನಿರ್ದೇಶಕ ವೆ. ಮುತ್ತುಕಾಮಾಚ್ಚಿ ತಿಳಿಸಿದ್ದಾರೆ. ಕ್ರೀಡಾಪಟುಗಳಿಗೆ ಊಟ, ವಸತಿ ವ್ಯವಸ್ಥೆ ಮಾಡಲಾಗಿದೆ. ಮಾಹಿತಿಗೆ ದೂ. 08375-232070.
--