ಗೋಡಿಹಾಳ: ಮೆಕ್ಕೆಜೋಳ ಬೆಳೆ ಕ್ಷೇತ್ರೋತ್ಸವ
ರಾಣಿಬೆನ್ನೂರು: ಮೆಕ್ಕೆಜೋಳ ಬಿತ್ತನೆ ಮಾಡಿ 30ರಿಂದ 40 ದಿನಗಳಲ್ಲಿ ಕಂಡುಬರುವ ರೋಗಗಳನ್ನು ನಿಯಂತ್ರಿಸಲು ತಜ್ಞರ ಸಲಹೆ ಮೇರೆಗೆ ಉಪಚಾರ ಕೈಗೊಂಡಲ್ಲಿ ಉತ್ತಮ ಇಳುವರಿ ಸಾಧ್ಯ ಎಂದು ಪಯೋನಿಯರ್ ಕಂಪನಿಯ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಶಾಂತರೆಡ್ಡಿ ಯರೇಕುಪ್ಪಿ ತಿಳಿಸಿದರು.
ಪಯೋನಿಯರ್ ಬೀಜೋತ್ಪಾದನಾ ಕಂಪನಿ ತಾಲೂಕಿನ ಗೋಡಿಹಾಳ ಗ್ರಾಮದ ಪ್ರಗತಿಪರ ರೈತ ಸುರೇಶ ರಾಮರೆಡ್ಡಿ ಸಣ್ಣಪ್ಪನವರ ಹೊಲದಲ್ಲಿ ಏರ್ಪಡಿಸಿದ್ದ ಮೆಕ್ಕೆಜೋಳ ಕ್ಷೇತ್ರೋತ್ಸವದಲ್ಲಿ ಮಾತನಾಡಿದ ಅವರು, ರೈತರಿಗೆ ಅಗತ್ಯ ಮಾಹಿತಿ ತಿಳಿಸಿಕೊಟ್ಟರು. ಪ್ರಗತಿಪರ ರೈತ ಹಾಲಪ್ಪ ಮಾಗನೂರು ಕ್ಷೇತ್ರೋತ್ಸವ ಉದ್ಘಾಟಿಸಿದರು. ಕಂಪನಿ ವ್ಯವಸ್ಥಾಪಕ ಮಲ್ಲೇಶಪ್ಪ ಬತ್ತಿಕೊಪ್ಪದ, ರೈತರಾದ ಕೆಂಚಪ್ಪ, ಬಸನಗೌಡ ಹುಲ್ಲತ್ತಿ, ವೀರನಗೌಡ ಪಾಟೀಲ, ವಿರೂಪಾಕ್ಷಪ್ಪ ಉದಗಟ್ಟಿ, ಚಂದ್ರಯ್ಯ ಮಳಿಮಠ, ಕುಮಾರ ಎಳೆಹೊಳಿ, ಕುಪ್ಪೆಲೂರು ಗ್ರಾಪಂ ಅಧ್ಯಕ್ಷೆ ಅನ್ನಪೂರ್ಣಾ ಪರಸಣ್ಣನವರ, ನಿಟ್ಟೂರು ಗ್ರಾಪಂ ಅಧ್ಯಕ್ಷ ಮಹೇಶಪ್ಪ ಬಂದಾಳಿ ಮಾತನಾಡಿದರು. ಗ್ರಾಮಸ್ಥರಾದ ಹನುಮಂತಗೌಡ ಸಂಕನಗೌಡ್ರ, ಪರಮೇಶಪ್ಪ ನಂದಿಹಳ್ಳಿ, ವಿಶ್ವನಾಥ ಜಿಗಳಿ ಹಾಗೂ ನಿಟ್ಟೂರು, ಕೋಣನತಲಿ, ಕುಪ್ಪೆಲೂರು, ಚಿಕ್ಕಮಾಗನೂರು, ಹಿರೇಮಾಗನೂರು, ಯಲಬಡಗಿ, ದಂಡಗಿಹಳ್ಳಿ, ನಂದಿಹಳ್ಳಿ ಗ್ರಾಮಗಳ ರೈತರು ಭಾಗವಹಿಸಿದ್ದರು.