ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಡೇ ಕೇರ್ ಸಂಸ್ಕೃತಿ ಬೇಡ

Mainashree
Updated On : 15 Nov 2013, 11:21 am

ಕನ್ನಡಪ್ರಭ ವಾರ್ತೆ, ಬ್ಯಾಡಗಿ, ನ. 14
ಮಕ್ಕಳಲ್ಲಿರುವ ಮನೋಬಲವನ್ನು ಕುಗ್ಗಿಸಿ ಶೈಕ್ಷಣಿಕ ದೌರ್ಬಲ್ಯ ಹಾಗೂ ಭಾವಾನಾತ್ಮಕ ಸಂಬಂಧಗಳಿಗೆ ಕಾರಣವಾಗಲಿರುವ ಡೇಕೇರ್ ಸಂಸ್ಕೃತಿಯನ್ನು ತಿರಸ್ಕರಿಸುವಂತೆ ಯೂರೋಕಿಡ್ ಶಾಲೆಯ ಮುಖ್ಯ ಶಿಕ್ಷಕಿ ಭಾರತಿ ಕಲ್ಕಣಿ ಪಾಲಕರಿಗೆ ಕರೆ ನೀಡಿದರು.
ಸ್ಥಳೀಯ ಮರುಳಸಿದ್ಧೇಶ್ವರ ಅಂಗವಿಕಲ ಮಕ್ಕಳ ಶಾಲೆಯಲ್ಲಿ ಯೂರೋಕಿಡ್ ಪ್ರಿಸ್ಕೂಲ್ ಆದರ್ಶ ಶಿಕ್ಷಣ ಸಂಸ್ಥೆ ಆಶ್ರಯದಲ್ಲಿ ಮಕ್ಕಳ ದಿನಾಚರಣೆ ಹಾಗೂ ಚಾರಿಟಿ ಡೇ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬೆಳೆಯುತ್ತಿರುವ ನಾಗರಿಕತೆಯಿಂದಾಗಿ ಸಮಾಜದಲ್ಲಿ ಮಾನವೀಯ ಮೌಲ್ಯಗಳು ನಶಿಸುತ್ತಿವೆ. ಹಾಸ್ಟೆಲ್ ಸಂಸ್ಕೃತಿಯಲ್ಲಿ ಬೆಳೆದ ಮಕ್ಕಳು ಉನ್ನತ ಶಿಕ್ಷಣ ಕೊಡಿಸಿದಂತಹ ಪಾಲಕರನ್ನೇ ಅನಾಥಾಶ್ರಮಗಳಲ್ಲಿ ಕಳೆಯುವಂತೆ ಮಾಡುತ್ತಿದ್ದಾರೆ. ಇದರಿಂದ ಜೀವನದ ಕೊನೆಯ ಕ್ಷಣಗಳನ್ನು ಮಕ್ಕಳ ಆಸರೆಯಲ್ಲಿ ಕಳೆಯಬೇಕಾದ ಪಾಲಕರು ಗೊತ್ತು ಗುರಿಯಿಲ್ಲದ ಹಾಸಿಗೆ ಮೇಲೆ ಕಳೆಯುವಂತಾಗಿದೆ ಎಂದರು.
ದಾನವೇ ಧರ್ಮದ ಮೂಲವಾಗಬೇಕು. ಒಬ್ಬರು ಇನ್ನೊಬ್ಬರಿಗೆ ಸಹಾಯ ಹಸ್ತ ಚಾಚುವುದು ಮನುಷ್ಯ ಸಂಸ್ಕೃತಿ. ಅದು ವೈಯಕ್ತಿಕ ಘನತೆಯನ್ನೂ ಹೆಚ್ಚಿಸಲಿದೆ. ಮಕ್ಕಳೇ ದೇಶದ ಆಸ್ತಿ ಎಂದು ನಂಬಿದ್ದ ಮತ್ತು ಅವರ ಶಕ್ತಿಯನ್ನು ಅರಿತಿದ್ದ ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ, ಪತ್ರಗಳನ್ನು ಬರೆಯುವ ಮೂಲಕವೇ ತಮ್ಮ ಮಗಳು ಇಂದಿರಾರನ್ನು ದೇಶದ ಸಮರ್ಥ ಪ್ರಧಾನಿಯನ್ನಾಗಿ ರೂಪಿಸಿದರು. ಪಾಲಕರು ಮತ್ತು ಶಿಕ್ಷಕರು ಮಕ್ಕಳು ಶಕ್ತಿಯಾಗಿ ಹೊರಹೊಮ್ಮಲು ಭದ್ರ ಬುನಾದಿ ಹಾಕಬೇಕಿದೆ ಎಂದರು.
ಯೂರೋಕಿಡ್ ಪ್ರಿಸ್ಕೂಲ್‌ನ ಮಕ್ಕಳು ಮರುಳಸಿದ್ಧೇಶ್ವರ ಅಂಗವಿಕಲ ಮಕ್ಕಳ ಶಾಲೆಯ ವಿದ್ಯಾರ್ಥಿಗಳಿಗೆ ಹಾಲು, ಹಣ್ಣು ಮತ್ತು ಬೆಡ್‌ಶೀಟ್‌ಗಳನ್ನು ವಿತರಿಸಿದರು. ಪ್ರಾಚಾರ್ಯ ಎಂ.ಜಿ. ಹೊನ್ನತ್ತಿ, ಆದರ್ಶ ಶಿಕ್ಷಣ ಸಂಸ್ಥೆ ಎಸ್.ಎಂ. ಬಾರ್ಕಿ, ಶ್ವೇತಾ ಕಾಟೇನಹಳ್ಳಿ, ರೇಖಾ ಸುಣಗಾರ, ಸುಮಾ ಎಲಿ, ಮಹಾಂತೇಶ್ ಬೇವಿನಕಟ್ಟಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement