ಪದವೀಧರ ಮತದಾರರ ನೋಂದಣಿಗೆ ಚಾಲನೆ
ಶಿಗ್ಗಾಂವಿ: ಪಟ್ಟಣದ ಕಾಂಗ್ರೆಸ್ ಕಾರ್ಯಾಲಯದಲ್ಲಿ ಮತ ಯಾದಿಗೆ ಪದವೀಧರರ ಸೇರ್ಪಡೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಶಾಸಕ ಅಜ್ಜಂಪೀರ ಖಾದ್ರಿ, ಬಡವರಿಗಾಗಿ ರು. 1ರಲ್ಲಿ ಕೆಜಿ ಅಕ್ಕಿ ವಿತರಣೆ ಆರಂಭಿಸಿದ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಅಲ್ಪ ಅವಧಿಯಲ್ಲೇ ಹಲವಾರು ಜನಪರ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದೆ. ಕೇಂದ್ರ ಸರ್ಕಾರವೂ ಉದ್ಯೋಗ ಖಾತ್ರಿಯಂಥ ಮಹತ್ವದ ಯೋಜನೆ ರೂಪಿಸಿದೆ ಎಂದು ಶ್ಲಾಘಿಸಿದರು.
ಅಖಿಲ ಕರ್ನಾಟಕ ಪದವೀಧರರ ಒಕ್ಕೂಟದ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಟಿ. ಈಶ್ವರ ಮಾತನಾಡಿ, ಇನ್ನೂ ಮತದಾನದ ಹಕ್ಕು ಪಡೆಯದ ಪದವೀಧರರನ್ನು ಮತದಾರರ ಯಾದಿಗೆ ನೋಂದಾಯಿಸುವ ಪ್ರಕ್ರಿಯೆಯಲ್ಲಿ ಎಲ್ಲ ಅರ್ಹರೂ ಪಾಲ್ಗೊಳ್ಳಬೇಕು. ಮುಂದಿನ ಚುನಾವಣೆಯಲ್ಲಿ ಬಿಜೆಪಿ-ಕೆಜೆಪಿಯನ್ನು ಸೋಲಿಸಿ, ಸರ್ಕಾರದ ಕೈ ಬಲಪಡಿಸಬೇಕು ಎಂದರು.
ಕಾಂಗ್ರೆಸ್ ಅಧ್ಯಕ್ಷ ಎಂ.ಎನ್. ವೆಂಕೋಜಿ ಅಧ್ಯಕ್ಷತೆ ವಹಿಸಿದ್ದರು. ನ್ಯಾಯವಾದಿಗಳಾದ ಡಿ.ಎಂ. ಸಾಲಿ, ಸಿ.ಎಸ್. ನಡುವಿನಮಠ, ಎಸ್.ಎ. ಫರೋಕಿ, ಸಿ.ವಿ. ಮತ್ತಿಗಟ್ಟಿ, ಕಾಂಗ್ರೆಸ್ ಮುಖಂಡರಾದ ಚಂದ್ರಣ್ಣ ನಡುವಿನಮನಿ, ಪಿ.ಎನ್. ಹಾವಣಗಿ, ಮಲ್ಲಿಕಾರ್ಜುನಗೌಡ್ರ ಪಾಟೀಲ, ಎಸ್.ಎಫ್. ಮಣಕಟ್ಟಿ, ಬಸನಗೌಡ್ರ ದುಂಡಿಗೌಡ್ರ, ಸತೀಶ ಟೋಪಣ್ಣನವರ, ಶಿವಾನಂದ ಬಾಗೂರ, ಬಸವರಾಜ ಬೆಟಗೇರಿ, ಎಫ್.ಸಿ. ಪಾಟೀಲ, ಕುಮಾರ ಯಲವಿಗಿ, ಹೊಂದಕಟ್ಟಿ ವೇದಿಕೆ ಇದ್ದರು. ಹನಮರೆಡ್ಡಿ ನಡುವಿನಮನಿ ಸ್ವಾಗತಿಸಿದರು.