ಮೋದಿ ಬೆಂಬಲಿಸಿ ಪಂಜಿನ ಮೆರವಣಿಗೆ
ಹಾನಗಲ್ಲ: ಬೆಂಗಳೂರಿನಲ್ಲಿ ನಡೆಯುವ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಭಾರತ ಗೆಲ್ಲಿಸಿ ಅಭಿಯಾನದ ಕುರಿತು ಜನರಿಗೆ ಅರಿವು ಮೂಡಿಸಲು ಬಿಜೆಪಿ ತಾಲೂಕು ಯುವಮೋರ್ಚಾ ಪದಾಧಿಕಾರಿಗಳು, ಕಾರ್ಯಕರ್ತರು ಪಟ್ಟಣದಲ್ಲಿ ಪಂಜಿನ ಮೆರವಣಿಗೆ ನಡೆಸಿದರು.
ಕನಕದಾಸ ವೃತ್ತದಲ್ಲಿ ಹಾವೇರಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಭೋಜರಾಜ ಕರೂದಿ ಮೆರವಣಿಗೆಗೆ ಚಾಲನೆ ನೀಡಿದರು. ಕಾರ್ಯಕರ್ತರು ಉತ್ಸಾಹದಿಂದ ಪಾಲ್ಗೊಂಡಿದ್ದರು. ತಡಸ-ಗೊಂದಿ ರಸ್ತೆ, ರಂಜನಿ ಚಿತ್ರಮಂದಿರದಿಂದ ಕಿತ್ತೂರು ಚನ್ನಮ್ಮ ರಸ್ತೆಯಲ್ಲಿ ನಡೆದ ಮೆರವಣಿಗೆ ತಾರಕೇಶ್ವರ ದೇವಸ್ಥಾನ ತಲುಪಿತು. ಮೆರವಣಿಗೆಯಲ್ಲಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿದ್ಧರಾಜ ಕಲಕೋಟಿ, ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಪ್ರದೀಪ ಮಳ್ಳೂರ, ಜಿಪಂ ಸದಸ್ಯ ಬಸವರಾಜ ಹಾದಿಮನಿ, ಮೋರ್ಚಾ ತಾಲೂಕು ಅಧ್ಯಕ್ಷ ಈಶ್ವರ ನಿಂಗೋಜಿ, ತಾಲೂಕು ಬಿಜೆಪಿ ಅಧ್ಯಕ್ಷ ವೀರಣ್ಣ ನಿಂಬಣ್ಣನವರ್, ರವಿಚಂದ್ರ ಪುರೋಹಿತ, ಮಹೇಶ ಕಾಗಿನೆಲ್ಲಿ, ಗೀತಾ ಪೂಜಾರ, ತಾಲೂಕು ಮಹಿಳಾ ಮೋರ್ಚಾ ಅಧ್ಯಕ್ಷೆ ಗೌರಮ್ಮ ಪೂಜಾರ, ತಾಲೂಕು ಮೈನಾರಿಟಿ ಸೆಲ್ ಅಧ್ಯಕ್ಷ ಡಾ ಇಸಾಕ್ ಅಹ್ಮದ ಹುದ್ದಾರ, ಮುಖಂಡರಾದ ಬಿ.ಎಸ್. ಕುಲಕರ್ಣಿ, ವಿನಯ ಬಂಕನಾಳ, ಸಂಜಯ ಬೇದ್ರೆ, ಪ್ರದೀಪ ಸುಗಂಧಿ, ಪ್ರವೀಣ ಸುಲಾಖೆ, ಚೇತನ ಬೆಂಡಿಗೇರಿ, ನಿಜಲಿಂಗಪ್ಪ ಮುದಿಯಣ್ಣನವರ, ಎಸ್.ಆರ್. ಪಾಟೀಲ, ಅಶೋಕ ಈಳಿಗೇರ, ರಾಮಣ್ಣ ಅಲ್ಲಾಪುರ ಇದ್ದರು.