ಇಂದು ತಾಯಮ್ಮ ದೇವಿ ರಥೋತ್ಸವ
ಶಿಗ್ಗಾಂವಿ: ತಡಸ ಗ್ರಾಮದಿಂದ 5 ಕಿ.ಮೀ. ದೂರದಲ್ಲಿ ಶಿರಸಿ ರಸ್ತೆ ಪಕ್ಕದಲ್ಲಿರುವ ತಾಯಮ್ಮನ ದೇವಸ್ಥಾನದ ಜಾತ್ರಾ ಮಹೋತ್ಸವ ನ. 8ರಂದು ಜರುಗಲಿದೆ. ಶುಕ್ರವಾರ ಸಂದೆ 4.15ಕ್ಕೆ ರಥೋತ್ಸವ. ಶಿಗ್ಗಾಂವಿ-ಸವಣೂರು ಶಾಸಕ ಬಸವರಾಜ ಬೊಮ್ಮಾಯಿ, ಜಿಪಂ ಸದಸ್ಯ ಸಿ.ಎಸ್. ಪಾಟೀಲ, ತಾಪಂ ಸದಸ್ಯೆ ಸುಗಂಧಾಬಾಯಿ ಘೋಡಖೆ, ಗ್ರಾಪಂ ಅಧ್ಯಕ್ಷೆ ಶಂಕ್ರಮ್ಮ ಸೊರಟಿ ಪಾಲ್ಗೊಳ್ಳುವರು. ನ. 9ರಂದು ಸಂಜೆ 4.15ಕ್ಕೆ ಕಡುಬಿನ ಕಾಳಗ ಜರುಗುವುದು ಎಂದು ತಾಯಮ್ಮದೇವಿ ಟ್ರಸ್ಟ್ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
ಶಾಸಕ ಬೊಮ್ಮಾಯಿ ಈ ದೇವಾಲಯಕ್ಕೆ ವಿದ್ಯುತ್ ಸಂಪರ್ಕ ಮಾಡಿಸಿಕೊಟ್ಟಿದ್ದಾರೆ. ಈ ಮಾರ್ಗದಲ್ಲಿ ಓಡಾಡುವ ವಾಹನಗಳ ಚಾಲಕರು ತಾಯಮ್ಮ ದೇವಿಗೆ ಭಕ್ತಿಯಿಂದ ನಡೆದುಕೊಳ್ಳುತ್ತಿದ್ದಾರೆ. ದೀಪಾವಳಿ ಕಳೆದ ಮೇಲೆ ಈ ಭಾಗದಲ್ಲಿ ನಡೆಯುವ ಮೊದಲ ಜಾತ್ರೆ ಇದು. ದೇಗುಲದ ಆವರಣದಲ್ಲಿ ಈಶ್ವರ, ಬಸವಣ್ಣ, ಆಂಜನೇಯ ದೇವಸ್ಥಾನವಿದ್ದು, ಭಕ್ತರು ನೀಡುವ ಬಾಳೆಹಣ್ಣು, ತೆಂಗಿನಕಾಯಿ ತಿನ್ನಲು ಕೋತಿಗಳ ದಂಡೇ ನೆರೆದಿರುತ್ತದೆ. ಭಜನೆ, ಕೋಲಾಟ, ಡೊಳ್ಳು ಕುಣಿತ ಮುಂತಾದವು ರಥೋತ್ಸವಕ್ಕೆ ಶೋಭೆ ನೀಡಲಿವೆ.