ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ವ್ಯಕ್ತಿ, ಸಮಾಜ ಅಭಿವೃದ್ಧಿಯಾಗಲಿ

Vishwanath S
Updated On : 7 Nov 2013, 11:22 am

ಕನ್ನಡಪ್ರಭ ವಾರ್ತೆ, ಹಿರೇಕೆರೂರ, ನ. 6
ವ್ಯಕ್ತಿ ಹಾಗೂ ಸಮಾಜದ ಅಭಿವೃದ್ಧಿಯಿಂದ ದೇಶದ ಅಭಿವೃದ್ಧಿ ಸಾಧ್ಯ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಮಹಿಳಾ ಸಬಲೀಕರಣದಲ್ಲಿ ಮುಂಚೂಣಿಯಲ್ಲಿದೆ ಎಂದು ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ರಾಘವೇಂದ್ರ ಹಂಚಿನಮನಿ ತಿಳಿಸಿದರು.
ರಟ್ಟಿಹಳ್ಳಿಯ ಶ್ರೀ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಕಾರ್ಯಕ್ರಮದ ಅಂಗವಾಗಿ ಚಿಣ್ಣರ ಮೇಳದಲ್ಲಿ ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಉಪನ್ಯಾಸ ನೀಡಿದ ಅವರು, ಇಂದಿನ ಶಿಕ್ಷಣ ಮಕ್ಕಳಿಗೆ ನೈತಿಕ ಶಿಕ್ಷಣ ಕೊಡಲು ವಿಫಲವಾಗಿದೆ. ಮನೆಯೇ ಮೊದಲ ಪಾಠಶಾಲೆ ಜನನಿ ತಾಯಿ ಮೊದಲ ಗುರುವು ಎಂಬುದನ್ನು ಮಹಿಳೆಯರು ಅರ್ಥ ಮಾಡಿಕೊಳ್ಳಬೇಕು. ಮನೆಯಲ್ಲಿ ತಾಯಿಯಿಂದಲೇ ಮಗುವಿನ ಕಲಿಕೆ ಆರಂಭವಾಗುತ್ತದೆ. ಧಾರಾವಾಹಿ ಜಗತ್ತಿನಲ್ಲಿ ಮುಳುಗಿರುವ ಮಹಿಳೆಯರು ಅವುಗಳಲ್ಲಿ ಶೇ. 1ರಷ್ಟು ಮಾತ್ರ ಒಳ್ಳೆಯ ಅಂಶಗಳಿವೆ. ಉಳಿದೆಲ್ಲ ಸರಕುಗಳು ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತವೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಲಯನ್ಸ್ ಕ್ಲಬ್ ಸದಸ್ಯ ವೈ.ಎಲ್. ಬಾಜಿರಾಯರ ಕಾರ್ಯಕ್ರಮ ಉದ್ಘಾಟಿಸಿದರು. ಜಿಪಂ ಮಾಜಿ ಉಪಾಧ್ಯಕ್ಷ ಆರ್.ಜಿ. ದ್ಯಾವಕ್ಕಳವರ, ತಾಪಂ ಸದಸ್ಯೆ ಪ್ರಭಾವತಿ ಕುಲಕರ್ಣಿ, ಯೋಜನೆ ನಿರ್ದೇಶಕ ವಸಂತ ಸಾಲಿಯಾನ, ವಲಯ ಮೇಲ್ವಿಚಾರಕ ಸುಧಾಕರ, ಜ್ಞಾನ ವಿಕಾಸ ಯೋಜನೆಯ ಸಂಯೋಜಕಿ ನಾಗರತ್ನಾ ಮುದ್ದಪ್ಪಳವರ, ನಿರ್ಮಲಾ ಕಲ್ಲೋಳ, ರೂಪಾ ಅಂಬ್ಲೇರ, ರತ್ನಾ ಕಟ್ಟಿಮನಿ, ಮಾನಸಾ ಮಾಳಗೊಂಡರ, ಜೀಜಾಬಾಯಿ ವೆರ್ಣೇಕರ, ರೂಪಾ ತೊಗರ್ಸಿ, ಶಾರದಾ ಚಕ್ರಸಾಲಿ, ವಿನೋದಾ ಬೊಂಗಾಳೆ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement