ಜ್ವರ ಬಾಧೆಗೆ 10 ಹಸುಗಳು ಬಲಿ
ಕೂಡ್ಲಿಗಿ: ತಾಲೂಕಿನ ಹಲವು ಹಳ್ಳಿಗಳಲ್ಲಿ ಕಾಲುಬಾಯಿ ರೋಗಬಾಧೆಯಿಂದ ಜಂಗಮ ಸೋವೇನಹಳ್ಳಿಯಲ್ಲಿ ಅಕ್ಟೋಬರ್ನಲ್ಲಿ 10ಕ್ಕೂ ಹೆಚ್ಚು ಜಾನುವಾರುಗಳು ಅಸುನೀಗಿವೆ. ಜಾನುವಾರುಗಳ ಸಾವಿಗೆ ಕಾಲುಬಾಯಿ ರೋಗವೆ ಕಾರಣ ಎಂದು ರೈತರು ಹೇಳುತ್ತಿದ್ದು, ಪಶುವೈದ್ಯಾಧಿಕಾರಿಗಳು ಮಾತ್ರ ಈ ರೋಗದ ಲಕ್ಷಣ ಕಂಡುಹಿಡಿಯಲು ಸತ್ತ ಜಾನುವಾರುಗಳ ರಕ್ತದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಬೇಕಾಗುತ್ತದೆ. ನಂತರ ಸಾವಿಗೆ ಕಾರಣ ತಿಳಿದು ಬರುತ್ತದೆ ಎನ್ನುತ್ತಾರೆ. ತಾಲೂಕು ಕೇಂದ್ರದಿಂದ 15 ಕಿ.ಮೀ. ದೂರದಲ್ಲಿರುವ ಜಂಗಮ ಸೋವೇನಹಳ್ಳಿಯಲ್ಲಿ ಈಗಾಗಲೇ 10ಕ್ಕೂ ಹಸು, ಕರುಗಳು ಸಾವನ್ನಪ್ಪಿವೆ. ಮಂಗಳವಾರ ಗ್ರಾಮದ ಮಲ್ಲಿಕಾರ್ಜುನಪ್ಪ ಎಂಬುವವರ ಹಸು ಸಾವಿಗೀಡಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.