ಬಿಜೆಪಿ ಯುವಮೋರ್ಚಾಗೆ ಆಯ್ಕೆ
ಕನ್ನಡಪ್ರಭ ವಾರ್ತೆ, ಹಾವೇರಿ, ನ. 5
ಅತಿ ಶೀಫ್ರದಲ್ಲೇ ಲೋಕಸಭೆ ಚುನಾವಣೆಗಳು ಎದುರಾಗಲಿರುವ ಹಿನ್ನೆಲೆಯಲ್ಲಿ ಬಿಜೆಪಿ ಯುವ ಮೋರ್ಚಾ ಘಟಕದ ಜಿಲ್ಲಾ ಹಾಗೂ ತಾಲೂಕು ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.
ಜಿಲ್ಲಾ ಉಪಾಧ್ಯಕ್ಷರಾಗಿ ಸಂತೋಷಕುಮಾರ ಹುಣಸ್ಯಾಳ (ಶಿಗ್ಗಾಂವಿ), ಸುರೇಶ ಚಲವಾದಿ (ಬ್ಯಾಡಗಿ), ಮಹೇಶ ಕುದರಿಹಾಳ (ರಾಣಿಬೆನ್ನೂರು), ಹುಸೇನಸಾಬ ನದಾಫ್ (ಹಾವೇರಿ), ಕಾರ್ಯದರ್ಶಿಗಳಾಗಿ ಚಂದ್ರಪ್ಪ ಬಾರ್ಕಿ (ಬ್ಯಾಡಗಿ), ಪ್ರಶಾಂತ ಖಜ್ಜಿ (ತಡಸ), ರವಿಚಂದ್ರರಾಜ ಪುರೋಹಿತ (ಹಾನಗಲ್), ಖಜಾಂಚಿಯಾಗಿ ತಿಮ್ಮನಗೌಡ ಪಾಟೀಲ (ರಾಣಿಬೆನ್ನೂರು) ಅವರನ್ನು ಆಯ್ಕೆ ಮಾಡಲಾಗಿದೆ.
ಹಾವೇರಿ ನಗರ ಘಟಕದ ಅಧ್ಯಕ್ಷರಾಗಿ ವೆಂಕಟೇಶ ದೈವಜ್ಞ, ಪ್ರಧಾನ ಕಾರ್ಯದರ್ಶಿಗಳಾಗಿ ಇಮಾಮಸಾಬ ಹಿರೇಮುಗದೂರ ಮತ್ತು ಮಧುಕರ ನವಲೆ, ರಾಣಿಬೆನ್ನೂರು ನಗರದ ಅಧ್ಯಕ್ಷರಾಗಿ ಮಂಜುನಾಥ ನಿಂಗನಗೌಡ, ಪ್ರಧಾನ ಕಾರ್ಯದರ್ಶಿಯಾಗಿ ಮುರಗೇಶ ಜಂಬಗಿ, ರಾಣಿಬೆನ್ನೂರು ಗ್ರಾಮಾಂತರ ಅಧ್ಯಕ್ಷರಾಗಿ ಕಿರಣ ಅಂಗಡಿ, ಪ್ರಧಾನ ಕಾರ್ಯದರ್ಶಿಯಾಗಿ ಮಹೇಶ್ವರಗೌಡ ಪಾಟೀಲ, ಬ್ಯಾಡಗಿ ತಾಲೂಕು ಅಧ್ಯಕ್ಷರಾಗಿ ವಿಜಯ ಬಳ್ಳಾರಿ, ಪ್ರಧಾನ ಕಾರ್ಯದರ್ಶಿಯಾಗಿ ಯಲ್ಲಪ್ಪ ಕುಡಪಲಿ, ಹಿರೇಕೆರೂರು ತಾಲೂಕಿನ ಅಧ್ಯಕ್ಷರಾಗಿ ರುದ್ರೇಶ ಕೋಣನವರ, ಪ್ರಧಾನ ಕಾರ್ಯದರ್ಶಿಯಾಗಿ ರಮೇಶ ಬತವಣ್ಣವರ, ಹಾನಗಲ್ ತಾಲೂಕಿನ ಅಧ್ಯಕ್ಷರಾಗಿ ಈಶ್ವರ ನಿಂಗೋಜಿ, ಪ್ರಧಾನ ಕಾರ್ಯದರ್ಶಿಯಾಗಿ ವಿನಯ ಬಂಕನಾಳ, ಶಿಗ್ಗಾಂವಿ - ಸವಣೂರು ಕ್ಷೇತ್ರದ ಅಧ್ಯಕ್ಷರಾಗಿ ಬಸವರಾಜ ನಾರಾಯಣಪುರ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಯುವ ಮೋರ್ಚಾ ಅಧ್ಯಕ್ಷ ಪ್ರದೀಪ ಮುಳ್ಳೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
--
ಇಂದು ಕುರುಬರ ಸಂಘ ಸಭೆ
ಹಾವೇರಿ: ಕನಕ ಜಯಂತಿ ಅಂಗವಾಗಿ ಕಾಗಿನೆಲೆ ಶ್ರೀ ಕನಕ ಗುರು ಪೀಠದಲ್ಲಿ ನ. 6ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲಾ ಕುರುಬರ ಸಂಘದ ಸಭೆ ಕರೆಯಲಾಗಿದೆ. ಪೀಠದ ನಿರಂಜನಾನಂದ ಪುರಿ ಸ್ವಾಮೀಜಿ ಸಾನ್ನಿಧ್ಯ, ಸಂಘದ ಜಿಲ್ಲಾಧ್ಯಕ್ಷ ಚಂದ್ರಶೇಖರ ಮುದಕಣ್ಣನವರ ಅಧ್ಯಕ್ಷತೆ ವಹಿಸಲಿದ್ದಾರೆ. ದಲಿತ, ಹಿಂದುಳಿದ ಮಠಗಳ ಮಠಾಧೀಶರ ಒಕ್ಕೂಟಕ್ಕೆ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಶ್ರೀ ನಿರಂಜನಾನಂದಪುರಿ ಮಹಾಸ್ವಾಮೀಜಿ, ಜಿಪಂ ಅಧ್ಯಕ್ಷ ರಾಜೇಂದ್ರ ಹಾವೇರಣ್ಣನವರ, ಜಿಲ್ಲಾ ಬಿಜೆಪಿ ಅಧ್ಯಕ್ಷ ಭೋಜರಾಜ ಕರೂದಿ, ಹಾವೇರಿ ತಾಪಂ ಉಪಾಧ್ಯಕ್ಷ ಪ್ರಕಾಶ ಬಣಕಾರ, ನೂತನ ಜಿಲ್ಲಾ ನ್ಯಾಯಾಧೀಶ ಆನಂದ ಕರೆಮ್ಮನವರ, ಗುಡ್ಡಪ್ಪ ಹಳ್ಳಿಯವರ, ಕರ್ನಾಟಕ ರಾಜ್ಯ ಪ್ರದೇಶ ಕುರುಬರ ಸಂಘದ ನಿರ್ದೇಶಕಿ ತುಂಗವ್ವ ಹಾವೇರಣ್ಣನವರ, ಹುಚ್ಚಪ್ಪ ಜಡೆಣ್ಣನವರ, ಬೀರಪ್ಪ ಸಣ್ಣತಮ್ಮಣ್ಣನವರ ಅವರನ್ನು ಸನ್ಮಾನಿಸಲಾಗುತ್ತಿದೆ. ತಾಲೂಕು ಸಂಘಗಳ ಪದಾಧಿಕಾರಿಗಳು ಪಾಲ್ಗೊಳ್ಳುವಂತೆ ಪ್ರಧಾನ ಕಾರ್ಯದರ್ಶಿ ಮಾಲತೇಶ ಬಣಕಾರ ಕೋರಿದ್ದಾರೆ.