18ರಂದು ಭಾಷಣ ಸ್ಪರ್ಧೆ
ಹಾನಗಲ್ಲ: ಭಕ್ತಶ್ರೇಷ್ಠ ಕನಕದಾಸರ ಬದುಕು ಬರೆಹ ಕುರಿತು ತಾಲೂಕು ಮಟ್ಟದ ಭಾಷಣ ಸ್ಪರ್ಧೆ ನ. 18ರಂದು ನಡೆಯಲಿದ್ದು, ಪ್ರೌಢಶಾಲೆ ಹಾಗೂ ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಳ್ಳಬಹುದು. ಕರ್ನಾಟಕ ಪ್ರದೇಶ ಕುರುಬರ ಸಂಘದ ಹಾನಗಲ್ಲ ತಾಲೂಕು ಘಟಕ ಕುಮಾರೇಶ್ವರ ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನ. 18ರಂದು ಮಧ್ಯಾಹ್ನ 12 ಗಂಟೆಗೆ ಕನಕದಾಸರ ಜಯಂತಿ ಉತ್ಸವದ ಅಂಗವಾಗಿ ಪ್ರೌಢಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕ ಸ್ಪರ್ಧೆ ಏರ್ಪಡಿಸಿದೆ. ಪ್ರತಿ ಸಂಸ್ಥ್ಥೆಯಿಂದ ಒಬ್ಬ ವಿದ್ಯಾರ್ಥಿ ಹಾಗೂ ಒಬ್ಬ ವಿದ್ಯಾರ್ಥಿನಿಗೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅವಕಾಶವಿದೆ. ಕೇವಲ ಬಾಲಕರ ಅಥವಾ ಕೇವಲ ಬಾಲಕಿಯರ ಶಿಕ್ಷಣ ಸಂಸ್ಥೆಯಾಗಿದ್ದರೆ ಇಬ್ಬರು ಪಾಲ್ಗೊಳ್ಳಬಹುದಾಗಿದೆ. ಕಾಲೇಜು ವಿಭಾಗದಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಗಳಿಸಿದವರಿಗೆ ಕ್ರಮವಾಗಿ ರು. 1000, ರು. 750, ರು. 500, ಪ್ರೌಢಶಾಲಾ ವಿಭಾಗದಲ್ಲಿ ರು. 500, ರು. 300, ರು. 200 ಹಾಗೂ ಪ್ರಶಸ್ತಿಪತ್ರ ನೀಡಲಾಗುತ್ತದೆ. ಎಲ್ಲ ಸ್ಪರ್ಧಿಗಳಿಗೆ ಪ್ರಮಾಣಪತ್ರ ನೀಡಲಾಗುವುದು ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ಅಧ್ಯಕ್ಷ ದಾನಪ್ಪ ಗಂಟೇರ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮಹೇಶ ಪವಾಡಿ (ಮೊ. 9964955884), ಮಾರುತಿ ಶಿಡ್ಲಾಪುರ (ಮೊ. 9448630551) ಇವರನ್ನು ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ. ತಹಸೀಲ್ದಾರ್ ಡಾ ನಾಗೇಂದ್ರ ಹೊನ್ನಳ್ಳಿ ಉದ್ಘಾಟಿಸುವರು. ಪ್ರಾಚಾರ್ಯ ಎಸ್.ಸಿ. ಪೀರಜಾದೆ ಅಧ್ಯಕ್ಷತೆ ವಹಿಸುವರು. ಕುರುಬರ ಸಂಘದ ಅಧ್ಯಕ್ಷ ದಾನಪ್ಪ ಗಂಟೇರ ಆಶಯ ಭಾಷಣ ಮಾಡುವರು. ಸಾಹಿತಿ ಮಾರುತಿ ಶಿಡ್ಲಾಪುರ, ಲೋಕೋಪಯೋಗಿ ಇಲಾಖೆ ಅಭಿಯಂತರ ಬಿ.ವೈ. ಬಂಡಿವಡ್ಡರ, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಭು ಸುಣಗಾರ ಪಾಲ್ಗೊಳ್ಳುವರು.
ಸಾಹಿತಿ ಪಕ್ಕಣ್ಣ ಅರಗೋಳ ನಿಧನ: ಸಂತಾಪ
ಹಾನಗಲ್ಲ: ರಂಗಕರ್ಮಿ, ಸಾಹಿತಿ ಪಕ್ಕಣ್ಣ ಅರಗೋಳ ಅವರ ಅಕಾಲಿಕ ನಿಧನಕ್ಕೆ ಇಲ್ಲಿನ ಸಾಹಿತ್ಯ ಸಾಂಸ್ಕೃತಿಕ ಬಳಗ ಸಂತಾಪ ವ್ಯಕ್ತಪಡಿಸಿದೆ. ಸಾಹಿತ್ಯ, ಸಮಾಜ, ರಂಗ ಚಟುವಟಿಕೆಯಲ್ಲಿ ಸಕ್ರಿಯವಾಗಿದ್ದ ಸವಣೂರಿನ ಸಾಹಿತಿ ಪಕ್ಕಣ್ಣ ಅರಗೋಳ ಸಂಘಟನಾ ಚಾತುರ್ಯ ಹೊಂದಿದ್ದ ಸಹೃದಯಿ. ಅವರ ನಿಧನ ಸಾಹಿತ್ಯ ಸಾಂಸ್ಕೃತಿಕ ಕ್ಷೇತ್ರಕ್ಕೆ ದೊಡ್ಡ ನಷ್ಟ ಎಂದು ಸಾಹಿತ್ಯ, ಸಾಂಸ್ಕೃತಿಕ ಬಳಗ ಸಂತಾಪ ವ್ಯಕ್ತಪಡಿಸಿದೆ. ಕಸಾಪ ನಿಕಟಪೂರ್ವ ಜಿಲ್ಲಾಧ್ಯಕ್ಷ ಮಾರುತಿ ಶಿಡ್ಲಾಪುರ, ಸಾಹಿತಿ ಉದಯ ನಾಸಿಕ, ವಿಜಯಕಾಂತ ಪಾಟೀಲ, ಪ್ರಭು ಗುರಪ್ಪನವರ, ಸಾಹಿತಿ ಕಲಾವಿದರ ಬಳಗದ ಕೆ.ಎಲ್. ದೇಶಪಾಂಡೆ, ಪ್ರಶಾಂತ ಮುಚ್ಚಂಡಿ, ಬಿ.ಎಸ್. ಚಲ್ಲಾಳ, ಟಿ. ಶಿವಕುಮಾರ, ನಾಗರಾಜ ಅಡಿಗ, ಷಣ್ಮುಖಪ್ಪ ಮುಚ್ಚಂಡಿ, ನಾಗರಾಜ ಪಾವಲಿ, ಬಸವರಾಜ ಕೋರಿ, ಸಂತೋಷ ಅಪ್ಪಾಜಿ, ನಾಗರಾಜ ಧಾರೇಶ್ವರ, ಮಾಲತೇಶ ಹೆಗಡಿಕಟ್ಟಿ, ಎಂ.ಎಸ್. ವಿಶ್ವನಾಥ, ಶಿವಾನಂದ ಕ್ಯಾಲಕೊಂಡ, ಪತ್ರಕರ್ತರ ಸಂಘದ ಅಧ್ಯಕ್ಷ ಗಿರೀಶ ದೇಶಪಾಂಡೆ, ಸದಸ್ಯರಾದ ಜಿ.ಎಂ. ಕುಲಕರ್ಣಿ, ರವಿ ಲಕ್ಷ್ಮೇಶ್ವರ, ಮಾರುತಿ ಪೇಟಕರ, ಸತೀಶ ಕುಲಕರ್ಣಿ, ಮಂಜುನಾಥ ತಳವಾರ ಸಂತಾಪ ವ್ಯಕ್ತಪಡಿಸಿದ್ದಾರೆ.