ಇಂದು ಕೆಎಲ್‌ಇ ಸಂಸ್ಥಾಪನಾ ದಿನ
ಹಾನಗಲ್ಲ: ಕೆಎಲ್‌ಇ ಸಂಸ್ಥೆಯ 98ನೇ ಸಂಸ್ಥಾಪನಾ ದಿನಾಚರಣೆ ಇಲ್ಲಿನ ವಿರಕ್ತಮಠದ ಆವರಣದಲ್ಲಿರುವ ಕೆಎಲ್‌ಇ ವಿಜ್ಞಾನ ಪದವಿಪೂರ್ವ ಕಾಲೇಜಿನಲ್ಲಿ ನ. 13ರಂದು ಮಧ್ಯಾಹ್ನ 12 ಗಂಟೆಗೆ ನಡೆಯಲಿದೆ. ಹಾವೇರಿಯ ಹಿರಿಯ ಕಥೆಗಾರ ವಿರೂಪಾಕ್ಷಪ್ಪ ಕೋರಗಲ್, ಸಾಹಿತಿ ಮಾರುತಿ ಶಿಡ್ಲಾಪುರ ಅತಿಥಿಗಳಾಗಿ ಪಾಲ್ಗೊಳ್ಳುವರು. ಪ್ರಾಚಾರ್ಯ ಶ್ರೀಧರ ಉರಣಕರ ಅಧ್ಯಕ್ಷತೆ ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.
ಇಂಧನ ಉಳಿತಾಯ: ಇಂದು ಜಾಗೃತಿ ಜಾಥಾ
ಹಾನಗಲ್ಲ: ಇಂಧನ ಉಳಿತಾಯ ಹಾಗೂ ಸುರಕ್ಷತಾ ಸಪ್ತಾಹದ ಅಂಗವಾಗಿ ನ. 13ರಂದು ಮೂಕಾಂಬಿಕಾ ಗ್ಯಾಸ್ ಏಜೆನ್ಸಿ ಪಟ್ಟಣದಲ್ಲಿ ಜಾಗೃತಿ ಜಾಥಾ ಹಾಗೂ ಸಾರ್ವಜನಿಕರ ಜಾಗೃತಿ ಸಭೆ ಆಯೋಜಿಸಿದೆ. ಬುಧವಾರ ಬೆಳಗ್ಗೆ 10 ಗಂಟೆಗೆ ನಗರದ ವಿರಕ್ತಮಠದ ಬಳಿ ಜಾಗೃತಿ ಜಾಥಾವನ್ನು ತಹಸೀಲ್ದಾರ್ ಡಾ ನಾಗೇಂದ್ರ ಹೊನ್ನಳ್ಳಿ ಉದ್ಘಾಟಿಸುವರು. ಜಾಥಾ ಜನತಾ ಶಿಕ್ಷಣ ಸಂಸ್ಥೆ ಆವರಣದ ವರೆಗೆ ನಡೆಯುವುದು. ಜನತಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎ.ಎಸ್. ಬಳ್ಳಾರಿ ಜಾಗೃತಿ ಸಭೆ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಸಿಪಿಐ ಬಿ.ಎಸ್. ಮಂಟೂರ, ಎಚ್‌ಪಿ ಗ್ಯಾಸ್ನ ಹಿರಿಯ ಪ್ರಾದೇಶಿಕ ವ್ಯವಸ್ಥಾಪಕ ಸಾರಂಗಿ, ಮಾರುಕಟ್ಟೆ ವ್ಯವಸ್ಥಾಪಕ ಎಂ. ಮಹೇಶಬಾಬು, ಮೂಕಾಂಬಿಕಾ ಗ್ಯಾಸ್ ಏಜೆನ್ಸಿ ಮಾಲೀಕರಾದ ಶಿವಯೋಗಿ ಒಡೆಯರ, ಎಚ್.ಎಚ್. ರವಿಕುಮಾರ ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.
ಇಂದು ಪಂಜಿನ ಮೆರವಣಿಗೆ
ರಾಣಿಬೆನ್ನೂರು: ಬೆಂಗಳೂರಿನಲ್ಲಿ ನ. 17ರಂದು ನಡೆಯುವ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೆಂದ್ರ ಮೋದಿ ರ್ಯಾಲಿ ಬೆಂಬಲಿಸಿ ತಾಲೂಕಿನ ಸಮಸ್ತ ಜನತೆಯಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ನ. 13ರಂದು ಸಂಜೆ 6 ಗಂಟೆಗೆ ನಗರದ ಪಿಬಿ ರಸ್ತೆ ಪಕ್ಕದಲ್ಲಿರುವ ಕೆಇಬಿ ಗಣೇಶ ದೇವಸ್ಥಾನದಿಂದ-ದೊಡ್ಡಪೇಟೆಯ ಬಸವೇಶ್ವರ ದೇವಸ್ಥಾನದ ವರೆಗೆ ಪಂಜಿನ ಮೆರವಣಿಗೆ ನಡೆಸಲಾಗುವುದು ಎಂದು ತಾಲೂಕು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಕಿರಣಕುಮಾರ ಅಂಗಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಲೂಕು ಬಿಜೆಪಿಗೆ ಶಿವಪ್ಪ, ಬಾಕಳೆ ಆಯ್ಕೆ
ರಾಣಿಬೆನ್ನೂರು: ತಾಲೂಕು ಬಿಜೆಪಿ ಮುಖಂಡರಾದ ಶಿವಪ್ಪ ಪುಟ್ಟಪ್ಪ ಕಂಬಳಿ ಅವರನ್ನು ಬಿಜೆಪಿ ತಾಲೂಕು ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷರಾಗಿ ಹಾಗೂ ರಾಜೇಂದ್ರ ಬಾಕಳೆ ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಿದ್ದಾಗಿ ಬಿಜೆಪಿ ಜಿಲ್ಲಾಧ್ಯಕ್ಷ ಭೋಜರಾಜ ಕರೂದಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಶಿವಪ್ಪ ಕಂಬಳಿ ಹಾಗೂ ರಾಜೇಂದ್ರ ಬಾಕಳೆ ಅವರನ್ನು ತಾಲೂಕು ಬಿಜೆಪಿ ಅಧ್ಯಕ್ಷ ಮಂಜುನಾಥ ಓಲೇಕಾರ, ಜಿಲ್ಲಾ ಉಪಾಧ್ಯಕ್ಷ ಡಾ ಬಸವರಾಜ ಕೇಲಗಾರ, ಬಸವರಾಜ ಲಕ್ಷ್ಮೆಶ್ವರ, ಸಂಕಪ್ಪ ಮಾರನಾಳ, ರಾಜಣ್ಣ ಸುರಳಿಕೇರಿಮಠ ಅಭಿನಂದಿಸಿದ್ದಾರೆ.