ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಶಿಗ್ಗಾಂವಿ: ಕೃಷಿ ಉತ್ಸವ ನಡೆಸಲು ತೀರ್ಮಾನ

Lingaraj Badiger
Updated On : 11 Nov 2013, 12:26 pm

ಶಿಗ್ಗಾಂವಿ: ಬರಿದಾಗುತ್ತಿರುವ ಕೃಷಿ ವಲಯಕ್ಕೆ ಕಾಯಕಲ್ಪ ನೀಡುವ ಉದ್ದೇಶದಿಂದ ತಾಲೂಕಿನಲ್ಲಿ ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದಿಂದ ಕೃಷಿ ಉತ್ಸವ ನಡೆಸಲು ತೀರ್ಮಾನಿಸಿದ್ದು, ಸುಮಾರು 10 ಸಾವಿರ ಜನ ಭಾಗವಹಿಸುವ ನಿರೀಕ್ಷೆ ಇದೆ. ಉತ್ಸವದಲ್ಲಿ ವಸ್ತು ಪ್ರದರ್ಶನ, ಇಲಾಖಾ ಮಳಿಗೆಗಳನ್ನು ತೆರೆಯಲಾಗುವುದು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ವಸಂತ್ ಸಾಲಿಯಾನ್ ಹೇಳಿದರು. ತಾಲೂಕಿನಲ್ಲಿ ಕೃಷಿ ಉತ್ಸವದ ಸಮಾಲೋಚನಾ ಸಭೆ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಭಾಭವನದಲ್ಲಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಜಿಲ್ಲಾ ನಿರ್ದೇಶಕ ಸಾಲಿಯಾನ್, ಕೃಷಿಯಲ್ಲಿ ರೈತರಿಗೆ ಆಸಕ್ತಿ ಕಡಿಮೆಯಾಗುತ್ತಿದೆ. ಅವರಲ್ಲಿ ಪ್ರೇರಣೆ ಮೂಡಿಸುವ ಉದ್ದೇಶದಿಂದ ಕ್ರೀಡಾಕೂಟ, ವಿಚಾರಗೋಷ್ಠಿ, ಮನರಂಜನಾ ಕಾರ್ಯಕ್ರಮಗಳನ್ನು ಅಯೋಜನೆ ಮಾಡಲಾಗುವುದು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಉತ್ಸವ ಸಮಿತಿ ರಚಿಸಿದ್ದು, ಗೌರವಾಧ್ಯಕ್ಷರಾಗಿ ಶಂಕರಗೌಡ ಪಾಟೀಲ್, ಅಧ್ಯಕ್ಷರಾಗಿ ಬಸವರಾಜ್ ಹೊಸೂರು, ಉಪಾಧ್ಯಕ್ಷರಾಗಿ ಕಾಶಿನಾಥ ನಾಯ್ಕರ್, ಕಾರ್ಯದರ್ಶಿ ಗಣಪತಿ ಮಾಳಂಜಿ, ಜಂಟಿ ಕಾರ್ಯದರ್ಶಿ ಮಹಾರುದ್ರಪ್ಪ ವಡವಿ, ಸಿ.ಡಿ. ಪಾಟೀಲ್ ಅವರನ್ನು ಆಯ್ಕೆ ಮಾಡಲಾಯಿತು. ಶಿಗ್ಗಾಂವಿ ಸವಣೂರು ತಾಲೂಕು ಯೋಜನಾಧಿಕಾರಿ ಗಣಪತಿ ಮಾಳಂಜಿ ಉತ್ಸವದ ಉದ್ದೇಶ ರೂಪ-ರೇಷೆಗಳ ಬಗ್ಗೆ ಮಾಹಿತಿ ನೀಡಿದರು. ಗಂಗಮ್ಮ ನಿರೂಪಿಸಿದರು. ಪ್ರವೀಣ್ ವಂದಿಸಿದರು.
ಸದಸ್ಯತ್ವ ನೋಂದಣಿ
ಹಾನಗಲ್ಲ: ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಗೆ ಹೆಸರು ನೋಂದಣಿ ಅಭಿಯಾನ ಇಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಿತು. ಕಾಂಗ್ರೆಸ್ ಪರಿಶಿಷ್ಟ ಜಾತಿ, ವರ್ಗಗಳ ವಿಭಾಗದ ರಾಜ್ಯಾಧ್ಯಕ್ಷ ಟಿ. ಈಶ್ವರ ಮಾತನಾಡಿ, ಕಾಂಗ್ರೆಸ್ ಪಕ್ಷದಿಂದ ಕೈಬಿಟ್ಟು ಹೋದ ಪಶ್ಚಿಮ ಪದವೀಧರರ ಕ್ಷೇತ್ರವನ್ನು ಮರಳಿ ಪಡೆಯುವುದರ ಸಲುವಾಗಿ ಪ್ರತಿಯೊಬ್ಬ ಪದವೀಧರರು ಹೆಚ್ಚಿನ ಶ್ರಮ ವಹಿಸಿ ಅಭಿಯಾನದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು. ಕಾಂಗ್ರೆಸ್ ಅಭ್ಯರ್ಥಿ ಗೆಲವಿಗೆ ಶ್ರಮಿಸಬೇಕೆಂದರು.ಶಾಸಕ ಮನೋಹರ ತಹಸೀಲ್ದಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿ ಗ್ರಾಮ ಮಟ್ಟದಲ್ಲಿಯ ಪದವೀಧರರು ತಮ್ಮ ಹಕ್ಕನ್ನು ಚಲಾಯಿಸುವ ಸಲುವಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ವಿಶೇಷವಾಗಿ ಮಹಿಳೆಯರು ತಮ್ಮ ಸದಸ್ಯತ್ವವನ್ನು ಪಡೆಯಬೇಕು. ಅದಕ್ಕಾಗಿ ಬೂತ್ ಮಟ್ಟದ ಅಧ್ಯಕ್ಷರು ಮತ್ತು ಕಾರ್ಯಕರ್ತರು ಈ ಕಾರ್ಯಕ್ರಮಕ್ಕೆ ವಿಶೇಷ ಕಾಳಜಿ ವಹಿಸಬೇಕೆಂದರು. ಪದವೀಧರ ಒಕ್ಕೂಟ ಹಾನಗಲ್ಲ ತಾಲೂಕು ಸಂಚಾಲಕರನ್ನಾಗಿ ವಿದ್ಯಾಶಂಕರ ದೇಶಪಾಂಡೆ ಅವರನ್ನು ರಾಜ್ಯಾಧ್ಯಕ್ಷ ಟಿ. ಈಶ್ವರ ನೇಮಕಗೊಳಿಸಿದರು. ಘನಶ್ಯಾಮ ದೇಶಪಾಂಡೆ, ಸತೀಶ ದೇಶಪಾಂಡೆ, ಕೆ.ಎಲ್. ದೇಶಪಾಂಡೆ, ವಿಷ್ಣುಕಾಂತ ಜಾಧವ್, ಶಿವಾನಂದಪ್ಪ ಈಳಿಗೇರ, ವಿಜಯಾ ಹಿರೇಮಠ, ಎನ್.ಎಸ್. ಪಡೆಪ್ಪನವರ, ಸಿ.ಎಸ್. ಬಡಿಗೇರ, ರುದ್ರಯ್ಯ ಹಿರೇಮಠ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement