ಇಂದು ಸ್ವಾಭಿಮಾನಿಕನ್ನಡ ಸಮಾವೇಶ
ರಾಣಿಬೆನ್ನೂರು: 58ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ಆಶ್ರಯದಲ್ಲಿ ನ. 16ರಂದು ಬೆಳಗ್ಗೆ 11 ಗಂಟೆಗೆ ತಾಲೂಕಿನ ತುಮ್ಮಿನಕಟ್ಟಿ ಗ್ರಾಮದ ಸಂಗನಬಸವೇಶ್ವರ ಪಪೂ ಕಾಲೇಜು ಆವರಣದಲ್ಲಿ ಸ್ವಾಭಿಮಾನಿ ಕನ್ನಡಿಗರ ತಾಲೂಕು ಸಮಾವೇಶ ನಡೆಯಲಿದೆ. ಲಿಂಗದಹಳ್ಳಿ ಹಿರೇಮಠದ ಪಟ್ಟಾಧ್ಯಕ್ಷ ವೀರಭದ್ರ ಶಿವಾಚಾರ್ಯ ಸ್ವಾಮಿಗಳು ಸಾನ್ನಿಧ್ಯ ವಹಿಸುವರು. ಸ್ವಾಭಿಮಾನಿ ಕರವೇ ರಾಜ್ಯಾಧ್ಯಕ್ಷ ನಿತ್ಯಾನಂದ ಜಿ. ಕುಂದಾಪುರ ಅಧ್ಯಕ್ಷತೆ ವಹಿಸುವರು. ಶಾಸಕ ಕೆ.ಬಿ. ಕೋಳಿವಾಡ ಉದ್ಘಾಟಿಸುವರು. ಗ್ರಾಪಂ ಅಧ್ಯಕ್ಷೆ ರತ್ನಮ್ಮ ತರೀಕೆರಿ, ಜಿಪಂ ಸದಸ್ಯ ಸಂತೋಷ ಪಾಟೀಲ, ತಾಪಂ ಮಾಜಿ ಅಧ್ಯಕ್ಷ ಬಸವರಾಜ ಕೇಲಗಾರ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕ ನವೀನ ಶೆಟ್ಟಿ, ತುಮ್ಮಿನಕಟ್ಟಿ ಪಶು ಆಸ್ಪತ್ರೆ ವೈದ್ಯಾಧಿಕಾರಿ ರಾಘವೇಂದ್ರ ಕಿತ್ತೂರ, ಸಾರ್ವಜನಿಕ ಆಸ್ಪತ್ರೆ ಆರೋಗ್ಯಾಧಿಕಾರಿ ಡಾ ಲಕ್ಷ್ಮೀಪತಿ, ತಾಪಂ ಇಒ ಕೆ. ಕೃಷ್ಣಮೂರ್ತಿ, ಕನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಕೆ.ಸಿ. ನಾಗರಜ್ಜಿ, ಸ್ವಾಕರವೇ ದಾವಣಗೆರೆ ಜಿಲ್ಲಾಧ್ಯಕ್ಷ ಚನ್ನಬಸಪ್ಪ ಎಂ., ಹಾವೇರಿ ಅಧ್ಯಕ್ಷ ರವಿ ಮೂಲಿಮನಿ, ಜಗಳೂರು ತಾಲೂಕು ಅಧ್ಯಕ್ಷ ಶೇಖರ ನಾಯ್ಕ ಎಚ್., ಹಾವೇರಿ ಜಿಲ್ಲಾ ಮಹಿಳಾ ಅಧ್ಯಕ್ಷೆ ಚಂದ್ರಕಲಾ ಹೆಗ್ಗಪ್ಪನವರ, ತಾಲೂಕು ಅಧ್ಯಕ್ಷ ಚಂದ್ರು ಕಡ್ಲಿಗೊಂದಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದಾರೂಢ ಗುರಂ, ತುಮ್ಮಿನಕಟ್ಟಿ ಗ್ರಾಮ ಘಟಕದ ಅಧ್ಯಕ್ಷ ಮಡಿವಾಳಪ್ಪ ಮಡಿವಾಳರ, ಪಿಡಿಒ ಬಿ.ಎಸ್. ಪಾಟೀಲ ಆಗಮಿಸುವರು. ಸಮಾವೇಶದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಶಿವನಗೌಡ ಭ. ಮರಿಗೌಡ್ರ, ಕುಸ್ತಿಪಟು ಕೃಷ್ಣಪ್ಪ ರಾ. ಜಾಧವ, ಪೊಲೀಸ್ ಪೇದೆ ಶಿವಬಸವಯ್ಯ ಶಿ. ಕಬ್ಬಿಣಕಂತಿಮಠ, ಕನ್ನಡದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿರುವ ಸುಮಾ ಕೆಂಬೆಕೊಪ್ಪದ, ಹಿರಿಯ ಪುರವಂತಿಕರಾದ ಮಹದೇವಪ್ಪ ಅಟವಾಳಗಿ, ನಂದೀಶ ಅಟವಾಳಗಿ ಅವರನ್ನು ಸನ್ಮಾನಿಸಲಾಗುವುದು.
ನಾಳೆ ಗೌರಿ ಹುಣ್ಣಿಮೆ
ರಾಣಿಬೆನ್ನೂರು: ಹೊನ್ನಾಳಿ ಚನ್ನಮಲ್ಲಿಕಾರ್ಜುನ ಸ್ವಾಮಿ ಸಂಸ್ಕೃತಿ ಪ್ರಸಾರ ಪರಿಷತ್ತು ಮತ್ತು ಚನ್ನೇಶ್ವರ ಮಠದ ಆಡಳಿತ ಮಂಡಳಿ ಆಶ್ರಯದಲ್ಲಿ ಮೃತ್ಯುಂಜಯ ನಗರದಲ್ಲಿರುವ ಜಗದ್ಗುರು ವಾಗೀಶ ಪಂಡಿತಾರಾಧ್ಯ ಸಮುದಾಯ ಭವನದಲ್ಲಿ ನ. 17ರಂದು ಗೌರಿಹುಣ್ಣಿಮೆ ನಿಮಿತ್ತ ರಂಭಾಪುರಿ ಜಗದ್ಗುರು ವೀರ ಗಂಗಾಧರ ಶಿವಾಚಾರ್ಯರ ಸ್ಮರಣೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಹೊನ್ನಾಳಿ ಹಿರೇಕಲ್ಮಠದ ಒಡೆಯರ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಸಾನ್ನಿಧ್ಯ ವಹಿಸುವರು. ಕಾಮನಾಳು ಹಿರೇಮಠದ ಸಿದ್ದಪಾದ ಶಿವಾಚಾರ್ಯರು ಉಪದೇಶಾಮೃತ ನೀಡುವರು. ಗದುಗಿನ ವೇ. ಶಿವಲಿಂಗಯ್ಯ ಶಾಸ್ತ್ರಿಗಳು ಪ್ರವಚನ ನೀಡುವರು. ಬ್ಯಾಡಗಿ ತಹಸೀಲ್ದಾರ್ ಶಿವಶಂಕರ ನಾಯಕ, ಹುಬ್ಬಳ್ಳಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಆಡಳಿತ ಮಂಡಳಿಯ ನಿರ್ದೇಶಕ ಬಿ.ಎಸ್. ಪಟ್ಟಣಶೆಟ್ಟಿ, ಕಲಘಟಗಿಯ ವೀರಣ್ಣ ಕುಬಸದ, ಕದರಮಂಡಲಗಿಯ ಶಶಿಧರ ಹಿರೇಮಠ ಆಗಮಿಸುವರು.