ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ರೈತರ ಹಿತ ಕಾಯದಿದ್ರೆ ಸರ್ಕಾರಕ್ಕೆ ತಕ್ಕಪಾಠ

Lingaraj Badiger
Updated On : 11 Nov 2013, 12:25 pm

ರಾಣಿಬೆನ್ನೂರು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಹಿತ ಕಾಯುವಂಥ ಕೃಷಿ ನೀತಿ ಜಾರಿಗೊಳಿಸದಿದ್ದರೆ ಮುಂದೊಂದು ದಿನ ರೈತ ಸಂಘದಿಂದ ಸರ್ಕಾರಗಳಿಗೆ ಬುದ್ದಿ ಕಲಿಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಸಂಚಾಲಕ ಕೆ. ಬೇವಿನಹಳ್ಳಿ ಮಹೇಶ ಎಚ್ಚರಿಕೆ ನೀಡಿದರು.
ರೈತ ಸಂಘದ ಜಿಲ್ಲಾ ಹಾಗೂ ತಾಲೂಕು ಘಟಕದ ಆಶ್ರಯದಲ್ಲಿ ತಾಲೂಕಿನ ಖಂಡೇರಾಯನಹಳ್ಳಿ ಗ್ರಾಮ ಘಟಕ ಉದ್ಘಾಟಿಸಿ ಮಾತನಾಡಿ, ದೇಶದ ಬೆನ್ನೆಲುಬೆಂದು ಕರೆಸಿಕೊಳ್ಳುವ ರೈತರಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 40 ವರ್ಷಗಳಿಂದ ಜಾರಿಗೆ ತಂದಿರುವ ಯೋಜನೆಯಿಂದ ಅಭಿವೃದ್ಧಿ ಹೊಂದಲು ಸಾಧ್ಯವಾಗಿಲ್ಲ ಎಂದರು.
ಹಗಲಿರುಳೆನ್ನದೆ ಹೊಲದಲ್ಲಿದ್ದುಕೊಂಡು ಸುರಿಯುವ ಮಳೆಯಲ್ಲಿ, ಚಳಿ ಗಾಳಿ ಬಿಸಿಲು ಸೇರಿದಂತೆ ಹಲವಾರು ವಿಷ ಜಂತುಗಳ ಕಾಟವನ್ನು ಸಹಿಸಿಕೊಂಡು ದೇಶಕ್ಕಾಗಿ ದುಡಿಯುವ ರೈತರ ಕಲ್ಯಾಣಕ್ಕಾಗಿ ದುಡಿಯುತ್ತಿರುವ ರೈತರು ಮೆಚ್ಚಿಕೊಳ್ಳುವಂತಹ ರೀತಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೋಸ ಕೃಷಿ ನೀತಿ ಜಾರಿಗೆ ತರಲು ಮುಂದಾಗಬೇಕು. ರೈತರು ಬೆಳೆದ ಬೆಳೆಗಳಿಗೆ ತಾವೇ ಬೆಲೆಯನ್ನು ನಿಗದಿಪಡಿಸುವಂತಾಗಬೇಕು. ಅಧಿವೇಶನದಲ್ಲಿ ರೈತರ ಸಮಸ್ಯೆಗಳ ಕುರಿತು ಚರ್ಚಿಸಲು ಶಾಸಕರು ಮುಂದಾಗಬೇಕೆಂದು ಕೆ. ಬೇವಿನಹಳ್ಳಿ ಮಹೇಶ ಆಗ್ರಹಿಸಿದರು.
ಗ್ರಾಮ ಘಟಕದ ನಾಮಫಲಕ ಅನಾವರಣಗೊಳಿಸಿದ ತಾಲೂಕು ರೈತ ಸಂಘದ ಅಧ್ಯಕ್ಷ ಪರಮೇಶ ಚಿನ್ನಣ್ಣನವರ ಮಾತನಾಡಿ, ಕಳೆದ 80ರ ದಶಕದಲ್ಲಿ ರೈತ ವಿರೋಧಿ ನೀತಿ ಅನುಸರಿಸಿದ್ದ ಅಂದಿನ ರಾಜ್ಯ ಸರ್ಕಾರದ ವಿರುದ್ಧ ರೈತ ಸಂಘದ ಮುಖಂಡರಾದ ಎಂ.ಡಿ. ನಂಜುಂಡಸ್ವಾಮಿಯವರ ಮುಖಂಡತ್ವದಲ್ಲಿ ರೈತರ ಬೇಡಿಕೆಗಳ ಈಡೇರಿಕೆಗಾಗಿ, ವಿವಿಧ ಅಭಿವೃದ್ಧಿಗಾಗಿ ರೈತರಿಂದಲೆ ರೈತರಿಗೆ ಮಾರ್ಗದರ್ಶನ ನೀಡಲು ಹುಟ್ಟಿದ ಸಂಘವೇ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆಯಾಗಿ ಮಾರ್ಪಟಿದೆ. ರೈತರು ಸಂಘಟನೆಯ ಲಾಭ ಪಡೆಯಲು ಮುಂದಾಗಬೇಕೆಂದು ಪರಮೇಶ ಚಿನ್ನಣ್ಣನವರ ಹೇಳಿದರು.
ರೈತ ಸಂಘದ ಜಿಲ್ಲಾ ಮುಖಂಡರಾದ ತಮ್ಮಣ್ಣ ಮುದುಕಣ್ಣನವರ, ಖಂಡೇರಾಯನಹಳ್ಳಿ ಗ್ರಾಮ ಘಟಕಾಧ್ಯಕ್ಷರಾದ ಫಕ್ಕಿರಪ್ಪ ಗೌಡ್ರ, ಡಾಕೇಶ ಲಮಾಣಿ, ಮಲೇಬೆನ್ನೂರು ದುರುಗಪ್ಪ, ದಾವಣಗೇರಿ ಜಿಲ್ಲಾ ಕಾರ್ಯಾಧ್ಯಕ್ಷ ಬಾವಿಮನಿ ಪುಟ್ಟಪ್ಪ, ಶಿವನಹಳ್ಳಿ ಪರಶುರಾಮ, ಹರಿಹರ ತಾಲೂಕು ಅಧ್ಯಕ್ಷ ಮೀಣಸಿನಹಾಳ ರುದ್ರಗೌಡ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement