ಪ್ರಾರ್ಥನಾ ಮಂದಿರ ತೆರವಿಗೆ ಆಗ್ರಹ
ಹಾನಗಲ್ಲ: ಪಟ್ಟಣದ ಹೊರಭಾಗದಲ್ಲಿರುವ ನವನಗರ ಬಡಾವಣೆಯಲ್ಲಿ ಅನಧಿಕೃತವಾಗಿ ನಿರ್ಮಿಸುತ್ತಿರುವ ಪ್ರಾರ್ಥನಾ ಮಂದಿರ ಕಟ್ಟಡವನ್ನು ಕೂಡಲೇ ತೆರವುಗೊಳಿಸಬೇಕೆಂದು ಒತ್ತಾಯಿಸಿ ಸಾರ್ವಜನಿಕರು ಶುಕ್ರವಾರ ತಹಸೀಲ್ದಾರ್ಗೆ ಮನವಿ ಅರ್ಪಿಸಿದ್ದಾರೆ.
ಹಾನಗಲ್ಲ ಪುರಸಭೆ ವ್ಯಾಪ್ತಿಯ ನವನಗರದಲ್ಲಿರುವ ಕೆರೆ ಪಕ್ಕದಲ್ಲಿ ಅನಧಿಕೃತವಾಗಿ ಪ್ರಾರ್ಥನಾ ಮಂದಿರ ನಿರ್ಮಿಸಲಾಗುತ್ತಿದೆ. ಈ ಜಾಗೆ ಪುರಸಭೆ ಆಸ್ತಿ. ಇದರಲ್ಲಿ ಪರವಾನಗಿ ಪಡೆಯದೆ ಕಟ್ಟಡ ನಿರ್ಮಿಸುತ್ತಿರುವುದು ಕಾನೂನುಬಾಹಿರ. ಸರ್ಕಾರಿ ಆಸ್ತಿಯ ದುರುಪಯೋಗವೂ ಆಗಿದೆ. ಹೀಗಾಗಿ, ಸಂಬಂಧಿಸಿದ ಇಲಾಖೆಗಳಿಗೆ ಸೂಚಿಸಿ ತಕ್ಷಣ ಕಟ್ಟಡ ತೆರವುಗೊಳಿಸಬೇಕೆಂದು ಮನವಿ ಮಾಡಲಾಗಿದೆ. ತಹಸೀಲ್ದಾರ್ ಡಾ ನಾಗೇಂದ್ರ ಹೊನ್ನಳ್ಳಿ ಪ್ರತಿಕ್ರಿಯಿಸಿ, ಪಟ್ಟಣದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ವ್ಯಕ್ತಿಗಳ ಮೇಲೆ ತೀವ್ರ ನಿಗಾ ವಹಿಸಲಾಗುವುದು, ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು. ಸಾರ್ವಜನಿಕರು ಶಾಂತಿ ಕಾಪಾಡಲು ಸಹಕರಿಸಿ ಎಂದರು.
ಪ್ರಮುಖರಾದ ಈಶ್ವರ ನಿಂಗೋಜಿ, ರವಿಚಂದ್ರ ಪುರೋಹಿತ, ಚೇತನ ಬೆಂಡಿಗೇರಿ, ಈಶ್ವರ ತೋರಗಲ್ಲ, ಮನೋಜ ಕಲಾಲ, ಮಾಲತೇಶ ತುಮರಿಕೊಪ್ಪ, ವಿಶ್ವ ಬೇದ್ರೆ, ಮಾಲತೇಶ ಸಾತಪತಿ, ಮಾಲತೇಶ ಲಾತೂರಿ, ನಾರಾಯಣ ಬೋವೇರ, ನಿರಂಜನ ವಿ.ಎಸ್. ಇದ್ದರು.