ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಸುದ್ದಿ ಸಂಕ್ಷೇಪ

Mainashree
Updated On : 15 Nov 2013, 11:21 am

ಉಚಿತ ತರಬೇತಿಗೆ ಅರ್ಜಿ
ಹಾವೇರಿ: ನಿರುದ್ಯೋಗಿ ಯುವಕ/ಯುವತಿಯರಿಗಾಗಿ ಹಾವೇರಿ ವಿಜಯಾ ಬ್ಯಾಂಕ್ ಸ್ವ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಕೌಶಲಾಭಿವೃದ್ಧಿ ತರಬೇತಿ ಹಮ್ಮಿಕೊಳ್ಳಲಾಗಿದೆ. ಅರ್ಹರಿಂದ ನ. 30ರೊಳಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಕಂಪ್ಯೂಟರ್ ಹಾರ್ಡ್‌ವೇರ್ ಮತ್ತು ನೆಟ್‌ವರ್ಕಿಂಗ್, ಗೃಹೋಪಯೋಗಿ ವಸ್ತುಗಳ ತಯಾರಿಕೆ, ಎಂಬ್ರಾಯ್ಡರಿ ಮತ್ತು ಫ್ಯಾಬ್ರಿಕ್ ಪೇಂಟಿಂಗ್, ಫೋಟೋಗ್ರಾಫಿ ಮತ್ತು ವಿಡಿಯೋಗ್ರಾಫಿ, ವಸ್ತ್ರವಿನ್ಯಾಸ, ಮೊಬೈಲ್ ರಿಪೇರಿ, ಬೇಸಿಕ್ ಕಂಪ್ಯೂಟರ್, ಟ್ರ್ಯಾಕ್ಟರ್ ರಿಪೇರಿ, ಕೋಳಿ ಸಾಕಾಣಿಕೆ ಹಾಗೂ ಹೈನುಗಾರಿಕೆ ತರಬೇತಿ ನೀಡಲಾಗುವುದು. ಕನ್ನಡ ಓದಲು, ಬರೆಯಲು ಬರಬೇಕು. 18ರಿಂದ 35 ವಯೋವುತಿಯಲ್ಲಿರಬೇಕು. ತಾಂತ್ರಿಕತೆಯ ಪ್ರಾಥಮಿಕ ಜ್ಞಾನ ಹೊಂದಿರಬೇಕು. ತರಬೇತಿಗೆ ಶುಲ್ಕವಿಲ್ಲ. ಉಚಿತ ಊಟ, ವಸತಿ ಸೌಲಭ್ಯ ಇದೆ. ಆಸಕ್ತರು ಭರ್ತಿ ಮಾಡಿದ ಅರ್ಜಿ ಜತೆಗೆ ರು. 5ರ ಅಂಚೆ ಚೀಟಿ ಲಗತ್ತಿಸಿದ ಸ್ವ ವಿಳಾಸದ ಲಕೋಟೆ ಇಟ್ಟು, ನಿರ್ದೇಶಕರು, ವಿಜಯಾ ಬ್ಯಾಂಕ್ ಸ್ವ ಉದ್ಯೋಗ ತರಬೇತಿ ಸಂಸ್ಥೆ, ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣದ ಹಿಂಭಾಗ, ದೇವಗಿರಿ, ಹಾವೇರಿ, ದೂ. 08375-249160- ಇಲ್ಲಿಗೆ ಅರ್ಜಿ ಸಲ್ಲಿಸಬೇಕು.
ಒಲಂಪಿಯಾಡ್‌ಗೆ ಆಯ್ಕೆ
ಹಾನಗಲ್ಲ: ತಾಲೂಕಿನ ಮಾರನಬೀಡ ಗ್ರಾಮದ ಶ್ರೀ ಮುದಕಪ್ಪ ಬಸಪ್ಪ ಕರಿಯಪ್ಪನವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 6ನೇ ತರಗತಿ ವಿದ್ಯಾರ್ಥಿ ಚೇತನ್ ಗದಿಗೆಪ್ಪ ಚಂಗಳೆಮ್ಮನವರ ತಾಲೂಕು ಮಟ್ಟದ ಒಲಂಪಿಯಾಡ್ ಪರೀಕ್ಷೆಗಳಲ್ಲಿ ಜಿಲ್ಲಾ ಮಟ್ಟದ ಪರೀಕ್ಷೆಗೆ ಆಯ್ಕೆಯಾಗಿದ್ದಾನೆ.
ಸಹದೇವಪ್ಪ ಕಾಳೆ ನಿಧನ
ಶಿಗ್ಗಾಂವಿ:  ಪಟ್ಟಣದ ಅಂಬೇಡ್ಕರ್ ನಗರದ ನಿವಾಸಿ ಸಹದೇವಪ್ಪ ಮಲ್ಲಪ್ಪ ಕಾಳೆ (50) ಬುಧವಾರ ನಿಧನರಾದರು. ಅವರಿಗೆ ಪತ್ನಿ, ಒಬ್ಬ ಪುತ್ರಿ, ಓರ್ವ ಪುತ್ರ ಇದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement