ಕಾಗಿನಲೆ ಶ್ರೀಗಳಿಗೆ ಕುರುಬರ ಸಂಘದಿಂದ ಸನ್ಮಾನ
ಹಾವೇರಿ: ಹಿಂದುಳಿದ, ದಲಿತ ವರ್ಗಗಳ ಮಠಾಧೀಶರ ಒಕ್ಕೂಟದ ಅಧ್ಯಕ್ಷರಾಗಿ ಮರು ನೇಮಕವಾದ ಕಾಗಿನೆಲೆ ಕನಕ ಗುರು ಪೀಠದ ಜಗದ್ಗುರು ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳನ್ನು ಹಾವೇರಿ ಜಿಲ್ಲಾ ಕುರುಬರ ಸಂಘ ಸನ್ಮಾನಿಸಿ, ಗೌರವಿಸಿತು.
ಶ್ರೀ ಕನಕ ಗುರು ಪೀಠದಲ್ಲಿ ಜಿಲ್ಲಾ ಗುರುಬರ ಸಂಘದ ಅಧ್ಯಕ್ಷ ಚಂದ್ರಶೇಖರ ಮುದಕ್ಕಣ್ಣನವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಶ್ರೀಗಳು ಹಾಗೂ ಸಮಾಜದ ಗಣ್ಯರನ್ನು ಸನ್ಮಾನಿಸಲಾಯಿತು. ಸಂಘದ ಪ್ರಧಾನ ಕಾರ್ಯದರ್ಶಿ ಮಾಲತೇಶ ಬಣಕಾರ, ಜಿಪಂ ಮಾಜಿ ಅಧ್ಯಕ್ಷ ಶಂಕ್ರಪ್ಪ ಮಾತನವರ, ಮುಖಂಡರಾದ ಡಾ ಮೋಹನ ಹಂಡೆ, ಮರಿಗೆಪ್ಪ ಪೂಜಾರ, ದಾನಪ್ಪ ಗಂಟೆರ್, ಶೇಖಪ್ಪ ಉಕ್ಕುಂದ, ಪ್ರದೇಶ ಕುರುಬ ಸಂಘದ ನಿರ್ದೇಶಕಿ ತುಂಗವ್ವ ಹಾವೇರಣ್ಣನವರ, ಹುಚ್ಚಪ್ಪ ಜೆಡೆಣ್ಣನವರ, ಬೀರಪ್ಪ ಸಣ್ಣತಮ್ಮಣ್ಣನವರ, ಸತೀಶ ಆಲದಕಟ್ಟಿ, ರಾಮಣ್ಣ ರಾಣೋಜಿ, ಕುಮಾರ ಯಲವಗಿ, ಹುಚ್ಚಪ್ಪ ಬರಮಣ್ಣನವರ, ಡಿ.ಎನ್. ಕೊಡಲ, ಕುಮಾರ ಹುಲ್ಲತ್ತಿ, ಪರಸಪ್ಪ ಸಂಗೂರ, ನ್ಯಾಯವಾದಿ ಪ್ರಕಾಶ ಚಳ್ಳಮರದ, ನಾಗರಾಜ ಬಡ್ಡಿ ಖಡೇಗೌಡ ಪಾಟೀಲ ಇದ್ದರು.