ಇಂದು ದೇವಸ್ಥಾನ ಉದ್ಘಾಟನೆ
ಬ್ಯಾಡಗಿ: ಅಂಗರಗಟ್ಟಿ ಗ್ರಾಮದ ದುರ್ಗಾದೇವಿ ದೇವಸ್ಥಾನದ ಕಟ್ಟಡ ಉದ್ಘಾಟನೆ, ದುರ್ಗಾದೇವಿ ಹಾಗೂ ಮರಿಯಮ್ಮ ದೇವಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ನ. 10ರಿಂದ 12ರ ವರೆಗೆ ನಡೆಯಲಿದೆ. ನ. 10ರಂದು ದೇವಿಮೂರ್ತಿಗಳನ್ನು ಗ್ರಾಮಕ್ಕೆ ತರಲಾಗುವುದು. 11ರಂದು ಬೆಳಗಿನ ಜಾವ ದೇವಾಲಯದ ಪ್ರವೇಶೋತ್ಸವ ಹಾಗೂ ದೇವಿಮೂರ್ತಿ ಪುರಪ್ರವೇಶ, 12ರಂದು ಬೆಳಗ್ಗೆ 10 ಗಂಟೆಗೆ ಪ್ರಾಣ ಪ್ರತಿಷ್ಠಾಪನೆ, ಮಧ್ಯಾಹ್ನ 12ಕ್ಕೆ ಧರ್ಮ ಜಾಗೃತಿ ಸಭೆ, ಸಂಜೆ ಭದ್ರಾವತಿ ಫ್ರೆಂಡ್ಸ್ ಅವರ ರಸಮಂಜರಿ ಇದೆ. ಸಂಸದ ಶಿವಕುಮಾರ ಉದಾಸಿ ಧಾರ್ಮಿಕ ಸಭೆ ಉದ್ಘಾಟಿಸಲಿದ್ದು, ರಟ್ಟಿಹಳ್ಳಿ ಕಬ್ಬಿಣಕಂತಿ ಮಠದ ಶಿವಲಿಂಗ ಶಿವಾಚಾರ್ಯ ಶ್ರೀ ಸಾನ್ನಿಧ್ಯ ವಹಿಸುವರು. ಶಾಸಕ ಬಸವರಾಜ ಶಿವಣ್ಣನವರ ಅಧ್ಯಕ್ಷತೆ ವಹಿಸಲಿದ್ದು, ಅತಿಥಿಗಳಾಗಿ ಮಾಜಿ ಸಚಿವ ಸಿ.ಎಂ. ಉದಾಸಿ, ಮಾಜಿ ಶಾಸಕ ಸುರೇಶಗೌಡ, ಜಿಪಂ ಅಧ್ಯಕ್ಷ ರಾಜೇಂದ್ರ ಹಾವೇರಣ್ಣನವರ, ಸದಸ್ಯರಾದ ಶಂಕ್ರಣ್ಣ ಮಾತನವರ, ವಿರೂಪಾಕ್ಷಪ್ಪ ಬಳ್ಳಾರಿ, ಎಪಿಎಂಸಿ ಸದಸ್ಯ ಎಸ್.ಸಿ. ಶಿಡೇನೂರ, ತಾಪಂ ಸದಸ್ಯ ಚನ್ನಬಸಪ್ಪ ದೇಸಾಯಿ, ಗ್ರಾಪಂ ಅಧ್ಯಕ್ಷೆ ಗಂಗವ್ವ ಮಾಳಗಿ, ಸದಸ್ಯರಾದ ಪುಟ್ಟವ್ವ ಓಲೇಕಾರ, ಬಸವರಾಜ ಕಾಕೋಳ ಆಗಮಿಸುವರು.
ನಾಳೆ ಪಂಜಿನ ಮೆರವಣಿಗೆ
ಬ್ಯಾಡಗಿ: ನರೇಂದ್ರ ಮೋದಿ ರ್ಯಾಲಿ ಬೆಂಬಲಿಸಿ ಬಿಜೆಪಿ ಯುವಮೋರ್ಚಾ ತಾಲೂಕ ಘಟಕ ನ. 11 ಸಂಜೆ ಪಂಜಿನ ಮೆರವಣಿಗೆ ಹಮ್ಮಿಕೊಂಡಿದೆ. ನ. 17ರಂದು ಬೆಂಗಳೂರಿನಲ್ಲಿ ಕಾರ್ಯಕರ್ತರ ಬೃಹತ್ ಸಮಾವೇಶ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಪಂಜಿನ ಮೆರವಣಿಗೆ ಮೂಲಕ ಅರಿವು ಮೂಡಿಸಲು ತಾಲೂಕ ಘಟಕ ನಿರ್ಧರಿಸಿದೆ ಎಂದು ಅಧ್ಯಕ್ಷ ವಿಜಯಭರತ್ ಬಳ್ಳಾರಿ, ಕಾರ್ಯದರ್ಶಿ ವೈ.ಎಚ್. ಕುಡಪಲಿ, ಜಿಲ್ಲಾ ಘಟಕದ ಉಪಾಧ್ಯಕ್ಷ ಸುರೇಶ ಚಲವಾದಿ ತಿಳಿಸಿದ್ದಾರೆ.
ಹಾವೇರಿ ಕ್ಷೇತ್ರಕ್ಕೆ ಬಿಜೆಪಿ ಪದಾಧಿಕಾರಿಗಳ ನೇಮಕ
ಹಾವೇರಿ: ವಿಧಾನಸಭೆ ಕ್ಷೇತ್ರದ ಬಿಜೆಪಿ ಪದಾಧಿಕಾರಿಗಳನ್ನು ಪಕ್ಷದ ಅಧ್ಯಕ್ಷ ಡಾ ಮಲ್ಲೇಶಪ್ಪ ಹರಿಜನ ನೇಮಕ ಮಾಡಿದ್ದಾರೆ. ಪ್ರದಾನ ಕಾರ್ಯರ್ಯದರ್ಶಿಗಳಾಗಿ ಶಂಭಣ್ಣ ಗುಂಜಳ, ಶಿವಯೋಗಿ ಹೊಸಗೌಡ, ವೀರಭದ್ರಪ್ಪ ಗೋಣೆಮ್ಮನವರ, ಉಪಾಧ್ಯಕ್ಷರಾಗಿ ಡಾ ಜರತಾಗರ ಕನವಳ್ಳಿ, ಪರಮೇಶ ದೊಡ್ಡಮನಿ, ಚೆನ್ನವೀರ ಸಜ್ಜನಶೆಟ್ರ, ನಾಗಪ್ಪ ಹೂಗಾರ, ಫಕೀರಯ್ಯ ಹಿರೇಮಠ, ಕರಬಸಪ್ಪ ಕ್ಯಾಲಕೊಂಡ, ಎನ್.ಕೆ. ಮರೋಳ ನೇಮಕಗೊಂಡಿದ್ದಾರೆ. ಕಾರ್ಯದರ್ಶಿಗಳಾಗಿ ಶ್ರೀಕಾಂತ ಬರಡಿ, ಭರಮಪ್ಪ ತಿಪ್ಪನವರ, ದಿನೇಶ ಜಾನಮನಿ, ಗುಡ್ಡಪ್ಪ ತರ್ಲಿ, ಕಲ್ಲಪ್ಪ ರಾಮನಗೌಡ್ರ, ರಫೀಕಸಾಬ ಎಣ್ಣಿ, ಕೊಟ್ರೇಶ ಪೂಜಾರ, ಪುಟ್ಟು ಕಿತ್ತೂರ ನೇಮಕಗೊಂಡಿದ್ದಾರೆ. ಎಸ್ಸಿ ಮೋರ್ಚಾಕ್ಕೆ ಹನಮಂತಪ್ಪ ಮಾಚಾಪುರ (ಅಧ್ಯಕ್ಷ), ಶೇಖಣ್ಣ ದಂಡಿನ (ಪ್ರಧಾನ ಕಾರ್ಯದರ್ಶಿ), ಶರೀಫ ಬಂಡಿವಡ್ಡರ (ಉಪಾಧ್ಯಕ್ಷ), ನಾಗರಾಜ ಕರಬಸಮ್ಮನವರ, ಹಿಂದುಳಿದ ವರ್ಗಗಳ ಮೋರ್ಚಾಕ್ಕೆ ಜಗದೀಶ ಮಂಟಗಣಿ (ಅಧ್ಯಕ್ಷ) ಆಯ್ಕೆಯಾಗಿದ್ದಾರೆ. ಯುವ ಮೋರ್ಚಾಕ್ಕೆ ತಿಪ್ಪಣ್ಣ ಹುಬ್ಬಣ್ಣವರ (ಅಧ್ಯಕ್ಷ), ಬಾಬಣ್ಣ ಏಕಬೋಟೆ (ಪ್ರಧಾನ ಕಾರ್ಯದರ್ಶಿ), ರವಿ ಶಿಶುವಿನಹಾಳ (ಉಪಾಧ್ಯಕ್ಷ), ಎಸ್ಟಿ ಮೋರ್ಚಾಕ್ಕೆ ಬಸವರಾಜ ಮಲ್ಲಾಡದ (ಅಧ್ಯಕ್ಷ) ಆಯ್ಕೆಯಾಗಿದ್ದಾರೆ ಎಂದು ಮಲ್ಲೇಶಪ್ಪ ಹರಿಜನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯುವ ಮೋರ್ಚಾಗೆ ಆಯ್ಕೆ
ಶಿಗ್ಗಾಂವಿ: ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿಯಾಗಿ ತಾಲೂಕಿನ ತಡಸ ಗ್ರಾಮದ ಪ್ರಶಾಂತ ಎಂ. ಖಜ್ಜಿ ಅವರನ್ನು ಹಾವೇರಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಪ್ರದೀಪ ಮಳ್ಳೂರ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಲಾರಿ ಡಿಕ್ಕಿ: ವ್ಯಕ್ತಿ ಸಾವು
ಶಿಗ್ಗಾಂವಿ: ಬೈಕ್ ಮತ್ತು ಗೂಡ್ಸ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಬೈಕ್ ಸವಾರ ಮೃತಪಟ್ಟ ಘಟನೆ ಪಟ್ಟಣದ ಹೊರವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿರುವ ನರಹರಿ ಪೆಟ್ರೋಲ್ ಬಂಕ್ ಬಳಿ ಶನಿವಾರ ಸಂಭವಿಸಿದೆ. ತಾಲೂಕಿನ ಸದಾಶಿವಪೇಟೆಯ ನಿವಾಸಿ ಬಸವರಾಜ ವಿಜಾಪುರ (45) ಮೃತ ವ್ಯಕ್ತಿ. ನಾರಾಯಣಪುರ ಸಂಘದಲ್ಲಿ ಜವಾನರಾಗಿ ಅವರು ಕೆಲಸ ಮಾಡುತ್ತಿದ್ದರು. ಹಾವೇರಿಯಿಂದ ಹುಬ್ಬಳ್ಳಿ ಕಡೆ ಹೋಗುತ್ತಿದ್ದ ಮಹಾರಾಷ್ಟ್ರ ಮೂಲದ ಗೂಡ್ಸ್ ಲಾರಿ, ಶಿಗ್ಗಾಂವಿಯಲ್ಲಿ ಪೆಟ್ರೋಲ್ ಹಾಕಿಸಿಕೊಂಡು ಊರಿಗೆ ತೆರಳುತ್ತಿದ್ದ ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿದೆ. ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಶೋಕ ಬಸಪ್ಪ ಕೆಂಪಬಸಪ್ಪನವರ ನಿಧನ
ಶಿಗ್ಗಾಂವಿ: ಪಟ್ಟಣದ ನಿವಾಸಿ ಅಶೋಕ ಬಸಪ್ಪ ಕೆಂಪಬಸಪ್ಪನವರ (46) ಶುಕ್ರವಾರ ನಿಧನರಾದರು. ಆರೋಗ್ಯ ಇಲಾಖೆಯ ಉದ್ಯೋಗಿಯಾಗಿದ್ದ ಅವರಿಗೆ ಪತ್ನಿ, ಓರ್ವ ಪುತ್ರ, ಪುತ್ರಿ ಇದ್ದಾರೆ. ಮಾಜಿ ಸಂಸದ ಮಂಜುನಾಥ ಕುನ್ನೂರ, ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ ಸಂತಾಪ ಸೂಚಿಸಿದ್ದಾರೆ.
ಮೆಕ್ಕೆಜೋಳ ಕ್ಷೇತ್ರೋತ್ಸವ
ಶಿಗ್ಗಾಂವಿ: ಮಳೆ, ನೀರಾವರಿ ಆಶ್ರಿತವಾಗಿ ಮುಂಗಾರು-ಹಿಂಗಾರು ಹಂಗಾಮಿನಲ್ಲಿ ಉತ್ತಮ ಇಳುವರಿ ನೀಡಬಲ್ಲ ಮಾನ್ಸೆಂಟೋ ಕಂಪನಿಯ ಡಿಕಾಲ್ಟೊ ಡಿಕೆಸಿ 9126 ಗೋವಿನಜೋಳದ ತಳಿ ಉತ್ತಮ ರೋಗನಿರೋಧಕ ಶಕ್ತಿ ಹೊಂದಿದೆ. ಎಕರೆಗೆ 35ರಿಂದ 40 ಕ್ವಿಂಟಲ್ ಇಳುವರಿ ಪಡೆಯಬಹುದು ಎಂದು ಕಂಪನಿ ಅಧಿಕಾರಿ ಕೆ. ದಾನನಗೌಡ್ರ ಹೇಳಿದರು. ಹುಲಸೂಗಿ ಗ್ರಾಮದ ವಿರೂಪಾಕ್ಷಪ್ಪ ಸೊಲಬಕ್ಕನವರ ಹೊಲದಲ್ಲಿ ಡಿಕೆಸಿ 9126 ತಳಿಯ ಗೋವಿನಜೋಳ ಬೆಳೆಯ ಕಟಾವು ಕ್ಷೇತ್ರೋತ್ಸವ ಉದ್ಘಾಟಿಸಿ, ತೆನೆಯ ತುದಿವರೆಗೂ ಗೋವಿನಜೋಳದ ಕಾಳುಗಳು ತುಂಬಿರುತ್ತದೆ. ಕಾಳುಗಳು ಉತ್ತಮ ಬಣ್ಣದ್ದಾಗಿದ್ದು, ದಪ್ಪನಾಗಿರುತ್ತವೆ. ಹೆಚ್ಚು ಮಳೆ ಬಿದ್ದರೂ ಉತ್ತಮ ಇಳುವರಿ ನೀಡುತ್ತದೆ. ಜಿಂಕ್ ಸಲ್ಫೇಟ್ ಹಾಗೂ ಸಾವಯವ ಗೊಬ್ಬರ ಬಳಕೆ ಉತ್ತಮ ಎಂದರು. ರೈತರಾದ ರಾಮಜಿ ಶಿಂಧೆ, ಫಕ್ಕೀರೇಶ ಕೊಂಡಾಯ್, ಮಾದೇವಪ್ಪ ಗಾಜನೂರ, ಭೀಮಪ್ಪ ಕೊಕಾಟೆ, ಚನ್ನವೀರಪ್ಪ ಕುನ್ನೂರ ಇದ್ದರು.
ರಾಣಿ ಚನ್ನಮ್ಮ ಆದರ್ಶ: ಜೈನ್
ಹಾವೇರಿ: ಬ್ರಿಟಿಷರ ವಿರುದ್ಧ ದಂಗೆ ಎದ್ದು ಕಿತ್ತೂರು ಸಂಸ್ಥಾನ ಉಳಿಸಿಕೊಳ್ಳಲು ಹೋರಾಡಿದ ಕಿತ್ತೂರು ರಾಣಿ ಚನ್ನಮ್ಮ ವಿದ್ಯಾರ್ಥಿನಿಯರಿಗೆ ಆದರ್ಶವಾಗಿದ್ದಾರೆ ಎಂದು ಇಡಾರಿ ಸಂಸ್ಥೆ ಮುಖ್ಯಸ್ಥೆ ಪರಿಮಳಾ ಜೈನ್ ಹೇಳಿದರು. ನಗರದ ಸರ್ಕಾರಿ ಪಪೂ ಕಾಲೇಜಿನಲ್ಲಿ ಎಬಿವಿಪಿ ಹಮ್ಮಿಕೊಂಡಿದ್ದ ಸಹೋದರಿ ನಿವೇದಿತಾ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ಜಯಂತ್ಯುತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಮಹಿಳೆಯರ ರಾಣಿ ಚನ್ನಮ್ಮಳ ವಿಚಾರಗಳನ್ನು ಮೈಗೂಡಿಸಿಕೊಂಡು ಭ್ರಷ್ಟಾಚಾರ, ಭಯೋತ್ಪಾದನೆ, ಅತ್ಯಾಚಾರಗಳಂಥ ಅನಿಷ್ಟ ಪದ್ಧತಿಗಳನ್ನು ತಡೆಗಟ್ಟುವಲ್ಲಿ ಮಹತ್ವದ ಪಾತ್ರ ನಿರ್ವಹಿಸಬೇಕು ಎಂದು ಕರೆ ನೀಡಿದರು. ರಾಜು ಐಬತ್ತಿ ಮಾತನಾಡಿ, ಸಹೋದರಿ ನಿವೇದಿತಾ ಸ್ವಾಮಿ ವಿವೇಕಾನಂದರ ವಿಚಾರಗಳಿಂದ ಪ್ರಭಾವಿತರಾಗಿ ಭಾರತದ ಸಂಸ್ಕೃತಿ, ಸಂಸ್ಕಾರ ಪಾಲಿಸಿದರು. ಪ್ರತಿಫಲಾಪೇಕ್ಷೆ ಇಲ್ಲದೆ ಸೇವೆ ಮಾಡುವ ಮನೋಭಾವನೆ ಬೆಳೆಯಬೇಕು ಎಂದರು. ಎಬಿವಿಪಿ ನಗರ ಶಾಖೆ ಅಧ್ಯಕ್ಷ ಪ್ರಮೋದ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಎಸ್.ಎನ್. ದೇಸಾಯಿ, ಸಿದ್ದು ಮದರಖಂಡಿ, ನಾಗರಾಜ ಹುರಳಿಕುಪ್ಪಿ, ಸೌಮ್ಯಾ ಅಂಗರಮಟ್ಟಿಹಳ್ಳಿ, ಪುಟ್ಟರಾಜ ಮುಗಳಿ, ದೀಪಕ ಹೆಬ್ಬಾರೆ, ಫಕೀರಗೌಡ ಭರಮಗೌಡ್ರ ಇದ್ದರು.