ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ನಾಗರಾಜ ಛಬ್ಬಿಗೆ ಇಂದು ಅಭಿನಂದನೆ

Lingaraj Badiger
Updated On : 11 Nov 2013, 12:19 pm

ಹಿರೇಕೆರೂರು: ತಾಲೂಕು ಕಾಂಗ್ರೆಸ್ ಘಟಕದಿಂದ ನ. 11ರಂದು ಬೆಳಗ್ಗೆ 11 ಗಂಟೆಗೆ ನೂತನ ವಿಧಾನ ಪರಿಷತ್ ಸದಸ್ಯ ನಾಗರಾಜ ಛಬ್ಬಿ ಅವರಿಗೆ ಅಭಿನಂದನಾ ಸಮಾರಂಭ ಜರುಗಲಿದೆ. ಪಟ್ಟಣದ ಗುರುಭವನದಲ್ಲಿ ಜರುಗಲಿರುವ ಸಮಾರಂಭದ ಅದ್ಯಕ್ಷತೆಯನ್ನು ಮಾಜಿ ಶಾಸಕ ಬಿ.ಸಿ. ಪಾಟೀಲ ವಹಿಸುವರು. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ ಹಾಗೂ ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಮಂಜುಳಾ ಬಾಳಿಕಾಯಿ ಆಗಮಿಸಲಿದ್ದಾರೆ. ತಾಲೂಕಿನ ಕಾಂಗ್ರೆಸ್ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಹಿರೇಕೆರೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೊಡ್ಡಗೌಡ ಪಾಟೀಲ, ರಟ್ಟಿಹಳ್ಳಿ ಬ್ಲಾಕ್ ಅಧ್ಯಕ್ಷ ಎಸ್.ಕೆ. ಕರಿಯಣ್ಣನವರ ತಿಳಿಸಿದ್ದಾರೆ.
ಶಿಗ್ಗಾಂವಿ: ನಾಳೆ ತುಲಾಭಾರ, ಸ್ಮರಣೋತ್ಸವ
ಶಿಗ್ಗಾಂವಿ: ತಾಲೂಕಿನ ನಾರಾಯಣಪುರ ಗ್ರಾಮದ ವಿರಕ್ತಮಠದಲ್ಲಿ ಲಿಂಗೈಕ್ಯ ಗುರುಲಿಂಗ ಮಹಾಸ್ವಾಮಿಗಳವರ 23ನೇ ವರ್ಷದ ಸ್ಮರಣೋತ್ಸವ ಹಾಗೂ ಶಿರಟ್ಟಿ ಸಂಸ್ಥಾನ ಮಠದ ಮನ್ನಿರಂಜನ ಜಗದ್ಗುರು ಸಿದ್ದರಾಮ ಸ್ವಾಮೀಜಿಗಳ 707ನೇ ತುಲಾಭಾರ ಕಾರ್ಯಕ್ರಮ ನ. 12ರಂದು ಜರುಗಲಿದೆ. ಅಂದು ನಾರಾಯಣಪುರ ಗ್ರಾಮದ ವಿರಕ್ತಮಠದಲ್ಲಿ ಲಿಂಗೈಕ್ಯ ಗುರುಲಿಂಗ ಸ್ವಾಮೀಜಿಗಳ 23ನೇ ವರ್ಷದ ಸ್ಮರಣೋತ್ಸವ ಜರುಗುವುದು. ನಂತರ ಶಿರಹಟ್ಟಿ ಸಂಸ್ಥಾನ ಮಠದ ಮನ್ನಿರಂಜನ ಜಗದ್ಗುರು ಸಿದ್ದರಾಮ ಮಹಾಸ್ವಾಮಿಗಳ 707ನೇ ತುಲಾಬಾರ ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ 8 ಗಂಟೆಗೆ ವಾದ್ಯ ವೈಭಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಏರ್ಪಡಿಸಲಾಗಿದೆ. ಮಧ್ಯಾಹ್ನ 12 ಗಂಟೆಗೆ ಮಹಾ ದಾಸೋಹ ಜರುಗುವುದು. ಸಂಜೆ 7 ಗಂಟೆಗೆ ಧರ್ಮ ಸಭೆಯಲ್ಲಿ ಧರ್ಮ ಗುರುಗಳು ಹಾಗೂ ವಿವಿಧ ರಾಜಕೀಯ ಮುಖಂಡರು ಪಾಲ್ಗೊಳ್ಳುವರು ಎಂದು ವಿರಕ್ತಮಠದ ಸದ್ಬಕ್ತ ಮಂಡಳಿ ಪ್ರಕಟನೆಯಲ್ಲಿ ತಿಳಿಸಿದೆ.
ಮುಕ್ತಿಧಾಮ ಅಭಿವೃದ್ಧಿಗೆ ಅನುದಾನ: ದೇಶಪಾಂಡೆ
ಹಾನಗಲ್ಲ: ಹಾನಗಲ್ಲಿನ ಧರ್ಮಾನದಿ ಬಳಿಯಲ್ಲಿರುವ ಮುಕ್ತಿಧಾಮದಲ್ಲಿ ಅಂತ್ಯಕ್ರಿಯೆಗಾಗಿ ಹೊಸ ಸಿಲಿಕಾನ್ ಚೇಂಬರ್ ಅಳವಡಿಸುವ ಸಲುವಾಗಿ ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ ತಮ್ಮ ಕ್ಷೇತ್ರಾಭಿವೃದ್ಧಿ ಅನುದಾನದಿಂದ ರು. 2 ಲಕ್ಷ ಬಿಡುಗಡೆಗೊಳಿಸಿದ್ದಾರೆ ಎಂದು ಮುಕ್ತಿಧಾಮ ಸಮಿತಿ ಅಧ್ಯಕ್ಷ ಘನಶ್ಯಾಮ ದೇಶಪಾಂಡೆ ತಿಳಿಸಿದ್ದಾರೆ. ಈ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಹಲವು ವರ್ಷಗಳ ಹಿಂದೆ ನಿರ್ಮಿಸಿದ್ದ ಸಿಲಿಕಾನ್ ಚೇಂಬರ್‌ಗಳು ಶಿಥಿಲಗೊಂಡಿದ್ದವು. ಅಲ್ಲದೇ ಇದೇ ಮಾರ್ಗದಲ್ಲಿ ನಿರ್ಮಿಸುತ್ತಿರುವ ತಡಸ-ಶಿವಮೊಗ್ಗ ರಾಜ್ಯ ಹೆದ್ದಾರಿಗೆ ಮುಕ್ತಿಧಾಮದ ಕಟ್ಟಡ ತೆರವುಗೊಳಿಸುತ್ತಿರುವುದರಿಂದ ನೂತನ ಕಟ್ಟಡ ನಿರ್ಮಿಸಲಾಗಿದ್ದು, ಹೊಸ ಸಿಲಿಕಾನ್ ಚೇಂಬರ್‌ಗಳ ಅವಶ್ಯಕತೆ ಇತ್ತು. ಅನುದಾನ ಬಿಡುಗಡೆಗೊಳಿಸುವಲ್ಲಿ ವಿಶೇಷ ಕಾಳಜಿ ವಹಿಸಿದ ಶಾಸಕ ಮನೋಹರ ತಹಸೀಲ್ದಾರ್, ಕೆಪಿಸಿಸಿ ಸದಸ್ಯ ಸತೀಶ ದೇಶಪಾಂಡೆ ಮತ್ತು ಅನುದಾನ ನೀಡಿದ ಶ್ರೀನಿವಾಸ ಮಾನೆ ಇವರಿಗೆ ಮುಕ್ತಿಧಾಮ ಸಮಿತಿ ಅಧ್ಯಕ್ಷ ಘನಶ್ಯಾಮ ದೇಶಪಾಂಡೆ ಸದಸ್ಯರು ಕೃತಜ್ಞತೆ ಸಲ್ಲಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement