ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಶಾಲೆ ಬಿಟ್ಟ ಮಕ್ಕಳ ಸಮೀಕ್ಷೆ

Lingaraj Badiger
Updated On : 6 Nov 2013, 11:29 am

ಹಾವೇರಿ: ಜಿಲ್ಲಾದ್ಯಂತ ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆಯನ್ನು ನಿಖರವಾಗಿ ಪತ್ತೆ ಹಚ್ಚಲು ಎರಡು ಹಂತಗಳಲ್ಲಿ ಸಮೀಕ್ಷೆ ಕೈಗೊಳ್ಳಲಾಗಿದೆ ಎಂದು ಸರ್ವ ಶಿಕ್ಷಣ ಅಭಿಯಾನ ಪದನಿಮಿತ್ತ ಜಿಲ್ಲಾ ಯೋಜನಾಧಿಕಾರಿ ಎಸ್.ಬಿ. ಕೊಡ್ಲಿ ತಿಳಿಸಿದ್ದಾರೆ.
ಮೊದಲನೇ ಹಂತದಲ್ಲಿ ಶಾಲಾ ಸಮೀಕ್ಷೆ ನ. 6 ಹಾಗೂ 7ರಂದು ನಡೆಯಲಿದೆ. ಶಾಲಾ ದಾಖಲಾತಿ ವಹಿ, ವಿದ್ಯಾರ್ಥಿಗಳ ಹಾಜರಾತಿ ವಹಿ, ವರ್ಗಾವಣೆ ಪ್ರ-ಪತ್ರ ಪರಿಶೀಲಿಸುವ ಕಾರ್ಯಕ್ಕೆ ಶಿಕ್ಷಕರು, ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಇತರೆ ಇಲಾಖೆ ಸಿಬ್ಬಂದಿಯನ್ನು ಒಳಗೊಂಡ 917 ತಂಡ ರಚಿಸಲಾಗಿದೆ 138 ಪ್ರೌಢಶಾಲಾ ಸಹ ಶಿಕ್ಷಕರು ಮೇಲ್ವಿಚಾರಕರಾಗಿ, 100 ಪ್ರೌಢಶಾಲಾ ಮುಖ್ಯ ಶಿಕ್ಷಕರನ್ನು ಕ್ಲಸ್ಟರ್ ಹಂತದ ಮೇಲ್ವಿಚಾರಕರನ್ನಾಗಿ ನೇಮಿಸಲಾಗಿದೆ.
ಎರಡನೇ ಹಂತದಲ್ಲಿ ನ. 13ರಿಂದ 17ರ ವರೆಗೆ ಕುಟುಂಬ ಸಮೀಕ್ಷೆ ಮಾಡುವ ಮೂಲಕ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಪತ್ತೆ ಹಚ್ಚಲಾಗುವುದು. ಇದಕ್ಕಾಗಿ 1,187 ತಂಡ ರಚಿಸಲಾಗಿದೆ. ಶಾಲಾ ಸಮೀಕ್ಷೆಯ ಮೇಲ್ವಿಚಾರಕರೇ ಇದರಲ್ಲೂ ಕಾರ್ಯ ನಿರ್ವಹಿಸುತ್ತಾರೆ. ಸಮೀಕ್ಷೆಗಳಲ್ಲಿ ದೊರೆತ ಮಾಹಿತಿಯಂತೆ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಕ್ಲಸ್ಟರ್ ಹಂತಗಳಲ್ಲೇ ಗಣಕೀಕರಣ ಮಾಡಿ, ಮಕ್ಕಳ ಜಾಡುಹಿಡಿಯಲಾಗುವುದು. ಪ್ರತಿ ಕುಟುಂಬ, ವಸತಿಗೃಹ, ಹೋಟೆಲ್, ಆಶ್ರಮ ಶಾಲೆಗಳು, ಮದರಸಾಗಳು, ಪೂಜಾಸ್ಥಳ, ಬಸ್ ಹಾಗೂ ರೇಲ್ವೆ ನಿಲ್ದಾಣ, ಕೈಗಾರಿಕಾ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಲಾಗುವುದು. ಸಾರ್ವಜನಿಕರು ಮಾಹಿತಿಗಾಗಿ ಈ ದೂರವಾಣಿ ಸಂಪರ್ಕಿಸಬಹುದು: ಬ್ಯಾಡಗಿ: 08375-228328 / 228037, ಮೊ. 9480695246, 9480695253. ಹಾನಗಲ್ಲ: 08379-62214 / 262770, ಮೊ. 9480695247, 9480695254. ಹಾವೇರಿ: 08375-232580 / 234184,ಮೊ. 9480695248, 9480695255. ಹಿರೇಕೆರೂರು: 08376-282215 / 282270, ಮೊ. 9480695249, 9480695256. ರಾಣಿಬೆನ್ನೂರು: 08373-266671 / 260125, ಮೊ. 9480695247, 9480695254. ಸವಣೂರು: 08378-241605 / 241598, ಮೊ.  9480695251, 9480695258. ಶಿಗ್ಗಾಂವಿ: 08378-255248/255837, ಮೊ.  9480695252, 9480695259. ಜಿಲ್ಲಾ ಹಂತ: 9448999399, 9480695444, 9480695445.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement