ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಗಾಂಜಾ ವಶ, ಆರೋಪಿ ಸೆರೆ

Lingaraj Badiger
Updated On : 13 Nov 2013, 10:42 am

ಬ್ಯಾಡಗಿ: ಜಮೀನಿನಲ್ಲಿ ಅಕ್ರಮವಾಗಿ ಬೆಳೆಸಿದ್ದ ರು. 2 ಲಕ್ಷ ಮೌಲ್ಯದ ಗಾಂಜಾ ಗಿಡಗಳನ್ನು ಮಾರಾಟ ಮಾಡಲು ಯತ್ನಿಸಿದ ಮಾಸಣಗಿ ಗ್ರಾಮದ ನಂದಯ್ಯ ಶಿವಮೂರ್ತೆಯ್ಯ ಸಾಲಿಮಠ ಎಂಬಾತನನ್ನು ಸ್ಥಳೀಯ ಪೊಲೀಸರು ಸೋಮವಾರ ತಡರಾತ್ರಿ ಮಾಲು ಸಮೇತ ಬಂಧಿಸಿದ್ದಾರೆ.
ಮಾಸಣಗಿ ಗ್ರಾಮದ ರಿ.ಸ.ನಂ. 173ರಲ್ಲಿ ಪಂಚಾಕ್ಷರಯ್ಯ ಪುಟ್ಟಯ್ಯ ಗೊಲ್ಲರಹಳ್ಳಿಮಠ ಎಂಬುವರಿಗೆ ಸೇರಿದ ಜಮೀನನ್ನು ಲಾವಣಿ ರೂಪದಲ್ಲಿ ಪಡೆದು, ಅಕ್ರಮವಾಗಿ ಗಾಂಜಾ ಗಿಡ ಬೆಳೆಸಿದ್ದ. ಎಸ್ಪಿ ಶಶಿಕುಮಾರ, ಹೆಚ್ಚುವರಿ ಎಸ್ಪಿ ಜಂಗಮಯ್ಯ, ಡಿವೈಎಸ್ಪಿ ಗೋಪಾಲ ಬ್ಯಾಕೋಡ, ಸಿಪಿಐ ಹಾಲಮೂರ್ತಿ ರಾವ್ ಅವರ ಮಾರ್ಗದರ್ಶನದಲ್ಲಿ ದಾಳಿ ನಡೆಸಿದ ಪಿಎಸ್‌ಐಗಳಾದ ಗಿರೀಶ್ ಮತ್ತು ಮಹಾಂತೇಶ್ (ಅಪರಾಧ) ಮೂರು ಚೀಲಗಳಲ್ಲಿದ್ದ 20 ಕೆಜಿ ಗಾಂಜಾ ಸಮೇತ ಆರೋಪಿಯನ್ನು ಬಂಧಿಸಿದ್ದಾರೆ.
ತಾಲೂಕಿನ ಕೆಲವು ಹಳ್ಳಿಗಳಲ್ಲಿ ಗಾಂಜಾ ಮಾರಾಟ ಜಾಲ ವಿಸ್ತೃತವಾಗಿ ಹರಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಮುಗ್ಧ ರೈತರಿಗೆ ಆಮಿಷವೊಡ್ಡಿ, ಗಾಂಜಾ ಬೀಜಗಳನ್ನು ನೀಡಿ, ಸೊಂಪಾಗಿ ಬೆಳೆದ ಮೇಲೆ ಅಕ್ರಮವಾಗಿ ಕಿತ್ತು ಮಾರಾಟ ಮಾಡಲಾಗುತ್ತಿದೆ. ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸರನ್ನು ನಿಯೋಜಿಸಿದ್ದು, ಇನ್ನಷ್ಟು ಆರೋಪಿಗಳು ಬಲೆಗೆ ಬೀಳುವ ಸಾಧ್ಯತೆ ಇದೆ. ಎಎಸ್‌ಐ ಎನ್.ಎಚ್. ಹೊಸೂರ, ರಾಜು ಗೊಂದಿ, ಪೂಜಾರ, ಗಡಿಯಪ್ಪಗೌಡ್ರ, ಎಸ್.ಎಂ. ಕರೇಕಲ್ಲ ದಾಳಿಯಲ್ಲಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement