ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಹೆಬ್ಬಾವು ಆರೋಗ್ಯ ಚೇತರಿಕೆ

Lingaraj Badiger
Updated On : 6 Nov 2013, 11:28 am

ರಾಣಿಬೆನ್ನೂರು: ಕೃಷ್ಣಮೃಗವನ್ನು ಬೇಟೆಯಾಗಿ ನುಂಗುವ ಭರದಲ್ಲಿ ಕೊಂಬು ತಗುಲಿ ತೀವ್ರವಾಗಿ ಗಾಯಗೊಂಡಿದ್ದ ಹೆಬ್ಬಾವು ಈಗ ಚೇತರಿಸಿಕೊಳ್ಳುತ್ತಿದೆ.
ಮೂರು ದಿನಗಳ ಹಿಂದೆ ಕೃಷ್ಣಮೃಗ ನುಂಗಿ ಉಸಿರಾಡಲೂ ಒದ್ದಾಡುತ್ತಿದ್ದ ಹೆಬ್ಬಾವನ್ನು ನಗರದ ಹೊರವಲಯದ ಮೇಡ್ಲೆರಿ ರಸ್ತೆಯಲ್ಲಿರುವ ಕೃಷ್ಣಮೃಗ ಅರಣ್ಯ ವಿಶ್ರಾಂತಿ ಧಾಮಕ್ಕೆ ತಂದು ಚಿಕಿತ್ಸೆ ಕೊಡಿಸಲಾಗುತ್ತಿದೆ. ಅದನ್ನು ವೀಕ್ಷಿಸಲು ನೂರಾರು ಜನರು ಬರುತ್ತಿದ್ದಾರೆ. ಕೃಷ್ಣಮೃಗದ ಕೊಂಬುಗಳು ಹೆಬ್ಬಾವಿನ ಹೊಟ್ಟೆಯನ್ನು ಸೀಳಿ ಗಾಯವಾಗಿತ್ತು. ನಗರದ ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕ ಡಾ೤ ಪರಮೇಶ ಎನ್. ಹುಬ್ಬಳ್ಳಿ ಅದಕ್ಕೆ ಚಿಕಿತ್ಸೆ ನೀಡಿದ್ದಾರೆ. ಗಾಯಕ್ಕೆ ಇರುವೆ ಮತ್ತು ಗೊದ್ದಗಳು ಹತ್ತಭಾರದೆಂದು ವನ್ಯಜೀವಿ ಸಂರಕ್ಷಣಾಧಿಕಾರಿ ಬಿ.ಆರ್. ಲಕ್ಷ್ಮೀನಾರಾಯಣ ಮತ್ತು ಸಿಬ್ಬಂದಿ ಬೇವಿನೆಣ್ಣೆ ಮತ್ತು ಅರಶಿಣ ಪುಡಿ ಸಿಂಪಡಿಸಿದ್ದಾರೆ. ಪ್ರವಾಸಿ ಮಂದಿರದ ಕೊಠಡಿಯಲ್ಲಿ ಹಾವನ್ನು ಸಂರಕ್ಷಿಸಲಾಗಿದೆ. ಗಾಯಗೊಂಡ ಹೆಬ್ಬಾವನ್ನು ತಮಗೆ ತೋರಿಸಬೇಕೆಂದು ಸಾರ್ವಜನಿಕರು ವಲಯ ಅರಣ್ಯಾಧಿಕಾರಿಗಳಾದ ಶ್ರೀಧರ ತೆಗ್ಗಿನಮನಿ ಮತ್ತು ಬಿ.ಆರ್. ಲಕ್ಷ್ಮೀನಾರಾಯಣ ಅವರಿಗೆ ದುಂಬಾಲು ಬೀಳುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು.
ಮಂಗಳವಾರ ಬೆಳಗ್ಗೆ ಡಾ೤ ಪರಮೇಶ್ ಹೆಬ್ಬಾವಿಗೆ ಚಿಕಿತ್ಸೆ ನೀಡಲು ಬಂದಾಗ ಅದು ಸ್ಪಂದಿಸಿದೆ. ಇನ್ನೆರಡು ದಿನ ಚಿಕಿತ್ಸೆ ಕೊಡಿಸಿ, ಮೇಲಧಿಕಾರಿಗಳ ಸೂಚನೆ ಮೇರೆಗೆ ಬೇರೆಡೆಗೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳುವುದಾಗಿ ಲಕ್ಷ್ಮೀನಾರಾಯಣ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement